ಪಾಟ್ನಾ: ಪ್ರೀತಿಗೆ ಜಾತಿ, ಧರ್ಮ, ಭಾಷೆ ಇಲ್ಲ ಎಂಬುವುದಕ್ಕೆ ಸಾಕಷ್ಟು ಉದಾಹರಣೆಗಳಿದೆ. ಪ್ರೀತಿ ಎಂತಹವರ ಹೃದಯವನ್ನು ಸಹ ಕರಗಿಸುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಜರ್ಮನಿಯ ಮಹಿಳೆಯೊಬ್ಬಳು ಬಿಹಾರದ ನವಾಡದ ವ್ಯಕ್ತಿಯೊಂದಿಗೆ ಭಾರತೀಯ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದಾರೆ. ಇದೀಗ ಈ ದಂಪತಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ಲಾರಿಸ್ಸಾ ಬೆಲ್ಚ್ ಅವರು ಜರ್ಮನಿಯಲ್ಲಿ ಹುಟ್ಟಿ ಬೆಳೆದರು. ಇದೀಗ ಬಿಹಾರದ ನವಾಡದ ಸತ್ಯೇಂದ್ರ ಕುಮಾರ್ ಅವರನ್ನು ವಿವಾಹವಾಗಿದ್ದಾರೆ. ಇಬ್ಬರು ಸ್ವೀಡನ್‍ನಲ್ಲಿ ಸಂಶೋಧನಾ ವಿದ್ಯಾರ್ಥಿಗಳಾಗಿದ್ದು, ಸತ್ಯೇಂದ್ರ ಅವರು ಚರ್ಮದ ಕ್ಯಾನ್ಸರ್ ಸಂಶೋಧನೆ ನಡೆಸುತ್ತಿದ್ದರೆ, ಲಾರಿಸ್ಸಾ ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ಸಂಶೋಧನೆ ನಡೆಸುತ್ತಿದ್ದರು. ಇದನ್ನೂ ಓದಿ: ರೇಣುಕಾಚಾರ್ಯ, ಪ್ರತಾಪಸಿಂಹ ವಿರುದ್ಧದ 4 ಕೇಸ್ ವಾಪಸ್ ಪಡೆದ ಸರ್ಕಾರ- ಹೈಕೋರ್ಟ್ ಗರಂ
Advertisement
Advertisement
2019 ಇಬ್ಬರಿಗೂ ಪರಿಚಯವಾಗಿ ನಂತರ ಸ್ನೇಹದಿಂದ ಪರಸ್ಪರ ಪ್ರೀತಿಸಲು ಆರಂಭಿಸಿದರು. ಮೂರು ವರ್ಷಗಳ ಬಳಿಕ ಇದೀಗ ಸಪ್ತಪದಿ ತುಳಿದಿದ್ದಾರೆ. ಸದ್ಯ ವೈರಲ್ ಆಗುತ್ತಿರುವ ಫೋಟೋದಲ್ಲಿ ಲಾರಿಸ್ಸಾ ಕೆಂಪು ಬಣ್ಣದ ಲೆಹೆಂಗಾ ತೊಟ್ಟು, ಚಿನ್ನಾಭರಣ ಧರಿಸಿ ದೇಸಿ ಲುಕ್‍ನಲ್ಲಿ ಮಿಂಚುತ್ತಿದ್ದರೆ, ಸತ್ಯೇಂದ್ರ ಅವರು ಗೋಲ್ಡನ್ ಕಲರ್ ಶೇರ್ವಾನಿ ಧರಿಸಿರುವುದನ್ನನು ಕಾಣಬಹುದಾಗಿದೆ.
Advertisement
ಭಾರತದ ಬಗ್ಗೆ ಮಾತನಾಡಿರುವ ಲಾರಿಸ್ಸಾ, ಇಬ್ಬರೂ ಭಾರತೀಯ ಸಂಪ್ರದಾಯದಂತೆ ಮದುವೆಯಾಗಲು ಬಯಸಿದೇವು. ಇಲ್ಲಿನ ಭಾಷೆ ಹಾಗೂ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಬಹಳ ಉತ್ಸುಕಳಾಗಿದ್ದೇನೆ. ನಾನು ಭಾರತದಲ್ಲಿಯೇ ನನ್ನ ಜೀವನವನ್ನು ಆನಂದದಿಂದ ಕಳೆಯಲು ಬಂದಿದ್ದೇನೆ. ಇಲ್ಲಿನ ಜನರು ತುಂಬಾ ಒಳ್ಳೆಯವರು, ನಮ್ಮ ಸಂಸ್ಕೃತಿಗೂ, ಭಾರತೀಯ ಸಂಸ್ಕೃತಿಗೂ ವ್ಯತ್ಯಾಸವಿದೆ. ನನಗೆ ಹಿಂದಿ ಹೆಚ್ಚು ಅರ್ಥವಾಗುವುದಿಲ್ಲ. ಆದರೆ ಸತ್ಯೇಂದ್ರ ಅವರು ಅನುವಾದಿಸಲು ಸಹಾಯ ಮಾಡುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ನೀರು ಕುಡಿಯೋಕೆ ಹೊರಟ ಅಶೋಕ್ ಕಾಲೆಳೆದ ಸಿದ್ದರಾಮಯ್ಯ, ಯಡಿಯೂರಪ್ಪ..!
German woman, Bihar man, marriage, Hindu tradition