ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಅವರಿಂದು ದಾಖಲೆಯ 15ನೇ ಬಜೆಟ್ ಮಂಡಿಸುತ್ತಿದ್ದು, ರಾಜ್ಯದಲ್ಲಿರುವ ಪುರಾತನ ರಾಮ ಮಂದಿರಗಳ ಪುನರುಜ್ಜೀವಕ್ಕೆ ಬಜೆಟ್ ನಲ್ಲಿ ಹಣ ಬಿಡುಗಡೆ ಆಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.
ಇಂದು (ಶುಕ್ರವಾರ) ಬೆಳಗ್ಗೆ 10:15 ರಿಂದ ಬಜೆಟ್ (Siddaramaiah Budget) ಮಂಡಿಸಲಿದ್ದಾರೆ. ಬಜೆಟ್ ಗಾತ್ರ 3.75 ಲಕ್ಷ ಕೋಟಿ ರೂ.ನಿಂದ 3.80 ಲಕ್ಷ ಕೋಟಿ ರೂ.ಗಳ ವರೆಗೆ ಇರಲಿದೆ ಎನ್ನಲಾಗಿದೆ. ಬಜೆಟ್ ಮಂಡನೆಗೂ ಮುನ್ನ ಬೆಳಗ್ಗೆ 9:30ಕ್ಕೆ ಸಚಿವ ಸಂಪುಟ ಸಭೆಯನ್ನೂ ಸಿಎಂ ಕರೆದಿದ್ದಾರೆ.
Advertisement
Advertisement
ಈ ಬಾರಿ ರಾಜ್ಯದಲ್ಲಿ ತೆರಿಗೆ ಬರೆ ಇಲ್ಲದೇ ಬಜೆಟ್ ಮಂಡನೆ ಮಾಡುತ್ತಾರಾ? ಜನಪ್ರಿಯ ಯೋಜನೆ ಘೋಷಣೆ ಮಾಡದೇ ಕೇಂದ್ರ ಸರ್ಕಾರದ ಹಾದಿ ತುಳಿಯುತ್ತಾರಾ? ಅನ್ನೋ ಪ್ರಶ್ನೆಗಳ ನಡುವೆ ಸಿದ್ದರಾಮಯ್ಯ ಬಜೆಟ್ ನಲ್ಲಿ ಈ ಬಾರಿ ರಾಮ ನಾಮ ಜಪ ಮಾಡ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಇದನ್ನೂ ಓದಿ: ಬೆಂಗ್ಳೂರು ಟ್ರಾಫಿಕ್ ದಟ್ಟಣೆಗೆ ಮುಕ್ತಿ ಸಿಗುತ್ತಾ? – ಸಿಎಂ ಬಜೆಟ್‌ನಲ್ಲಿ ಬೆಂಗಳೂರಿನ ನಿರೀಕ್ಷೆಗಳೇನು?
Advertisement
Advertisement
ರಾಜ್ಯದ ಪುರಾತನ ರಾಮ ಮಂದಿರಗಳ ಪುನರುಜ್ಜೀವಕ್ಕೆ ಬಜೆಟ್ ನಲ್ಲಿ ಹಣ ಬಿಡುಗಡೆ ಆಗುತ್ತಾ? ಅಯೋಧ್ಯೆಯಲ್ಲಿ ರಾಜ್ಯದ ವಸತಿ ಸಮುಚ್ಚಯ ನಿರ್ಮಾಣ ಬಗ್ಗೆ ಬಜೆಟ್‌ನಲ್ಲಿ ಘೋಷಣೆಯಾಗುತ್ತಾ? ಕರ್ನಾಟಕದಲ್ಲಿ ಪುರಾತನ ರಾಮ ಮಂದಿರ ಪುನರು ಜ್ಜೀವನಕ್ಕೆ 100 ಕೋಟಿ ಮೀಸಲಿಡ್ತಾರಾ? ಅನ್ನೋದರ ಬಗ್ಗೆ ಕುತೂಹಲ ಹೆಚ್ಚಿಸಿದೆ. ಇದನ್ನೂ ಓದಿ: ಇಂದು ಸಿದ್ದರಾಮಯ್ಯರಿಂದ ದಾಖಲೆಯ 15ನೇ ಬಜೆಟ್ ಮಂಡನೆ – ಗ್ಯಾರಂಟಿ ಮಧ್ಯೆ ಬೆಟ್ಟದಷ್ಟು ನಿರೀಕ್ಷೆ
ಅಯೋಧ್ಯೆಯಲ್ಲಿ ರಾಜ್ಯದ ವಸತಿ ಸಂಕೀರ್ಣ ಕಟ್ಟಲು 100 ಕೋಟಿ ರೂ. ಮೀಸಲಿಡುತ್ತಾರೆ. ರಾಮ ರಾಜಕಾರಣದ ನಡುವೆ ಬಜೆಟ್‌ನಲ್ಲೇ ಘೋಷಿಸಿ ರಾಮ ಭಕ್ತಿ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಮುಂದಾಗಬಹುದು. ಶ್ರೀರಾಮನ ವಿಚಾರದಲ್ಲಿ ತಮ್ಮ ವಿರುದ್ಧ ಮಾಡಿದ ಆರೋಪಗಳಿಗೆ ಬಜೆಟ್‌ನಲ್ಲಿ ಸಿಎಂ ಉತ್ತರ ಕೊಡುವ ಸಾಧ್ಯತೆ ಇದೆ. ರಾಮ ಎಲ್ಲೆಲ್ಲೂ ಇದ್ದಾನೆ ಎಂದಿದ್ದ ಸಿಎಂ ರಾಜ್ಯದ ರಾಮ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಮುಂದಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಅಯೋಧ್ಯೆಯಲ್ಲಿ ಕರ್ನಾಟಕದ ವಸತಿ ಕಟ್ಟಡಕ್ಕೆ ಈ ಬಾರಿಯ ಬಜೆಟ್‌ನಲ್ಲೇ ಅನುದಾನ ಘೋಷಿಸಲು ಸಹ ಸಿದ್ಧತೆ ನಡೆದಿದೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.