ಬರ್ಲಿನ್: ಜರ್ಮನಿಯು (Germany) ಹಮಾಸ್‌ನ ಚಟುವಟಿಕೆಗಳ ಮೇಲೆ ಸಂಪೂರ್ಣ ನಿಷೇಧ ಘೋಷಿಸಿದೆ. ಇಸ್ರೇಲ್ (Israel) ವಿರೋಧಿ ಮತ್ತು ಯಹೂದ್ಯ ವಿರೋಧಿ ವಿಚಾರಗಳನ್ನು ಹರಡುತ್ತಿರುವ ಈ ಗುಂಪನ್ನು ವಿಸರ್ಜಿಸಲು ಆದೇಶಿಸಲಾಗಿದೆ.
ಜರ್ಮನಿಯ ಆಂತರಿಕ ಸಚಿವ ನ್ಯಾನ್ಸಿ ಫೈಸರ್, ಹಮಾಸ್ (Hamas) ಅಥವಾ ಅದನ್ನು ಬೆಂಬಲಿಸುವ ಚಟುವಟಿಕೆಯ ಮೇಲೆ ನಿಷೇಧ ಹೇರಲಾಗಿದೆ. ಇದನ್ನು ದೇಶದಲ್ಲಿ “ಭಯೋತ್ಪಾದಕ” ಸಂಘಟನೆ ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ – 195 ಮಂದಿ ಸಾವು
Advertisement
Advertisement
ಹಮಾಸ್ ಅಷ್ಟೇ ಅಲ್ಲ, ಇಸ್ರೇಲ್ ರಾಷ್ಟ್ರವನ್ನು ನಾಶಮಾಡುವ ಗುರಿ ಹೊಂದಿರುವ ಭಯೋತ್ಪಾದಕ ಸಂಘಟನೆಯ ಚಟುವಟಿಕೆಗಳನ್ನು ನಾವು ಸಂಪೂರ್ಣವಾಗಿ ನಿಷೇಧಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಹಮಾಸ್ ಅಧಿಕಾರಿಯೊಬ್ಬರು, ಪ್ಯಾಲೆಸ್ತೀನಿಯನ್ ಜನರ ವಿರುದ್ಧದ ಅಪರಾಧಗಳಲ್ಲಿ ಇಸ್ರೇಲ್‌ನೊಂದಿಗೆ ಜರ್ಮನಿ ಕೂಡ ಪಾಲುದಾರಿಕೆ ಹೊಂದಿದೆ ಎಂಬುದನ್ನು ಈ ನಿರ್ಧಾರ ತೋರಿಸುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
Advertisement
ಅ.7 ರಿಂದ ನಡೆಯುತ್ತಿರುವ ಸಂಘರ್ಷದಲ್ಲಿ ಕನಿಷ್ಠ 1,400 ಮಂದಿ ಹತ್ಯೆಯಾಗಿದ್ದಾರೆ. ಅದರಲ್ಲಿ ಹೆಚ್ಚಿನವರು ನಾಗರಿಕರೇ ಸೇರಿದ್ದಾರೆ. ಹಮಾಸ್ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು ಇಸ್ರೇಲ್ ಗಾಜಾದ ಮೇಲೆ ಬಾಂಬ್ ದಾಳಿ ಮಾಡಿದೆ. ಪ್ರದೇಶದ ಮೇಲೆ ತನ್ನ ದಿಗ್ಬಂಧನವನ್ನು ಬಿಗಿಗೊಳಿಸಿದೆ. ಇಂಧನ, ಆಹಾರ, ನೀರು ಮತ್ತು ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಿದೆ. ಇದನ್ನೂ ಓದಿ: ಇಸ್ರೇಲ್‌ಗೆ ಪಾಠ ಕಲಿಸದೇ ಬಿಡಲ್ಲ: ಗುಡುಗಿದ ಹಮಾಸ್
Advertisement
ಗಾಜಾದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 3,760 ಮಕ್ಕಳು ಸೇರಿದಂತೆ 9,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಅಧಿಕಾರಿಗಳು ತಿಳಿಸಿದ್ದಾರೆ. ಗಾಜಾದಲ್ಲಿ (Gaza) ಜನರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಹೀಗಾಗಿ ಇಸ್ರೇಲ್ ನಿಯಂತ್ರಣದಲ್ಲಿ ಇಲ್ಲದ ರಫಾ ಕ್ರಾಸಿಂಗ್ ಗಡಿ ದಾಟಿ ಈಜಿಪ್ಟ್‌ಗೆ ಜನರು ವಲಸೆ ಹೋಗುತ್ತಿದ್ದಾರೆ.
Web Stories