ಬರ್ಲಿನ್: ಪಕ್ಷಿಗಳಿಂದಾಗಿ 17 ಎಕರೆ ಜಾಗಕ್ಕೆ ಬೆಂಕಿ ಹತ್ತಿ ನಂತರ ಹೆಲಿಕಾಪ್ಟರ್ ಬಳಸಿ ಅಗ್ನಿಯನ್ನು ನಂದಿಸಿದ ಘಟನೆ ಜರ್ಮನಿಯಲ್ಲಿ ನಡೆದಿದೆ.
ಜರ್ಮನಿಯ ರೋಸ್ಟಾಕ್ ನ ಡಿಯಾರಕೌ ಎಂಬಲ್ಲಿ ಬೆಂಕಿ ಅವಘಡ ಸಂಬಂಧಿಸಿದೆ. ಸ್ಥಳೀಯ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
Advertisement
ಬೆಂಕಿ ಹತ್ತಿದ್ದು ಹೇಗೆ?: ಎರಡು ಪಕ್ಷಿಗಳು ಹಾರಾಡುತ್ತಾ ರೈಲ್ವೆಯ ವಿದ್ಯುತ್ ತಂತಿಗೆ ತಾಗಿವೆ. ಕೂಡಲೇ ಪಕ್ಷಿಗಳಿಗೆ ಬೆಂಕಿ ಹತ್ತಿಕೊಂಡು ಒಣ ಪ್ರದೇಶದಲ್ಲಿದ ಹುಲ್ಲಿನ ಮೇಲೆ ಬಿದ್ದಿವೆ. ಪಕ್ಷಿಗಳಿಗೆ ತಗುಲಿದ್ದ ಬೆಂಕಿ ನೇರವಾಗಿ ಜಮೀನಿನಲ್ಲಿಯ ಒಣ ಹುಲ್ಲಿಗೆ ಆವರಿಸಿದೆ. ಕೊನೆಗೆ 17 ಎಕರೆ ಜಮೀನಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
Advertisement
ಬೆಂಕಿಯನ್ನು ಸಂಪೂರ್ಣ ನಂದಿಸಲಾಗಿದೆ. ರೈಲ್ವೆಯ ವಿದ್ಯುತ್ ತಂತಿಗಳಿಂದ ಪಕ್ಷಿಗಳಿಗೆ ವಿದ್ಯುತ್ ಪ್ರವಹಿಸಿ ಅವಘಡ ಸಂಭವಿಸಿತ್ತು. ಸದ್ಯಕ್ಕೆ 7 ಹೆಕ್ಟೇರ್ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ನಂದಿಸಲಾಗಿದೆ. ಆದ್ರೆ ಒಟ್ಟು ಬೆಂಕಿಗಾಹುತಿಯಾದ ಪ್ರದೇಶದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಬೆಂಕಿ ಅವಘಡ ಸಂಭವಿಸಿದ ಘಟನಾ ಸ್ಥಳದ ನಿವಾಸಿಗಳು ಆರೋಗ್ಯದಿಂದ ಮತ್ತು ಸುರಕ್ಷಿತವಾಗಿ ಇದ್ದಾರೆ ಎಂದು ಸ್ಥಳೀಯ ಅಗ್ನಿಶಾಮಕ ಇಲಾಖೆ ಫೇಸ್‍ಬುಕ್‍ನಲ್ಲಿ ಸ್ಪಷ್ಟನೆ ನೀಡಿದೆ.