ತುಮಕೂರು: ಗೃಹ ಸಚಿವ ಜಿ.ಪರಮೇಶ್ವರ್ (G.Parameshwar) ಅವರ ಹುಟ್ಟುಹಬ್ಬಕ್ಕೆ (Birthday) ಅಭಿಮಾನಿಗಳೊಬ್ಬರು ನಾಟಿ ಹಸುವಿನ ಕರುವನ್ನು (Calf) ಉಡುಗೊರೆ (Gift) ನೀಡಿ ಗಮನ ಸೆಳೆದಿದ್ದಾರೆ.
ಕೊರಟಗೆರೆ (Koratagere) ತಾಲೂಕಿನ ತೋವಿನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಮ್ಮ ರಾಮಕೃಷ್ಣ ದಂಪತಿ ಕರುವಿನ ಗಿಫ್ಟ್ ಕೊಟ್ಟಿದ್ದಾರೆ. ಕರು ಸ್ವೀಕರಿಸಿದ ಜಿ.ಪರಮೇಶ್ವರ್ ಪತ್ನಿ ಕನ್ನಿಕಾ, ಕರುವಿಗೆ ಹೂವಿನ ಹಾರ ಹಾಕಿ, ಧಾನ್ಯ ತಿನ್ನಿಸಿ, ಲಕ್ಷ್ಮಿ ಎಂದು ಸಂಬೋಧಿಸಿ ಮಂಗಳಾರತಿ ಬೆಳಗಿಸಿ ಪೂಜೆ ಮಾಡಿದ್ದಾರೆ. ಇದನ್ನೂ ಓದಿ: ಸೌಜನ್ಯ ಪ್ರಕರಣದ ರಹಸ್ಯಗಳನ್ನು ಬಿಚ್ಚಿಟ್ರೆ ನನ್ನನ್ನೂ ಸಾಯಿಸ್ಬೋದು: ವಸಂತ ಬಂಗೇರ
ಪರಮೇಶ್ವರ್ ದಂಪತಿ ಗೋ ಪೂಜೆ ಮಾಡುವುದು ಇದೇ ಮೊದಲಲ್ಲ. ಕಳೆದ ಜನವರಿಯಲ್ಲಿ ಚಿಕ್ಕತೊಟ್ಟಲುಕೆರೆ ಮಠದಲ್ಲಿ ನಡೆದ ದನಗಳ ಜಾತ್ರೆಯಲ್ಲಿ ಗೋ ಪೂಜೆ ಮಾಡಿ ಗಮನ ಸೆಳೆದಿದ್ದರು. ರಾಜ್ಯ ಕಾಂಗ್ರೆಸ್ ಸರ್ಕಾರ ಗೋ ಹತ್ಯೆ ನಿಷೇಧ ಕಾನೂನು ರದ್ದು ಮಾಡಲು ಚಿಂತಿಸಿರುವ ಈ ವೇಳೆ ಪರಮೇಶ್ವರ್ ದಂಪತಿ ಗೋ ಪೂಜೆ ಮಾಡುವುದು ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ:ಸೊಂಟದ ನೋವು ಬಿಟ್ರೆ ಬೇರೆ ಏನೂ ಸಮಸ್ಯೆ ಆಗಿಲ್ಲ: ವೃಕ್ಷ ಮಾತೆಯ ಹೆಲ್ತ್ ಅಪ್ಡೇಟ್
Web Stories