ನಿಮ್ಮ ರೈಲು ಈಗ ಎಲ್ಲಿದೆ? ವಾಟ್ಸಪ್‍ಗೆ ಬರುತ್ತೆ ಮೆಸೇಜ್: ಮಾಹಿತಿ ಪಡೆಯೋದು ಹೇಗೆ?

Public TV
1 Min Read
INDIAN RAILWAY

ನವದೆಹಲಿ: ರೈಲು ಪ್ರಯಾಣಿಕರಿಗೆ ತ್ವರಿತಗತಿಯಲ್ಲಿ ಮಾಹಿತಿಯನ್ನು ನೀಡುವ ಉದ್ದೇಶದಿಂದ ಭಾರತೀಯ ರೈಲ್ವೇ ಇಲಾಖೆಯು ವಾಟ್ಸಪ್ ಮೂಲಕ ನೂತನ ಯೋಜನೆಯೊಂದನ್ನು ಜಾರಿಗೆ ತಂದಿದೆ.

ಹೌದು, ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಅನುಕೂಲವಾಗುವ ಹಾಗೂ ಸಮಯ ಉಳಿತಾಯವಾಗುವಂತಹ ನೂತನ ಒಪ್ಪಂದವನ್ನು ಭಾರತದ ಮೇಕ್ ಮೈ ಟ್ರಿಪ್ ಸಂಸ್ಥೆಯ ಸಹಭಾಗಿತ್ವದಲ್ಲಿ ಅನಾವರಣಗೊಳಿಸಿದೆ. ಈ ಯೋಜನೆಯಲ್ಲಿ ಪ್ರಯಾಣಿಕರು ತಮ್ಮ ವಾಟ್ಸಪ್ ನಲ್ಲಿ ರೈಲಿನ ನಂಬರ್ ಹಾಕುವ ಮೂಲಕ ರೈಲಿನ ನಿಖರ ಮಾಹಿತಿಯನ್ನು ಕ್ಷಣಮಾತ್ರದಲ್ಲೇ ತಿಳಿದುಕೊಳ್ಳಬಹುದಾಗಿದೆ. ಈ ಮೂಲಕ ಯಾವುದೇ ಅಡೆತಡೆಗಳಿಲ್ಲದೇ ಸರಿಯಾದ ಸಮಯಕ್ಕೆ ರೈಲು ಪ್ರಯಾಣವನ್ನು ಮುಂದುವರಿಸಲು ಪ್ರಯಾಣಿಕರಿಗೆ ಅನುಕೂಲವಾಗುತ್ತದೆ.

TRAIN WHATSAPP

ಈ ಮೊದಲು ಭಾರತೀಯ ರೈಲ್ವೇ ಇಲಾಖೆಯು ಆಪ್ ಬಿಡುಗಡೆಗೊಳಿಸಿತ್ತು. ಈ ಆ್ಯಪ್ ನಲ್ಲಿ ರೈಲು ಈಗ ಯಾವ ಪ್ರದೇಶದಲ್ಲಿ ಸಂಚರಿಸುತ್ತಿದೆ ಎನ್ನುವುದನ್ನು ತಿಳಿಯಬಹುದಿತ್ತು. ಆದರೆ ಈಗ ಆಪ್ ಇಲ್ಲದೇ ನೇರವಾಗಿ ರೈಲಿನ ಮಾಹಿತಿಯನ್ನು ಪಡೆಯಬಹುದಾಗಿದೆ.

ಹೇಗೆ ಮಾಹಿತಿ ಪಡೆದುಕೊಳ್ಳಬಹುದು?
ರೈಲಿನ ನಿಖರ ಮಾಹಿತಿಯನ್ನು ಪಡೆಯಲು ಪ್ರಯಾಣಿಕರು, ಮೇಕ್ ಮೈ ಟ್ರಿಪ್ ನ ನೂತನ 73493 89104 ಮೊಬೈಲ್ ನಂಬರನ್ನು ತಮ್ಮ ಕಾಂಟ್ಯಾಕ್ಟ್ ನಲ್ಲಿ ಸೇವೆ ಮಾಡಿಕೊಳ್ಳಬೇಕು. ನಂತರ ಇದನ್ನು ತಮ್ಮ ವಾಟ್ಸಪ್ ನಂಬರಿನ ಮೂಲಕ ನಿಮಗೆ ಬೇಕಾದ ರೈಲಿನ ಸಂಖ್ಯೆಯನ್ನು ಹಾಕಿ ಸಂದೇಶ ಕಳುಹಿಸಿದರೆ ರೈಲು ಹೊರಟಿದ್ಯಾ ಇಲ್ಲವೇ ಎನ್ನುವ ಮಾಹಿತಿಯನ್ನು ತಿಳಿಸುತ್ತದೆ.

Share This Article