ಗ್ಯಾಂಗ್ ರೇಪ್ ಕಥೆ ಕಟ್ಟಿದ್ದ ಮಹಿಳೆ ಅರೆಸ್ಟ್ – 420 ಕೇಸ್ ದಾಖಲು

Public TV
2 Min Read
Police

ನವದೆಹಲಿ/ಲಕ್ನೋ: ಆಸ್ತಿ ದೋಚುವ ಸಲುವಾಗಿ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಗ್ಯಾಂಗ್‌ರೇಪ್ (Ghaziabad Gang Rape) ನಡೆದಿರುವುದಾಗಿ ಕಥೆ ಕಟ್ಟಿದ್ದ ಮಹಿಳೆ ಹಾಗೂ ಮೂವರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿ ಮಹಿಳೆ (Delhi Women) ಐವರು ಪುರುಷರು ತನ್ನನ್ನು ಎರಡು ದಿನಗಳ ಕಾಲ ಅಪಹರಿಸಿ ಅತ್ಯಾಚಾರವೆಸಗಿದ್ದಾರೆ ಎಂದು ಹೇಳಿಕೊಂಡಿದ್ದಳು. ಕೊನೆಗೂ ಸತ್ಯ ಬಯಲಾಗಿದ್ದು, ಮಹಿಳೆ ಹಾಗೂ ಆಕೆಯ ಸಹಚರರಾದ ಆಜಾದ್, ಅಫ್ಜಲ್ ಮತ್ತು ಗೌರವ್ ಮೂವರನ್ನು ಬಂಧಿಸಿ, ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ನಂತರ ನ್ಯಾಯಾಲಯವು (Court) ಮಹಿಳೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಗಾಜಿಯಾಬಾದ್ ಎಸ್ಪಿ ನಿಪುನ್ ಅಗರ್ವಾಲ್ ಹೇಳಿದ್ದಾರೆ.

rape

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (IPC) 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಗೆ ಪ್ರೇರೇಪಿಸುವುದು), 467 (ಮೌಲ್ಯಯುತ ಭದ್ರತೆಯ ಖೋಟಾ), 468 (ವಂಚನೆಯ ಉದ್ದೇಶಕ್ಕಾಗಿ ನಕಲು ಮಾಡೋದು) ಮತ್ತು 471 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

Ghaziabad Gangrape Case

ಏನಿದು ಘಟನೆ?
ಗಾಜಿಯಾಬಾದ್‌ನ ಪುರುಷರ ಗುಂಪೊಂದು ದೆಹಲಿ ಮೂಲದ 38 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಮಹಿಳೆ ಮೇಲೆ ಅಮಾನುಷವಾಗಿ ಹಲ್ಲೆಯನ್ನೂ ನಡೆಸಿ, ಬಳಿಕ ಆರೋಪಿಗಳು ಮಹಿಳೆಯನ್ನು ರಸ್ತೆ ಬದಿಯಲ್ಲಿ ತಳ್ಳಿ ಹೋಗಿದ್ದರು. ಅ.18 ರಂದು ಮುಂಜಾನೆ 3:30ರ ವೇಳೆಗೆ ನಂದಗ್ರಾಮ್ ಪೊಲೀಸ್ ಠಾಣೆಯ ಆಶ್ರಮದ ರಸ್ತೆ ಬಳಿ ಸಂತ್ರಸ್ತ ಮಹಿಳೆ ಪತ್ತೆಯಾಗಿದ್ದರು. ಮಹಿಳೆ ನೆಲದ ಮೇಲೆ ಬಿದ್ದಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಲ್ಲದೇ ಕ್ರೂರವಾಗಿ ಚಿತ್ರಹಿಂಸೆ ನೀಡಲಾಗಿರುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು, ಸಂತ್ರಸ್ತ ಮಹಿಳೆ ಸುಳ್ಳು ಆರೋಪ ಮಾಡಿರುವ ಸತ್ಯ ಬಯಲಾಗಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮೀರತ್‌ನ ಐಜಿ ಪ್ರವೀಣ್ ಕುಮಾರ್, ಮಹಿಳೆ ಆಸ್ತಿ ವಿವಾದದಲ್ಲಿ ಆರೋಪಿಯನ್ನು ಸಿಲುಕಿಸಲು ಆಜಾದ್ ಎಂಬಾತನೊಂದಿಗೆ ಸೇರಿಕೊಂಡು ಸುಳ್ಳು ಆರೋಪ ಹೊರಿಸಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಆರೋಪಿ ಮತ್ತು ಮಹಿಳೆ ನಡುವೆ ಆಸ್ತಿ ವಿವಾದವೊಂದಿದೆ. ಹಾಗಾಗಿ ಆಜಾದ್ ಎಂಬಾತನೊಂದಿಗೆ ಸೇರಿಕೊಂಡು ಪ್ಲ್ಯಾನ್‌ ಮಾಡಿ ಈ ರೀತಿ ಕಥೆ ಕಟ್ಟಿದ್ದಾರೆ. ಹಾಗಾಗಿ ಆಜಾದ್ ಮತ್ತು ಆತನ ಸಹಚರರಾದ ಗೌರವ್ ಮತ್ತು ಅಫ್ಜಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *