ತನಗೆ ಅನ್ಯಾಯವಾಗಿದೆ, ಲೈಂಗಿಕ ಶೋಷಣೆಗೆ ಒಳಗಾಗಿದ್ದೇನೆ ಎಂದು ಹಲವಾರು ಬಾರಿ ತೆಲುಗು ನಿರ್ಮಾಪಕರ ಸಂಘ, ಕಲಾವಿದರ ಸಂಘದ ಮುಂದೆ ಬೆತ್ತಲೆಯಾಗಿ ಪ್ರತಿಭಟನೆ (Protest) ಮಾಡಿದ್ದ ನಟಿ ಶ್ರೀರೆಡ್ಡಿ (Srireddy) ಕುರಿತಾಗಿ ಆಘಾತಕಾರಿ ಸುದ್ದಿಯೊಂದು ಬಂದಿದೆ. ಬೇರೆಯವರಿಂದ ಹಣ ಪಡೆದುಕೊಂಡು ಹೀಗೆ ಬೆತ್ತಲೆ (Bettale) ನಾಟಕ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಶೀಘ್ರವೇ ಹೊರ ಹಾಕಲಾಗುವುದು ಎಂದು ಉದ್ಯಮದವರು ಹೇಳುತ್ತಿದ್ದಾರೆ.
ಶ್ರೀರೆಡ್ಡಿ ಈ ಹಿಂದೆ ಮೀಟೂ ಆರೋಪ ಮಾಡಿದ್ದರು. ಅದರಲ್ಲೂ ನರೇಶ್ ಮತ್ತು ಪವಿತ್ರಾ ಲೋಕೇಶ್ ಪ್ರಕರಣದಲ್ಲಿ ಪ್ರತಿಕ್ರಿಯೆ ನೀಡಿದ್ದರು. ಈ ಹಿಂದೆ ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರೆಡ್ಡಿ ಬೆತ್ತಲೆ ಪ್ರತಿಭಟನೆ ಮಾಡಿದ್ದರು ಈ ಸಂದರ್ಭವನ್ನು ನೆನಪಿಸಿಕೊಂಡು ಲೈವ್ ಮಾಡಿದ್ದ ಶ್ರೀರೆಡ್ಡಿ ಮತ್ತೆ ನರೇಶ್ ಹಾಗೂ ಪವಿತ್ರಾ ವಿಷಯವನ್ನು ಪ್ರಸ್ತಾಪಿಸಿದ್ದರು. ‘ನಾನು ಮೀಟೂ ವಿರುದ್ಧ ಪ್ರತಿಭಟನೆ ನಡೆಸಿದಾಗ ನರೇಶ್, ಆ್ಯಸಿಡ್‌ನಿಂದ ಕೈ ತೊಳಯಬೇಕು ಎಂದು ಕಾಮೆಂಟ್ ಮಾಡಿದ್ದರು. ಈಗ ಅವರ ಸ್ಥಿತಿ ಏನಾಗಿದೆ ನೋಡಿ’ ಎಂದು ಕಾಮೆಂಟ್ ಮಾಡಿದ್ದರು.
ಯಾರ ಬದುಕಿನಲ್ಲೂ ಯಾರು ಬಿರುಗಾಳಿ ಎಬ್ಬಿಸಬಾರದು ಎಂದು ಪರೋಕ್ಷವಾಗಿ ಪವಿತ್ರಾ ಲೋಕೇಶ್ ಕುರಿತಾಗಿಯೂ ಮಾತನಾಡಿದ್ದ ಶ್ರೀರೆಡ್ಡಿ, ರಮ್ಯಾ ಅವರ ಜೀವನವನ್ನು ಹಾಳು ಮಾಡುವ ಹಕ್ಕು ಯಾರಿಗೂ ಇಲ್ಲ. ಅಲ್ಲದೇ, ಮಹಿಳೆ ಅಂದಾಕ್ಷಣ ಅವರ ಶೀಲವನ್ನು ಶಂಕಿಸಲಾಗುತ್ತದೆ. ರಮ್ಯಾ ಮೇಲೂ ಅದೇ ಆಗಿದೆ. ಆದರೆ, ನಿಜವಾಗಿಯೂ ಜನರ ಮುಂದೆ ಬೆತ್ತಲೆ ಆದವರು ಯಾರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನರೇಶ್ ಅವರನ್ನು ಕೇಳಿದ್ದರು.
ಶ್ರೀರೆಡ್ಡಿ ಲೈವ್ ಗೆ ಬಂದು ಮತ್ತೆ ಹಲವು ಕಲಾವಿದರ ಹೆಸರುಗಳನ್ನು ಬಹಿರಂಗ ಪಡಿಸಿದ್ದರು. ಅವರು ಜೀವನವೂ ಇದೇ ಹಾದಿಯಲ್ಲಿದೆ. ಮುಂದೆ ಜನರಿಗೂ ಗೊತ್ತಾಗಲಿದೆ ಎಂದು ಅಬ್ಬರಿಸಿದ್ದರು. ಶ್ರೀರೆಡ್ಡಿ ಲೈವ್ ಗೆ ಬರುತ್ತಿದ್ದಂತೆಯೇ ಮೀಟೂ ಚಳವಳಿ ಮತ್ತೆ ಆರಂಭವಾಗಲಿದೆಯಾ ಅನ್ನುವ ಅನುಮಾನವನ್ನಂತೂ ಅವರು ಹುಟ್ಟು ಹಾಕಿದ್ದರು. ಇದೆಲ್ಲದ ಹಿಂದೆ ಹಣದ ವಾಸನೆ ಇದೆ ಎನ್ನಲಾಗುತ್ತಿದೆ.