ಬೆಂಗಳೂರು: ಮುಂದಿನ ಆಗಸ್ಟ್ ತಿಂಗಳಲ್ಲೇ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಫಲಾನುಭವಿಗಳಿಗೆ 2 ಸಾವಿರ ರೂ. ಹಾಕೋದು ಖಚಿತ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಹೇಮಲತಾ ನಾಯಕ್ (Hemalatha Nayak) ಅವರು ಗೃಹಲಕ್ಷ್ಮಿ ಯೋಜನೆ ಕುರಿತು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಆಗಸ್ಟ್‌ನಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ 2 ಸಾವಿರ ರೂ. ಜಮೆ ಮಾಡಲಾಗುತ್ತದೆ ಅಂತ ಭರವಸೆ ನೀಡಿದರು. ಗೃಹಲಕ್ಷ್ಮಿ ಯೋಜನೆಗೆ 30 ಸಾವಿರ ಕೋಟಿ ಹಣ ಬೇಕೆಂದು ಅಂದಾಜಿಸಲಾಗಿದೆ. 2023-24ರ ಬಜೆಟ್‌ನಲ್ಲಿ ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು 17,500 ಕೋಟಿ ಅನುದಾನ ಒದಗಿಸಿದ್ದಾರೆ ಎಂದು ವಿವರಿಸಿದರು.
ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆ ನಾವು ಪ್ರಾರಂಭ ಮಾಡಿಲ್ಲ, ಹಾಗಾಗಿ ಸರ್ವರ್ ಸಮಸ್ಯೆ ವಿಷಯವೇ ಬರೋದಿಲ್ಲ. ಆ್ಯಪ್ ಕೂಡಾ ಬಿಡುಗಡೆ ಆಗಿಲ್ಲ. 2-3 ದಿನಗಳಲ್ಲಿ ಸುದ್ದಿಗೋಷ್ಠಿ ಮಾಡಿ ಅರ್ಜಿ ಸಲ್ಲಿಕೆಗೆ ದಿನಾಂಕ ಘೋಷಣೆ ಮಾಡ್ತೀವಿ. ಅಂದೇ ಆ್ಯಪ್ ಕೂಡ ರಿಲೀಸ್ ಮಾಡ್ತೀವಿ ಎಂದರು. ಇದನ್ನೂ ಓದಿ: ಚಂದ್ರಯಾನ-3 ಯಶಸ್ಸಿಗೆ ತಿರುಪತಿ ದೇವರಲ್ಲಿ ಪ್ರಾರ್ಥನೆ; ಇಸ್ರೋ ವಿಜ್ಞಾನಿಗಳ ನಡೆಗೆ ಪ್ರಗತಿಪರ ಚಿಂತಕರ ಖಂಡನೆ
ಆಗಸ್ಟ್ 16 ಅಥವಾ 17 ರಂದು ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ಹಾಕ್ತೀವಿ. ಮನೆ ಯಜಮಾನಿಗೆ ನಾವು 2 ಸಾವಿರ ರೂ. ಕೊಡ್ತಿದ್ದೇವೆ. ಕುಟುಂಬದ ಯಜಮಾನಿಗೆ ಯೋಜನೆ ಲಾಭ ಹೋಗುತ್ತೆ. ಯಾರ ಮನೆಯಲ್ಲೂ ಜಗಳ ತರಲು ಈ ಯೋಜನೆ ಕಾಂಗ್ರೆಸ್ ಮಾಡಿಲ್ಲ. ಬೆಲೆ ಏರಿಕೆಯಿಂದ ತತ್ತರಿಸಿದ ಮಹಿಳೆಯರಿಗೆ ಅನುಕೂಲ ಆಗಲು ಯೋಜನೆ ಜಾರಿ ಮಾಡಿದ್ವಿ. 4-5 ದಿನಗಳಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಚಾಲನೆ ಕೊಡಲಿದ್ದೇವೆ ಎಂದು ತಿಳಿಸಿದರು.
ನಾವು ಪ್ರಾರಂಭ ಮಾಡಿರೋ ಸಹಾಯವಾಣಿಗೆ ಅತಿ ಹೆಚ್ಚು ಮಾಹಿತಿ ಗೃಹಲಕ್ಷ್ಮಿ ಬಗ್ಗೆ ಜನ ಕೇಳ್ತಿದ್ದಾರೆ. ಹೀಗಾಗಿ ಗೃಹಲಕ್ಷ್ಮಿ ಯೋಜನೆಗೆ ಜನ ಉತ್ಸುಕರಾಗಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ವಿಧಾನಸೌಧದಲ್ಲಿ ನಮಾಜ್ ಮಾಡೋಕೆ ಅನುಮತಿ ಕೊಟ್ರೆ ಕರ್ನಾಟಕವೇ ಹೊತ್ತಿ ಉರಿಯುತ್ತೆ – ಮುತಾಲಿಕ್ ಎಚ್ಚರಿಕೆ
Web Stories