ಬರ್ಲಿನ್: ಇಸ್ರೇಲ್ (Israel) ಮೇಲೆ ದಾಳಿ ಮಾಡಿದ ಹಮಾಸ್ (Hamas) ಉಗ್ರರು ಅರೆಬೆತ್ತಲಾಗಿ ಮೆರವಣಿಗೆ ಮಾಡಿದ್ದ ಯುವತಿ ಶಾನಿ ಲೌಕ್ (Shani Louk) ಇನ್ನೂ ಜೀವಂತವಾಗಿದ್ದಾಳೆ, ಆಕೆಯನ್ನು ರಕ್ಷಿಸಿ ಎಂದು ಆಕೆಯ ತಾಯಿ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ವೀಯೋವನ್ನು ಸಾಮಾಜಿಕ ಜಾಲತಾಣಗದಲ್ಲಿ ಬಿಡುಗಡೆ ಮಾಡಿರುವ ಶಾನಿ ಲೌಕ್ ತಾಯಿ ರಿಕಾರ್ಡಾ ಲೌಕ್, ನನ್ನ ಮಗಳು ಇನ್ನೂ ಜೀವಂತವಾಗಿದ್ದಾಳೆ. ಆಕೆ ಹಮಾಸ್ ಆಸ್ಪತ್ರೆಯಲ್ಲಿ ಇರುವುದಾಗಿ ಗಾಜಾ ಪಟ್ಟಿಯಲ್ಲಿರುವ ನನ್ನ ಕುಟುಂಬದ ಸ್ನೇಹಿತರು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
Advertisement
Advertisement
ಶಾನಿ ಇನ್ನೂ ಜೀವಂತವಾಗಿದ್ದಾಳೆ. ಆದರೆ ಆಕೆಯ ತಲೆಗೆ ಗಂಭೀರವಾದ ಗಾಯವಾಗಿದೆ. ಆಕೆ ಗಂಭೀರ ಸ್ಥಿತಿಯಲ್ಲಿದ್ದಾಳೆ. ಆಕೆಯ ಜೀವ ಪ್ರತಿ ನಿಮಿಷವೂ ನಿರ್ಣಾಯಕ ಸ್ಥಿತಿಯಲ್ಲಿದೆ. ನಾವು ಜರ್ಮನ್ (German) ಸರ್ಕಾರವನ್ನು ತ್ವರಿತವಾಗಿ ಕಾರ್ಯನಿರ್ವಹಿಸುವಂತೆ ಕೇಳಿಕೊಳ್ಳುತ್ತಿದ್ದೇವೆ ಎಂದು ಮಹಿಳೆ ವೀಡಿಯೋದಲ್ಲಿ ಹೇಳಿದ್ದಾರೆ.
Advertisement
ಅಧಿಕಾರದ ಪ್ರಶ್ನೆಯ ಬಗ್ಗೆ ಯಾರೂ ವಾದಿಸಕೂಡದು. ಶಾನಿಯನ್ನು ಗಾಜಾ ಪಟ್ಟಿಯಿಂದ ಹೊರತರಲು ತಕ್ಷಣವೇ ಕಾರ್ಯನಿರ್ವಹಿಸಬೇಕು. ಶಾನಿಯನ್ನು ಜೀವಂತವಾಗಿ ಹಾಗೂ ಆರೋಗ್ಯವಾಗಿ ಮನೆಗೆ ಮರಳಿ ಕರೆತರಲು ಜರ್ಮನಿ ಅಧಿಕಾರಿಗಳಿಗೆ ಇದು ನನ್ನ ಕಡೆಯ ಮನವಿ ಎಂದು ಅವರು ಹೇಳಿದ್ದಾರೆ.
Advertisement
ಶಾನಿ ಇನ್ನೂ ಬದುಕಿದ್ದಾಳೆ ಎಂದು ಮಾಹಿತಿ ನೀಡಿರುವ ಮಹಿಳೆಯ ಕುಟುಂಬದ ಸ್ನೇಹಿತರಿಗೆ ಸ್ವತಃ ಹಮಾಸ್‌ನ ಆಸ್ಪತ್ರೆಯಲ್ಲಿ ಆಕೆಯನ್ನು ಭೇಟಿಯಾಗಲು ಅವಕಾಶ ನೀಡಲಾಗಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ಇಸ್ರೇಲ್‌ಗೆ ಬಂದಿಳಿದ ಅಮೆರಿಕದ ಶಸ್ತ್ರಾಸ್ತ್ರ ಹೊತ್ತ ಮೊದಲ ವಿಮಾನ – ಇಸ್ರೇಲ್‌ಗೆ ನೂರಾನೆ ಬಲ
ಶಾನಿ ಲೌಕ್ ಟ್ಯಾಟೂ ಕಲಾವಿದೆಯಾಗಿದ್ದು, ಶನಿವಾರ ಗಾಜಾ ಪಟ್ಟಿಯ ಸಮೀಪ ನಡೆದ ಟ್ರೈಬ್ ಆಫ್ ಸೂಪರ್‌ನೋವಾ ಸಂಗೀತ ಉತ್ಸವದಲ್ಲಿ ಪಾಲ್ಗೊಂಡಿದ್ದಳು. ಇದೇ ವೇಳೆ ಹಮಾಸ್ ಉಗ್ರರು ಅಲ್ಲಿ ದಾಳಿ ನಡೆಸಿ, ಶಾನಿ ಸೇರಿದಂತೆ ಹಲವು ಯುವತಿಯರನ್ನು ಅಪಹರಿಸಿ ಒತ್ತೆಯಾಳಾಗಿಟ್ಟಿದ್ದರು. ಉಗ್ರರು ಶಾನಿಯನ್ನು ಪಿಕಪ್ ಟ್ರಕ್‌ನ ಹಿಂಭಾಗದಲ್ಲಿ ಹಿಂಸಾತ್ಮಕ ರೀತಿಯಲ್ಲಿ ತುಂಬಿ, ಅರೆಬೆತ್ತಲೆ ಸ್ಥಿತಿಯಲ್ಲಿ ಮೆರವಣಿಗೆ ಮಾಡಿದ್ದರು. ಈ ವೀಡಿಯೋ ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಮಾತ್ರವಲ್ಲದೆ ಹಮಾಸ್ ಉಗ್ರರ ಕ್ರೌರ್ಯ ಜಾಗತಿಕವಾಗಿ ಕೆಂಗಣ್ಣಿಗೆ ಕಾರಣವಾಗಿದೆ.
ಶಾನಿ ಲೌಕ್ ಅರೆಬೆತ್ತಲಾಗಿ ಮೆರವಣಿಗೆ ಮಾಡಿದ್ದ ಸಂದರ್ಭ ರಕ್ತಸಿಕ್ತ ಸ್ಥಿತಿಯಲ್ಲಿ ಹಾಗೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಈ ಹಿನ್ನೆಲೆ ಆಕೆಯನ್ನು ಹಮಾಸ್ ಉಗ್ರರು ಕೊಂದಿರಬಹುದು ಎನ್ನಲಾಗಿತ್ತು. ಈ ಹಿನ್ನೆಲೆ ಆಕೆಯ ತಾಯಿ ಇದಕ್ಕೂ ಮೊದಲು ವೀಡಿಯೋ ಮಾಡಿ, ನನ್ನ ಮಗಳ ಶವವನ್ನಾದರೂ ಕೊಡಿ ಎಂದು ಕೇಳಿಕೊಂಡಿದ್ದರು. ಇದನ್ನೂ ಓದಿ: ಹಮಾಸ್-ಇಸ್ರೇಲ್ ಸಂಘರ್ಷದಲ್ಲಿ 14 ಅಮೆರಿಕನ್ನರ ಸಾವು; ದಾಳಿಯನ್ನು ಖಂಡಿಸಿದ ಜೋ ಬೈಡನ್
Web Stories