Districts
ದಸರಾ ಹಬ್ಬಕ್ಕೆ ರಜೆ ಕೇಳಿದಕ್ಕೆ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಜೆಸ್ಕಾಂ ಅಧಿಕಾರಿ

ಕಲಬುರಗಿ: ಸದಾ ಒಂದಿಲ್ಲಾ ಒಂದು ರೀತಿ ಸುದ್ದಿಯಲ್ಲಿರುವ ಕಲಬುರಗಿಯ ಜೆಸ್ಕಾಂ ಇಲಾಖೆ ಇದೀಗ ಮತ್ತೆ ಸುದ್ದಿಯಲ್ಲಿದೆ. ದಸರಾ ಹಬ್ಬದ ರಜೆ ಕೇಳಿದ್ದಕ್ಕೆ ಕಿರಿಯ ಅಧಿಕಾರಿಗಳಿಗೆ ಹಿರಿಯ ಅಧಿಕಾರಿಗಳು ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಇದರಿಂದ ಮಾನಸಿಕವಾಗಿ ನೊಂದ ಮಹಿಳಾ ಸಿಬ್ಬಂದಿ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಸ್ಪತ್ರೆಯ ಬೆಡ್ ಮೇಲಿರುವ ಮಹಿಳೆ ಹೆಸರು ರೂಪಾ. ಕಲಬುರಗಿಯ ಜೆಸ್ಕಾಂ ಇಲಾಖೆಯ ಲೆಕ್ಕಪತ್ರ ವಿಭಾಗದಲ್ಲಿ ಎಫ್‍ಡಿಎ ಆಗಿದ್ದಾರೆ. ಇವರು ಹಬ್ಬಕ್ಕೆ ರಜೆ ಕೊಡಿ ಅಂತಾ ಕೇಳಿದ್ದಕ್ಕೆ ಮೇಲಾಧಿಕಾರಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ರು ಎಂದು ಹೇಳಿದ್ದಾರೆ.
ಸಹಾಯಕ ಲೆಕ್ಕಾಧಿಕಾರಿ ಜಗದೇವಿ ಮತ್ತು ಡಿಸಿಎ ಶ್ರೀನಿವಾಸ್ ಬಾಯಿಗೆ ಬಂದಂತೆ ಬೈದಿದ್ದಾರೆ ಎನ್ನಲಾಗಿದೆ. ಇದರಿಂದ ಮಾನಸಿಕ ಅಘಾತಕ್ಕೆ ತುತ್ತಾದ ರೂಪ ಕಚೇರಿಯಲ್ಲಿಯೇ ಕುಸಿದುಬಿದ್ದಿದ್ದಾರೆ. ಕೂಡಲ್ಲೇ ಇತರೆ ಸಿಬ್ಬಂದಿ ರೂಪಾರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಇಬ್ಬರು ಆಫೀಸರ್‍ಗಳು ಕೇವಲ ರೂಪಾಗೆ ಮಾತ್ರವಲ್ಲದೇ ಇತರರಿಗೂ ಟಾರ್ಚ್‍ರ್ ಕೊಡ್ತಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಈ ಇಬ್ಬರ ವಿರುದ್ಧ ಹಿರಿಯ ಅಧಿಕಾರಿಗಳಿಗೆ ಎಲ್ಲಾ ಸಿಬ್ಬಂದಿ ದೂರು ನೀಡಿದ್ದಾರೆ. ಆದರೆ ಈ ಆರೋಪವನ್ನು ಶ್ರೀನಿವಾಸ್ ನಿರಾಕರಿಸುತ್ತಿದ್ದಾರೆ.
