ರಂಗಕರ್ಮಿ, ಸಿನಿಮಾ ನಿರ್ಮಾಪಕ, ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದ ಸದಾನಂದ ಸುವರ್ಣ (Sadananda Suvarna) ಇಂದು (ಜು.16) ನಿಧನರಾಗಿದ್ದಾರೆ. 93ನೇ ವರ್ಷಕ್ಕೆ ಸದಾನಂದ ಇಹಲೋಕ ತ್ಯಜಿಸಿದ್ದಾರೆ. ಇದನ್ನೂ ಓದಿ:ಕೊಲೆ ಮಾಡಿದ್ರೆ ಶಿಕ್ಷೆಯಾಗಲಿ, ಆಚೆ ಬಂದ್ಮೇಲೆ ದರ್ಶನ್ ಹೊಸ ವ್ಯಕ್ತಿಯಾಗಿ ಬರಲಿ: ರಾಜ್ ಬಿ ಶೆಟ್ಟಿ
Advertisement
ಸದಾನಂದ ನಿಧನದ ಸುದ್ದಿ ಅವರ ಕುಟುಂಬಕ್ಕೆ ಆಘಾತವುಂಟು ಮಾಡಿದೆ. ಇನ್ನೂ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಸೇವೆ ಸಲ್ಲಿಸಿರುವ ನಿರ್ಮಾಪಕ ಸದಾನಂದ ಸುವರ್ಣ ನಿಧನಕ್ಕೆ ನಟ, ನಟಿಯರು ಸಂತಾಪ ಸೂಚಿಸಿದ್ದಾರೆ.
Advertisement
Advertisement
ಅಂದಹಾಗೆ, ‘ಘಟಶ್ರಾದ್ಧ’ (Ghatashraddha Film) ಸಿನಿಮಾ ಮೂಲಕ ಸದಾನಂದ ಸುವರ್ಣ ನಿರ್ಮಾಪಕರಾಗಿದ್ದರು. ಮೂಲತಃ ಮುಲ್ಕಿಯವರಾದ ಅವರು ನಿರ್ಮಿಸಿದ ಮೊದಲ ಘಟಶ್ರಾದ್ಧ ಚಿತ್ರಕ್ಕೆ ಗಿರೀಶ್ ಕಾಸರವಳ್ಳಿ ನಿರ್ದೇಶನ ಮಾಡಿದ್ದರು.
Advertisement
ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಮನೆ, ಕುಬಿ ಮತ್ತು ಇಯಾಲ, ತಬರನ ಕಥೆ ಸಿನಿಮಾಗಳಿಗೆ ಸದಾನಂದ ಸುವರ್ಣ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದರು. ದೂರದರ್ಶನಕ್ಕೆ ‘ಗುಡ್ಡದ ಭೂತ’ ಧಾರಾವಾಹಿ ನಿರ್ಮಿಸಿ, ನಿರ್ದೇಶಿಸಿದ್ದರು. ಇದು ಖ್ಯಾತ ನಟ ಪ್ರಕಾಶ್ ರಾಜ್ ಅವರ ಕೆರಿಯರ್‌ಗೆ ಬ್ರೇಕ್ ಕೊಟ್ಟಿತು.