ಬೆಂಗಳೂರು: ಅಯೋಧ್ಯೆ ಶ್ರೀರಾಮ ಮಂದಿರದ (Ram Mandir) ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ. ಈ ಅದ್ದೂರಿ ರಾಮೋತ್ಸವಕ್ಕೆ ದೇಶದೆಲ್ಲೆಡೆ ಭರದ ಸಿದ್ದತೆಗಳು ಸಾಗುತ್ತಿದ್ದು, ಕರ್ನಾಟಕದಿಂದ (Karnataka) ಶ್ರೀರಾಮನಿಗೆ ಅಳಿಲು (Squarrel) ಸೇವೆ ಸಲ್ಲಲಿದೆ.
ಹೌದು. ಅಯೋಧ್ಯೆಯ ಮುಖ್ಯ ರೈಲ್ವೆ ನಿಲ್ದಾಣವಾದ ಅಯೋಧ್ಯೆಧಾಮದ ಮುಖ್ಯ ದ್ವಾರದಲ್ಲಿ ಬೆಂಗಳೂರಿನ ಗಿನ್ನಿಸ್ ವರ್ಲ್ಡ್ ಚಿತ್ರಶಿಲ್ಪಿ ಕಲ್ಯಾಣ್ ಎಸ್ ರಾಥೋಡ್ ಅವರು ನಿರ್ಮಿಸಿದ ಅಳಿಲು ಮೂರ್ತಿಯನ್ನು ಇಡಲಾಗುತ್ತಿದೆ. ಇದನ್ನೂ ಓದಿ: ಜ.22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ – ವಿಶ್ವದ ದೊಡ್ಡಣ್ಣ ಅಮೆರಿಕದಲ್ಲೂ ನೇರಪ್ರಸಾರ
ಭಾರತೀಯ ರೈಲ್ವೆ ಇಲಾಖೆಯಿಂದ ಗುತ್ತಿಗೆ ಪಡೆದು ಕಲ್ಯಾಣ್ ಎಸ್ ರಾಥೋಡ್ ಈ ಅಳಿಲು ಪುತ್ಥಳಿಯನ್ನು ನಿರ್ಮಿಸಿದ್ದಾರೆ. ಸುಮಾರು ಎರಡೂವರೆ ಟನ್ ಕಾರ್ಟನ್ ಸ್ಟೀಲ್ ಬಳಸಿ,15 ಅಡಿ ಎತ್ತರ, 8 ಅಡಿ ಅಗಲ,13 ಅಡಿ ಉದ್ದದಲ್ಲಿ ಈ ಬೃಹತ್ ಅಳಿಲಿನ ಪುತ್ಥಳಿ ನಿರ್ಮಾಣವಾಗಿದೆ.
ಕಾರ್ಟನ್ ಸ್ಟೀಲ್ ಬಳಸಿರುವುದರಿಂದ ಈ ಮೂರ್ತಿ ತುಕ್ಕು ಹಿಡಿಯುವ ಸಾಧ್ಯತೆ ಕಡಿಮೆ. ಅಳಿಲು ಪುತ್ಥಳಿ ಈಗ ಟ್ರಕ್ ನಲ್ಲಿ ಅಯೋಧ್ಯೆಯತ್ತ ಹೊರಟ್ಟಿದ್ದು, ಜ.11 ರಂದು ಅಯೋಧ್ಯೆಗೆ ತಲುಪಲಿದೆ.