ಬೆಂಗಳೂರು: ಸಾಲ ಪಡೆದ ರೈತರಿಂದ ಸಹಕಾರ ಬ್ಯಾಂಕುಗಳು ವಿವಿಧ ದಾಖಲೆಗಳನ್ನು ಕೇಳುತ್ತಿವೆ ಎನ್ನುವ ಆರೋಪ ಕೇಳಿ ಬಂದ ಬೆನ್ನಲ್ಲೇ, ಕೇವಲ ಮೂರು ದಾಖಲಾತಿಗಳನ್ನು ಪಡೆಯಬೇಕು ಅಂತಾ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಸಾಲಮನ್ನಾ ವಿಷಯಕ್ಕೆ ಸಂಬಂಧಿಸಿದಂತೆ, ಸಹಕಾರ ಬ್ಯಾಂಕುಗಳಲ್ಲಿ ರೈತರಿಂದ ಸ್ವಯಂ ದೃಢೀಕರಣ ಪತ್ರ ಪಡೆಯಲಾಗುತ್ತಿದೆ. ಆದರೆ ಬ್ಯಾಂಕಿನ ಅಧಿಕಾರಿಗಳು ವಿವಿಧ ದಾಖಲೆಗಳನ್ನು ನೀಡುವಂತೆ ಸತಾಯಿಸುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟನಲ್ಲಿ ಸರ್ಕಾರ ಹೊಸ ಆದೇಶ ಕೈಹಾಕಿದೆ.
Advertisement
Advertisement
ಸುತ್ತೋಲೆಯಲ್ಲಿ ಏನಿದೆ?:
ಸಾಲ ಪಡೆದ ರೈತರಿಂದ ಸ್ವಯಂ ದೃಢೀಕರಣ ಪತ್ರದೊಂದಿಗೆ ಇತ್ತೀಚಿನ ಭಾವಚಿತ್ರ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಲಭ್ಯವಿದ್ದಲ್ಲಿ ಪ್ಯಾನ್ ಕಾರ್ಡ್ ಜೆರಾಕ್ಸ್ ಪ್ರತಿಗಳನ್ನು (ಒಂದು ಸೆಟ್) ಮಾತ್ರ ಪಡೆಯಬೇಕು. ರೈತರ ಪಹಣಿಯು ಸಂಘದಲ್ಲಿಯೇ ಲಭ್ಯವಿರುವುದರಿಂದ ಈ ಮೂರು ದಾಖಲೆಗಳನ್ನು ಹೊರತುಪಡಿಸಿ, ಬೇರೆ ಯಾವುದೇ ಪ್ರಮಾಣ ಪತ್ರಗಳನ್ನು ನೀಡುವಂತೆ ರೈತರಿಗೆ ಒತ್ತಾಯಿಸುವಂತಿಲ್ಲ.
Advertisement
ಸಾಲ ಪಡೆದ ರೈತರು ಮೃತಪಟ್ಟಿದ್ದರೆ ಅವರ ವಾರಸುದಾರರಿಂದ ಮರಣ ಪ್ರಮಾಣ ಪತ್ರದೊಂದಿಗೆ ಸ್ವಯಂ ದೃಢೀಕರಣ ಪತ್ರಪಡೆಯತಕ್ಕದ್ದು. ಭೂಮಿ ವಿವಿರದಲ್ಲಿ ಮಾತ್ರ ಮೃತಪಟ್ಟ ರೈತನ ವಿವಿರವನ್ನು ನಮೂದಿಸತಕ್ಕದ್ದು. ದೃಢೀಕರ ಪ್ರಮಾಣ ಪತ್ರ ಪಡೆಯಲು ನಿಗದಿಯಾಗಿದ್ದ ಅವಧಿಯನ್ನು ಇದೇ ತಿಂಗಳು 31ರ ವರೆಗೆ ವಿಸ್ತರಿಸಲಾಗಿದೆ ಎಂದು ತಿಳಸಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv