ನವದೆಹಲಿ: ದೇಶದಿಂದ ನೀರವ್ ಮೋದಿ ಓಡಿ ಹೋಗಲು ಸಹಾಯ ಮಾಡಿದ್ದ ಬಿಜೆಪಿಯೇ ಇಂದು ಚುನಾವಣೆಗಾಗಿ ಆತನನನ್ನು ಬಂಧಿಸಿ ವಾಪಸ್ ಕರೆತರುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಹೇಳಿದ್ದಾರೆ.
ಲಂಡನ್‍ನಲ್ಲಿ ನೀರವ್ ಮೋದಿ ಬಂಧನದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಗುಲಾಮ್ ನಬಿ ಆಜಾದ್ ಮಾತನಾಡಿದ್ದು, ಬಿಜೆಪಿಯೇ ನೀರವ್ ಮೋದಿಗೆ ದೇಶ ಬಿಟ್ಟು ಓಡಿ ಹೋಗಲು ಸಹಾಯ ಮಾಡಿತ್ತು. ಆದರೆ ಇಂದು ಅದೇ ಬಿಜೆಪಿ ಚುನಾವಣೆಗಾಗಿ ನೀರವ್‍ನನ್ನು ಬಂಧಿಸಿ ವಾಪಸ್ ಕರೆತರುತ್ತಿದೆ. ಚುನಾವಣೆಯ ಬಳಿಕ ಮತ್ತೆ ನೀರವ್‍ನನ್ನು ವಾಪಸ್ ಕಳುಹಿಸುತ್ತಾರೆ ಎಂದು ಆರೋಪ ಮಾಡಿದರು.
Advertisement
Ghulam Nabi Azad, Congress on Nirav Modi arrested in London: They (BJP) had only helped him flee the country, now they are bringing him back. They are bringing him back for the elections, they will send him back after elections. pic.twitter.com/JNYGnJYlkP
— ANI (@ANI) March 20, 2019
Advertisement
ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚಿಸಿ ಇಂಗ್ಲೆಂಡಿನಲ್ಲಿ ತಲೆಮರೆಸಿಕೊಂಡಿದ್ದ ವಜ್ರ ಉದ್ಯಮಿ ನೀರವ್ ಮೋದಿಯನ್ನು ಬಂಧಿಸಲು ಭಾರತ ಸರ್ಕಾರ ಇಂಗ್ಲೆಂಡ್ ಸರ್ಕಾರದ ಜೊತೆ ಮಾತುಕತೆ ನಡೆಸಿತ್ತು. ಇದಾದ ಬಳಿಕ ಬ್ರಿಟನ್‍ನ ವೆಸ್ಟ್ ಮಿನ್‍ಸ್ಟರ್ ಕೋರ್ಟ್ ನೀರವ್ ಮೋದಿ ಬಂಧನಕ್ಕೆ ವಾರಂಟ್ ಜಾರಿ ಮಾಡಿತ್ತು. ವಾರಂಟ್ ಜಾರಿಯಾದ ಹಿನ್ನೆಲೆಯಲ್ಲಿ ಲಂಡನ್ ಪೊಲೀಸರು ನೀರವ್ ಮೋದಿಯನ್ನು ಬಂಧಿಸಿದ್ದರು.
Advertisement
48 ವಷದ ನೀರವ್ ಮೋದಿ ಕಳೆದ ವರ್ಷ ದೇಶ ಬಿಟ್ಟು ಪರಾರಿಯಾಗಿದ್ದರು. ಅದಕ್ಕೂ ಮುನ್ನವೇ ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ 13 ಸಾವಿರ ಕೋಟಿ ರೂ.ಗಳನ್ನು ನೀರವ್ ಪಾವತಿ ಮಾಡಬೇಕಿತ್ತು. ಇದನ್ನು ಓದಿ: ದೇಶ ಬಿಟ್ಟು ಪರಾರಿಯಾಗಿದ್ದ ನೀರವ್ ಮೋದಿ ಕೊನೆಗೂ ಅರೆಸ್ಟ್
Advertisement
ಲೋಕಸಭಾ ಚುನಾವಣೆಯ ಪ್ರಚಾರ ಭಾಷಣದಲ್ಲಿ ದೇಶದ ಜನರ ದುಡ್ಡನ್ನು ನೀರವ್ ಮೋದಿ ಸೇರಿ ದೇಶ ಬಿಟ್ಟು ಓಡಿ ಹೋಗಿರುವ ಕಳ್ಳರಿಗೆ ಮೋದಿ ನೀಡಿದ್ದಾರೆ. ಇವರೆಲ್ಲಪರಾರಿಯಾಗಲು ಮೋದಿಯೇ ಕಾರಣ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ಆರೋಪಿಸಿ ವಾಗ್ದಾಳಿ ನಡೆಸುತ್ತಿದ್ದರು. ವಿದೇಶ ಪ್ರವಾಸಕ್ಕೆ ಹೋಗಿ ರಾಜತಾಂತ್ರಿಕ ಸಂಬಂಧ ಬಹಳ ಗಟ್ಟಿಯಾಗಿದೆ ಎಂದು ಸರ್ಕಾರ ಹೇಳುತ್ತಿದ್ದರೂ ಪರಾರಿಯಾಗಿರುವ ಕಳ್ಳರನ್ನು ದೇಶಕ್ಕೆ ಕರೆತರುವಲ್ಲಿ ಬಿಜಪಿ ಸರ್ಕಾರ ವಿಫಲವಾಗಿದೆ ಎಂದು ಕೈ ನಾಯಕರು ಟೀಕಿಸುತ್ತಿದ್ದರು.