ಶಿವಮೊಗ್ಗ: ಡಿ.ಕೆ.ಶಿವಕುಮಾರ್ (D.K.Shivakumar) ಅವರ ರಾಜೀನಾಮೆ ಪಡೆಯಿರಿ. ಇಲ್ಲದಿದ್ದರೆ ಕ್ಯಾಬಿನೆಟ್‌ನಿಂದ ವಜಾ ಮಾಡಿ ಎಂದು ಸರ್ಕಾರಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (K.S.Eshwarappa) ಒತ್ತಾಯ ಮಾಡಿದರು.
ಶಿವಮೊಗ್ಗದಲ್ಲಿ (Shivamogga) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗೋದು ಗ್ಯಾರಂಟಿ. ಜೈಲಿಗೆ ಹೋಗ್ತಾರೆ ಅಂದ್ರೆ ಈಶ್ವರಪ್ಪ ಜಡ್ಜಾ ಅಂತ ಡಿಕೆಶಿ ಪ್ರಶ್ನೆ ಮಾಡ್ತಾರೆ. ಆದರೆ ಡಿಕೆಶಿ ಆರೋಪ ಮುಕ್ತರಾಗಿ ಬರುತ್ತಾರೆ ಅಂತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳ್ತಾರೆ. ಹಾಗಾದ್ರೆ ಲಕ್ಷ್ಮಿ ಹೆಬ್ಬಾಳ್ಕರ್ ಜಡ್ಜಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನಕಲಿ ವೋಟರ್ ಐಡಿ ಪ್ರಕರಣ; ಸಚಿವ ಭೈರತಿ ಸುರೇಶ್ ರಾಜೀನಾಮೆ ಕೊಡಬೇಕು: ರವಿಕುಮಾರ್
Advertisement
Advertisement
ಸಣ್ಣ ಸಣ್ಣ ವಿಷಯಗಳಿಗೆ ಸಚಿವರ ರಾಜೀನಾಮೆ ಪಡೆಯುತ್ತಾರೆ. ಆದರೆ ಸಿಬಿಐ ತನಿಖೆ ಎದುರಿಸುತ್ತಿರುವ ಡಿಕೆಶಿ ರಾಜೀನಾಮೆ ಏಕಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಏಕೆ ಮೌನವಾಗಿದ್ದಾರೆ. ಡಿಕೆಶಿ ರಾಜೀನಾಮೆ ಪಡೆಯಿರಿ. ಇಲ್ಲದಿದ್ದರೆ ಕ್ಯಾಬಿನೆಟ್‌ನಿಂದ ವಜಾ ಮಾಡಿ ಎಂದು ಆಗ್ರಹಿಸಿದರು.
Advertisement
Advertisement
ಡಿಕೆಶಿ ವಿರುದ್ದ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಕೋರ್ಟ್ ಹೇಳಿದೆ. ಡಿಕೆಶಿ ಅವರು ಈಗಾಗಲೇ 90% ರಷ್ಟು ತನಿಖೆ ಆಗಿದೆ ಅಂತಾರೆ. ತಾನು ಸತ್ಯಹರಿಶ್ಚಂದ್ರ ಅಂತ ತೋರಿಸುವ ಪ್ರಯತ್ನ ಮಾಡಿದರು. ಡಿಕೆಶಿ ವಿರುದ್ದ ಬಂಡಲ್ ಗಟ್ಟಲೆ ದಾಖಲೆ ಸಿಕ್ಕಿದೆ. ಅದೆಷ್ಟು ಕೋಟಿ ಅಕ್ರಮ ಹಣ ಸಿಕ್ಕಿದೆಯೋ ಗೊತ್ತಿಲ್ಲ. ಈ ಕೇಸಲ್ಲಿ ಡಿಕೆಶಿ ಮತ್ತೊಮ್ಮೆ ಜೈಲಿಗೆ ಹೋಗುವುದರಲ್ಲಿ ಯಾವ ಅನುಮಾನ ಇಲ್ಲ ಎಂದರು. ಇದನ್ನೂ ಓದಿ: ಶೀಘ್ರದಲ್ಲೇ ಬಿಜೆಪಿ ನೂತನ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ: ಬಿ.ವೈ ವಿಜಯೇಂದ್ರ
Web Stories