ಲಕ್ನೋ: ಹರ್ಲೀನ್ ಡಿಯೋಲ್ ಅಬ್ಬರದ ಬ್ಯಾಟಿಂಗ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಜೈಂಟ್ಸ್ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 ರನ್ ಹೊಡೆಯಿತು. ಸವಾಲಿನ ಗುರಿಯನ್ನು ಬೆನ್ನಟ್ಟಿದ ಗುಜರಾತ್ 19.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 178 ರನ್ ಹೊಡೆದು ಗೆಲುವು ಸಾಧಿಸಿತು.
ಗುಜರಾತ್ ಪರ ಅಜೇಯ ಹರ್ಲೀನ್ ಡಿಯೋಲ್ 49 ಎಸೆತಗಳಲ್ಲಿ 1 ಸಿಕ್ಸರ್, 9 ಬೌಂಡರಿ ನೆರವಿನಿಂದ 70 ರನ್ ಕಲೆಹಾಕಿ ತಂಡವನ್ನು ಗೆಲುವಿನ ದಡ ತಲುಪಿಸಿದರು. ಬೆತ್ ಮೂನಿ 35 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 44 ರನ್ ಹೊಡೆದು ಔಟಾದರು.
ಗುಜರಾತ್ 4 ರನ್‌ಗಳಿದ್ದಾಗ ತನ್ನ ಮೊದಲ ವಿಕೆಟ್ ಕಳೆದುಕೊಂಡಿತ್ತು. ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ ಬೆತ್ ಮೂನಿ ಮತ್ತು ಹರ್ಲಿನ್ ಎರಡನೇ ವಿಕೆಟಿಗೆ 57 ಎಸೆತಗಳಲ್ಲಿ 85 ರನ್ ಜೊತೆಯಾಟವಾಡಿ ಚೇತರಿಕೆ ನೀಡಿದರು. ಡಿಯಾಂಡ್ರಾ ಡಾಟಿನ್ 24, ಆಶ್ಲೀ ಗಾರ್ಡ್ನರ್ 22 ರನ್ ಹೊಡೆದು ಔಟಾದರು.
ಡೆಲ್ಲಿ ಪರ ಶಿಖಾ ಪಾಂಡೆ, ಜೆಸ್ ಜೊನಾಸೆನ್ ತಲಾ 2 ವಿಕೆಟ್, ಮಿನ್ನು ಮಣಿ 1 ವಿಕೆಟ್ ಕಬಳಿಸಿದರು.
ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಪರ ಮೆಗ್ ಲ್ಯಾನಿಂಗ್ 57 ಎಸೆತಗಳಲ್ಲಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಸ್ಫೋಟಕ 92 ರನ್ ಹೊಡೆದರು. ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಔಟಾದ ಮೆಗ್ ಲ್ಯಾನಿಂಗ್ ಕೇವಲ 8 ರನ್‌ಗಳಿಂದ ಶತಕ ವಂಚಿತರಾದರು. ಶಫಾಲಿ ವರ್ಮಾ 27 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 3 ಬೌಂಡರಿ ನೆರವಿನಿಂದ 40 ರನ್ ಕಲೆಹಾಕಿದರು.
ಗುಜರಾತ್ ಪರ ಮೇಘಾ ಸಿಂಗ್ 3 ವಿಕೆಟ್ ಮತ್ತು ಡಿಯಾಂಡ್ರಾ ಡಾಟಿನ್ 2 ವಿಕೆಟ್ ಕಿತ್ತರು.