– 7 ಟ್ರಾನ್ಸಾಕ್ಷನ್‍ನಲ್ಲಿ ಹಣ ಕಡಿತ
– ಝೊಮಾಟೊ ವಿರುದ್ಧ ದೂರು ದಾಖಲು
ಲಕ್ನೋ: ಇತ್ತೀಚೆಗೆ ಝೊಮಾಟೊ ಕಂಪನಿಯ ವಿರುದ್ಧ ಅನೇಕ ಪ್ರಕರಣಗಳು ಭಾರೀ ಸುದ್ದಿಯಾಗುತ್ತಿದೆ. ಅದರ ಸಾಲಿಗೆ ಈಗ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ರುಮಾಲಿ ರೋಟಿ ಆರ್ಡರ್ ಮಾಡಿ ಬರೋಬ್ಬರಿ 91 ಸಾವಿರ ರೂ. ಕಳೆದುಕೊಂಡ ಪ್ರಕರಣ ಕೂಡ ಸೇರಿಕೊಂಡಿದೆ
ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಸಿದ್ಧಾರ್ಥ್ ಝೊಮಾಟೊದಲ್ಲಿ ರುಮಾಲಿ ರೊಟ್ಟಿ ಆರ್ಡರ್ ಮಾಡಿ ವಂಚನೆಗೆ ಒಳಗಾಗಿದ್ದಾನೆ. ಸಿದ್ಧಾರ್ಥ್ ಇಂಜಿನಿಯರಿಂಗ್ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದು, ಆತನ ತಂದೆ ಸುಪ್ರೀಂ ಕೋರ್ಟಿನಲ್ಲಿ ವಕೀಲರಾಗಿದ್ದಾರೆ, ತಾಯಿ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಝೊಮಾಟೊದಲ್ಲಿ ಸಿದ್ಧಾರ್ಥ್ ರುಮಾಲಿ ರೊಟ್ಟಿ ಆರ್ಡರ್ ಮಾಡಿದ್ದನು ಅದಕ್ಕೆ ಆನ್‍ಲೈನ್‍ನಲ್ಲಿ ಹಣ ಕೂಡ ಪೇ ಮಾಡಿದ್ದನು. ಇದನ್ನೂ ಓದಿ: ಪನೀರ್ ಆರ್ಡರ್ ಮಾಡಿದ್ರೆ ಚಿಕನ್ ಡೆಲಿವರಿ: ಝೊಮ್ಯಾಟೊಗೆ 55 ಸಾವಿರ ರೂ. ದಂಡ
Advertisement
Advertisement
ಆದರೆ ಆರ್ಡರ್ ಪ್ಲೇಸ್ ಮಾಡಿದ ಕೆಲವೇ ನಿಮಿಷದಲ್ಲಿ ಸಿದ್ಧಾರ್ಥ್ ಫೋನ್‍ಗೆ ಹಣವನ್ನು ಹಿಂದಿರುಗಿಸುತ್ತೇವೆ ನಿಮ್ಮ ಬ್ಯಾಂಕ್ ಮಾಹಿತಿ ತಿಳಿಸಿ ಎಂದು ಝೊಮಾಟೊ ಹೆಸರಿನಲ್ಲಿ ಮೆಸೇಜ್ ಬಂದಿದೆ. ಅದನ್ನು ನಂಬಿ ಸಿದ್ಧಾರ್ಥ್ ಮಾಹಿತಿ ಕಳುಹಿಸಿದ ಬಳಿಕ ಒಟ್ಟು 7 ಟ್ರಾನ್ಸಾಕ್ಷನ್‍ನಲ್ಲಿ ಬರೋಬ್ಬರಿ 91 ಸಾವಿರದ 196 ರೂಪಾಯಿ ಬ್ಯಾಂಕ್ ಅಕೌಂಟ್‍ನಿಂದ ಕಡಿತಗೊಂಡಿದೆ.
Advertisement
ಈ ಟ್ರಾನ್ಸಾಕ್ಷನ್ ಬಗ್ಗೆ ಫೋನಲ್ಲಿ ಒಂದೊಂದೆ ಮೆಸೇಜ್ ಬಂದಿದ್ದನ್ನು ನೋಡಿ ಸಿದ್ಧಾರ್ಥ್ ಹೌಹಾರಿದ್ದಾನೆ. ತಕ್ಷಣ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾನೆ. ಸದ್ಯ ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಡೆಲಿವರಿ ಬಾಯ್ ತಂದ ಆಹಾರ ತಿರಸ್ಕರಿಸಿದವನ ಮೇಲೆ ಬಿತ್ತು ಕೇಸ್
Advertisement
ಈ ಹಿಂದೆ ಸಸ್ಯಹಾರಿ ಆರ್ಡರ್ ಮಾಡಿದ ಗ್ರಾಹಕರಿಗೆ ಝೊಮಾಟೊ ಮಾಂಸಹಾರಿ ಆಹಾರ ಡೆಲಿವರಿ ಮಾಡಿದ ಪ್ರಕರಣಗಳು ಕೂಡ ನಡೆದಿದೆ. ಈ ತಪ್ಪಿಗಾಗಿ ಝೊಮಾಟೊ ಸಾವಿರಾರು ರೂಪಾಯಿ ದಂಡವನ್ನು ಕೂಡ ಕಟ್ಟಿದೆ.
ಪುಣೆಯ ವಕೀಲರೊಬ್ಬರು ಝೊಮಾಟೊದಲ್ಲಿ ಪನ್ನೀರ್ ಬಟರ್ ಮಸಾಲಾ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಪನ್ನೀರ್ ಬದಲು ಚಿಕನ್ ಬಟರ್ ಮಸಾಲಾ ಡೆಲಿವರಿ ಮಾಡಲಾಗಿತ್ತು. ಈ ಬಗ್ಗೆ ತಿಳಿಯದ ವಕೀಲರು ಅದನ್ನೇ ತಿಂದಿದ್ದರು. ಬಳಿಕ ಇದು ಪನ್ನೀರ್ ಅಲ್ಲ ಚಿಕನ್ ಎಂದು ತಿಳಿದ ಮೇಲೆ ಗ್ರಾಹಕರ ನ್ಯಾಯಾಲಯದಲ್ಲಿ ದೂರು ನೀಡಿದ್ದರು. ಆಗ ನ್ಯಾಯಾಲಯ ಝೊಮಾಟೊಗೆ 55 ಸಾವಿರ ರೂಪಾಯಿ ದಂಡ ಹಾಕಿತ್ತು. ಅಲ್ಲದೆ 45 ದಿನಗಳಲ್ಲಿ ಈ ಹಣವನ್ನು ಗ್ರಾಹಕನಿಗೆ ತಲುಪಿಸುವಂತೆ ಆದೇಶಿಸಿತ್ತು. ಇದನ್ನೂ ಓದಿ: ಝೊಮ್ಯಾಟೊದಿಂದ ಮಧ್ಯರಾತ್ರಿ ಮನೆ ತಲುಪಿದ-ಯುವಕನ ಪ್ಲಾನ್‍ಗೆ ಜನರು ಫಿದಾ
ಈ ಆರೋಪವನ್ನು ಝೊಮಾಟೊ ತಳ್ಳಿಹಾಕಿ, ಇದು ನಮ್ಮ ತಪ್ಪಲ್ಲ. ಆರ್ಡರ್ ಕಳುಹಿಸಿದ ಹೋಟೆಲ್ ತಪ್ಪು. ಅವರು ಆರ್ಡರ್ ತಯಾರಿಸಿ ಕೊಡುವಾಗ ಎಡವಟ್ಟು ಮಾಡಿದ್ದಾರೆ ಎಂದು ವಾದಿಸಿತ್ತು. ಆದರೂ ನೀವು ಮಾಡಿದ್ದು ತಪ್ಪು ಎಂದು ನ್ಯಾಯಾಲಯ ಝೊಮಾಟೊ ಹಾಗೂ ಆಹಾರ ತಯಾರಿಸಿದ ಹೋಟೆಲ್‍ಗೆ ತಲಾ 50 ಸಾವಿರ ರೂಪಾಯಿ ದಂಡ ವಿಧಿಸಿತ್ತು.