ಬೆಂಗಳೂರು: ಕೋವಿಡ್ ಸೋಂಕಿನಿಂದ ಬಳಲುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಶೀಘ್ರವೇ ಗುಣಮುಖರಾಗುವಂತೆ ಹಾರೈಸಿ, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
Advertisement
ಕೋವಿಡ್ ಸೋಕಿಗೆ ತುತ್ತಾಗಿರುವ ತಮಿಳುನಾಡಿನ ಸಿಎಂ ಎಂ.ಕೆ ಸ್ಟಾಲಿನ್ ಅವರು ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಶೀಘ್ರವೇ ಚೇತರಿಸಿಕೊಂಡು, ಮತ್ತೆ ತಮ್ಮ ಕಚೇರಿಗೆ ಮರಳಿ ಎಂದಿನಂತೆ ಕೆಲಸ ಮಾಡುವಂತಾಗಲಿ. ಗುಣಮುಖರಾಗಿ ರಾಜ್ಯದ ಜನತೆಯ ಸೇವೆಯನ್ನು ಪುನರಾರಂಭಿಸಲಿ ಎಂದು ಬೊಮ್ಮಾಯಿ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಬೆಳಿಗ್ಗೆ 7 ಗಂಟೆಗೆ ಮಕ್ಕಳು ಶಾಲೆಗೆ ಹೋಗ್ಬೋದಾದ್ರೆ, ನ್ಯಾಯಾಧೀಶರೇಕೆ 9 ಗಂಟೆಗೆ ಬರಬಾರದು – ಯು.ಯು.ಲಲಿತ್ ಪ್ರಶ್ನೆ
Advertisement
I wish Tamil Nadu CM Shri @mkstalin who has been admitted to a hospital in Chennai after testing Covid positive, a speedy recovery. May he get well soon & resume office in service of the people of the state.
— Basavaraj S Bommai (@BSBommai) July 15, 2022
Advertisement
69 ವರ್ಷದ ಸ್ಟಾಲಿನ್ ಅವರಿಗೆ ಜುಲೈ 12 ರಂದು ಕೋವಿಡ್ ಇರುವುದು ಕಂಡುಬಂದಿತ್ತು. 2 ದಿನ ಸೆಲ್ಫ್ ಐಸೋಲೇಷನ್ನಲ್ಲಿದ್ದ ಸ್ಟಾಲಿನ್ ಜುಲೈ 14 ರಂದು ಹೆಚ್ಚಿನ ಚಿಕಿತ್ಸೆಗೆ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು. ಇದನ್ನೂ ಓದಿ: ಮುಸ್ಲಿಂ ಮಹಿಳೆಯರು ಶಾಂತಿ ಕೇಳುವುದರಲ್ಲಿ ತಪ್ಪಿಲ್ಲ: ಡಿ.ಕೆ ಶಿವಕುಮಾರ್