ನವದೆಹಲಿ: ಇನ್ಮುಂದೆ ನೀವು ಪ್ಯಾನ್ ಕಾರ್ಡ್‍ಗಾಗಿ ವಾರಾನುಗಟ್ಟಲೆ ಕಾಯುವ ಅವಶ್ಯಕತೆ ಇರುವುದಿಲ್ಲ. ಶೀಘ್ರದಲ್ಲೇ ನೀವು ಕೆಲವೇ ನಿಮಿಷಗಳಲ್ಲಿ ಪ್ಯಾನ್ ನಂಬರ್ ಪಡೆಯಬಹುದು ಹಾಗೂ ನಿಮ್ಮ ಸ್ಮಾರ್ಟ್ ಫೋನ್ ಮೂಲಕವೇ ತೆರಿಗೆ ಕಟ್ಟಬಹುದಾಗಿದೆ.
ತೆರಿಗೆ ಪಾವತಿದಾರರಿಗೆ ಸಹಾಯವಾಗುವಂತೆ ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಆಧಾರ್ ಇ-ಕೆವೈಸಿ ವ್ಯವಸ್ಥೆಯ ಮೂಲಕ ಪ್ಯಾನ್ ನಂಬರ್ ವಿತರಿಸಲು ಮುಂದಾಗಿದೆ. ಇದರ ಸಹಾಯದಿಂದ ವ್ಯಕ್ತಿ ತನ್ನ ವಿಳಾಸ ಮತ್ತು ಇನ್ನಿತರ ಮಾಹಿತಿಯನ್ನ ಹೆಬ್ಬೆರಳಿನ ಗುರುತು ಹಾಗೂ ಇತರೆ ಬಯೋಮೆಟ್ರಿಕ್ ಫೀಚರ್ಸ್ ಬಳಸಿ ಪರಿಶೀಲನೆ ಮಾಡಬಹುದಾಗಿದೆ. ಇ- ಕೆವೈಸಿ ಮೂಲಕ ಸಿಮ್ ಕಾರ್ಡ್ ನೀಡಬಹುದಾದ್ರೆ ಅದೇ ರೀತಿ ಪ್ಯಾನ್ ನಂಬರ್ ಕೂಡ ನೀಡಬಹುದಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಸದ್ಯಕ್ಕೆ ಪ್ಯಾನ್ ಕಾರ್ಡ್ ಪಡೆಯಲು 2 ರಿಂದ 3 ವಾರ ಬೇಕು. ಆದ್ರೆ ಈ ವ್ಯವಸ್ಥೆ ಬಂದ ನಂತರ 5 ರಿಂದ 6 ನಿಮಿಷಗಳಲ್ಲಿ ಪ್ಯಾನ್ ನಂಬರ್ ಸಿಗುತ್ತದೆ. ನಂತರ ಕಾರ್ಡನ್ನು ತಲುಪಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
Advertisement
ಇದಲ್ಲದೆ ಹೊಸ ಕಂಪೆನಿಗಳಿಗೆ ಪ್ಯಾನ್ ವಿತರಿಸಲು ಈಗಾಗಲೇ ಸಿಬಿಡಿಟಿ ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಸಹಯೋಗ ಮಾಡಿಕೊಂಡಿವೆ.
Advertisement
ಇದಲ್ಲದೆ ಅನ್‍ಲೈನ್‍ನಲ್ಲಿ ತೆರಿಗೆ ಪಾವತಿ ಮಾಡಲು, ಪ್ಯಾನ್ ನಂಬರ್‍ಗಾಗಿ ಅರ್ಜಿ ಹಾಕಲು ತೆರಿಗೆ ಇಲಾಖೆ ಆ್ಯಪ್ ಸಿದ್ಧಪಡಿಸಿದೆ. ಈಗಾಗಲೇ ತೆರಿಗೆ ಇಲಾಖೆ ಆನ್‍ಲೈನ್ ಸೇವೆಗಳನ್ನು ಒದಗಿಸುತ್ತಿದ್ದು ಈ ಆ್ಯಪ್ ಮೂಲಕ ಹಿರಿಯ ಹಾಗೂ ಯುವ ತೆರಿಗೆದಾರರಿಗೆ ಮತ್ತಷ್ಟು ಸಹಾಯವಾಗಲಿದೆ ಎಂದು ಹೇಳಲಾಗಿದೆ.