ಮಂಡ್ಯ: ಜೈಂಟ್ ವ್ಹೀಲ್ ಆಟ ಆಡುವಾಗ ಮಹಾದುರಂತವೊಂದು ಮಂಡ್ಯದ (Mandya) ಶ್ರೀರಂಗಪಟ್ಟಣದಲ್ಲಿ ನಡೆದು ಹೋಗಿದ್ದು, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಯಿಂಟ್ ವೀಲ್ ಆಟಿಕೆ ಮಾಲೀಕ ಹಾಗೂ ಇಬ್ಬರು ಅಧಿಕಾರಿಗಳ ಮೇಲೆ ಎಫ್.ಐ.ಆರ್ ದಾಖಲಾಗಿದೆ.
ಶನಿವಾರ ರಾತ್ರಿ ರಥಸಪ್ತಮಿ ಹಿನ್ನಲೆ ಶ್ರೀರಂಗನಾಥ ಬ್ರಹ್ಮೋರಥೋತ್ಸ ಜಾತ್ರೆವಿತ್ತು. ಆ ವೇಳೆ ರಂಗನಾಥ ಮೈದಾನದಲ್ಲಿ ರಮೇಶ್ ಎಂಬಾತ ಜೈಂಟ್ ವ್ಹೀಲ್ ಆಟಿಕೆ ನಡೆಸ್ತಿದ್ದ. 50 ರೂ. ಕೊಟ್ಟು ಜೈಂಟ್ ವ್ಹೀಲ್ ಏರಿದ್ದ 14 ವರ್ಷದ ಶ್ರೀವಿದ್ಯಾ ಎಂಬ ಬಾಲಕಿಯ (Girl) ತಲೆ ಕೂದಲು ವ್ಹೀಲ್ ಒಂದಕ್ಕೆ ಸಿಕ್ಕಿಕೊಂಡಿದೆ. ಆದ್ರೆ ಆ ಜೈಂಟ್ ವ್ಹೀಲ್ ಅನ್ನು ಕೂದಲು ಸಿಕ್ಕ ತಕ್ಷಣ ನಿಲ್ಲಿಸದ ಕಾರಣ ತಲೆಕೂದಲು ಸಮೇತ ತಲೆ ಚರ್ಮವೇ ಬೇರ್ಪಟ್ಟಿತ್ತು. ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನ ಸದ್ಯ ಮೈಸೂರಿನ (Mysuru) ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
Advertisement
Advertisement
ಸದ್ಯ ಕುಟುಂಬಸ್ಥರ ದೂರಿನನ್ವಯ ಶ್ರೀರಂಗಪಟ್ಟಣ ಪೊಲೀಸರು ಇದೀಗ ಮೂವರ ಮೇಲೆ ಎಫ್.ಐ.ಆರ್ ದಾಖಲಿಸಿದ್ದಾರೆ. ಈ ದುರಂತಕ್ಕೆ ಕಾರಣವಾದ ಇಬ್ಬರು ಅಧಿಕಾರಿಗಳು ಈ ಕೇಸ್‌ನಲ್ಲಿ ಆರೋಪಿಯಾಗಿದ್ದಾರೆ. ಇದನ್ನೂ ಓದಿ: ಕಾರು ಡಿಕ್ಕಿಯಾಗಿ 30 ಕುರಿಗಳು ಸಾವು- ಮೂವರಿಗೆ ಗಾಯ
Advertisement
Advertisement
ಜೈಂಟ್ ವ್ಹೀಲ್ ಆಟದಲ್ಲಿ ಮುಂಜಾಗ್ರತೆ ವಹಿಸದ ಮಾಲೀಕ ರಮೇಶ್ ಹಾಗೂ ಮುಂಜಾಗ್ರತ ಕ್ರಮಗಳನ್ನು ಪರಿಶೀಲಿಸದೇ, ತನಿಖೆ ನಡೆಸದೆ ಅನುಮತಿ ನೀಡಿ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ರಂಗನಾಥಸ್ವಾಮಿ ದೇಗುಲ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಮ್ಮೇಗೌಡ ಹಾಗೂ ಪುರಸಭೆ ಮುಖ್ಯಾಧಿಕಾರಿ ಸಂದೀಪ್ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ನನ್ನ ಮೇಲೆ ಷಡ್ಯಂತ್ರ, ಷಂಡರಂತೆ ರಾಜಕೀಯ ಮಾಡಿದ್ದಾನೆ – ಮಹಾನಾಯಕನ ವಿರುದ್ಧ ಜಾರಕಿಹೊಳಿ ಕಿಡಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k