ಹುಬ್ಬಳ್ಳಿ: ದೇಹಕ್ಕೆ ದೆವ್ವ ಹೊಕ್ಕುತ್ತೆ, ಆತ್ಮ ಹೊರಗೆ ಹೋಗುತ್ತೆ ಇಂತಹ ಸಂಗತಿಗಳನ್ನು ಕೇಳ್ತಾನೆ ಇರುತ್ತೇವೆ. ಆದರೆ ಆ ಪ್ರೇತವೇ ದೇಹದಿಂದ ಹೊರಗೆ ಹೋಗುವ ಲೈವ್ ವಿಡಿಯೋ ನೋಡಿರುವುದಿಲ್ಲ. ಅಂತಹ ವಿಚಿತ್ರ ಘಟನೆಯೊಂದು ಹುಬ್ಬಳ್ಳಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ಬರ್ತ್ ಡೇ ಪಾರ್ಟಿ ಮಾಡಿ ಡ್ಯಾನ್ಸ್ ಮಾಡುತ್ತಿದ್ದಾಗ ಪ್ರೇತ ಹೊರಬಂದಿದೆ. ಪ್ರತಾಪ್ ಎಂಬ ಯುವಕನ ದೇಹದಿಂದ ಪ್ರೇತ ಹೊರ ಹೋಗುತ್ತಿರುವುದನ್ನು ಪಾರ್ಟಿಗೆ ಬಂದಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
ಪ್ರತಾಪ್ ದೇಹದಿಂದ ದೆವ್ವ ಹೊರಗೆ ಬಂದ ಬಳಿಕ ವಿಚಿತ್ರ ಎಂಬಂತೆ ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಯುವಕ ಪ್ರತಾಪ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಪ್ರತಾಪ್ ಸಾವನ್ನಪ್ಪಿದ್ದ ನೆನಪಿನಲ್ಲಿ ಬರ್ತ್ ಡೇ ಪಾರ್ಟಿ ವಿಡಿಯೋ ನೋಡುತ್ತಿದ್ದಾಗ ಪ್ರೇತ ದೇಹದಿಂದ ಹೊರ ಹೋಗುತ್ತಿರುವ ದೃಶ್ಯ ಸ್ನೇಹಿತರ ಗಮನಕ್ಕೆ ಬಂದಿದೆ.
ವಿಡಿಯೋದಲ್ಲಿ ಪ್ರತಾಪ್ ದೇಹದಿಂದ ಪ್ರೇತ ಹೊರಹೋಗುತ್ತಿರುವುದನ್ನು ಗಮನಿಸಿದ ಸ್ನೇಹಿತರು ಶಾಕ್ ಆಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=kalDzvQrenw