ಬರ್ಲಿನ್: 45 ವರ್ಷದ ಹಿಂದೆ ಮೊದಲ ಮಗುವಿಗೆ ಜನ್ಮ ನೀಡಿದ ಜರ್ಮನಿಯ ತಾಯಿಯೊಬ್ಬರು (German Woman) ಈಗ 66ನೇ ವಯಸ್ಸಿನಲ್ಲಿ 10ನೇ ಮಗುವಿಗೆ ಜನ್ಮ ನೀಡಿ ಸುದ್ದಿಯಾಗಿದ್ದಾರೆ.
ಅಲೆಕ್ಸಾಂಡ್ರಾ ಹಿಲ್ಡೆಬ್ರಾಂಡ್ಟ್ (Alexandra Hildebrandt) ಬರ್ಲಿನ್‌ನ (Berlin) ಚೆಕ್‌ಪಾಯಿಂಟ್ ಚಾರ್ಲಿಯಲ್ಲಿರುವ ವಾಲ್ ಮ್ಯೂಸಿಯಂನ ಮಾಲೀಕೆ ಹಾಗೂ ನಿರ್ವಾಹಕಿಯಾಗಿ ಕೆಲಸ ಮಾಡುತ್ತಾರೆ. ಇದೇ ಮಾ.19 ರಂದು ಜರ್ಮನ್ ನಗರದ ಚರೈಟ್ ಆಸ್ಪತ್ರೆಯಲ್ಲಿ (Charite Hospital) ಸಿಸೇರಿಯನ್ ಮೂಲಕ ಫಿಲಿಪ್ ಎಂಬ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗು 3.13 ಕೆ.ಜಿ ತೂಕ ಹೊಂದಿದ್ದು, ಆರೋಗ್ಯವಾಗಿದೆ.ಇದನ್ನೂ ಓದಿ:ಅಂಬುಲೆನ್ಸ್‌ನಲ್ಲೇ 14ನೇ ಮಗುವಿಗೆ ಜನ್ಮ- 50ರ ಬಾಣಂತಿ ತಾಯಿ ಜೊತೆ ಇದ್ದ 22ರ ಮಗ
70ರ ದಶಕದ ಉತ್ತರಾರ್ಧದಲ್ಲಿ ಅಲೆಕ್ಸಾಂಡ್ರಾ ಹಿಲ್ಡೆಬ್ರಾಂಡ್ ಅವರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದರು. ಬಳಿಕ ಅವರಿಗೆ 50 ವರ್ಷ ತುಂಬಿದ ನಂತರ ಎಂಟು ಮಕ್ಕಳು ಜನಿಸಿದ್ದು, ಸಿಸೇರಿಯನ್ ಮೂಲಕ ಜನ್ಮ ನೀಡಿದ್ದಾರೆ. ಮೊದಲ ಮಗಳನ್ನು ಸ್ವೆಟ್ಲಾನಾ (46), ಆರ್ಟಿಯೋಮ್ (36), ಅವಳಿ ಮಕ್ಕಳಾದ ಎಲಿಜಬೆತ್ & ಮ್ಯಾಕ್ಸಿಮಿಲಿಯನ್ (12), ಅಲೆಕ್ಸಾಂಡ್ರಾ (10), ಲಿಯೋಪೋಲ್ಡ್ (8), ಅನ್ನಾ (7), ಮಾರಿಯಾ (4) ಹಾಗೂ ಕ್ಯಾಥರೀನಾ (2) ಇತ್ತೀಚಿಗೆ ಜನಿಸಿದ ಮಗುವನ್ನು ಫಿಲಿಪ್ ಎಂದು ತಿಳಿಸಿದ್ದಾರೆ.
ಈ ಕುರಿತು ಹಿಲ್ಡೆಬ್ರಾಂಡ್ ಅವರು ಮಾತನಾಡಿ, ದೊಡ್ಡ ಕುಟುಂಬವನ್ನು ಬೆಳೆಸುವುದು ಅದ್ಭುತವಾದ ಸಂಗತಿ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ, ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸುವುದು ಮುಖ್ಯವಾಗಿದೆ. ನಾನು ಯಾವಾಗಲೂ ಆರೋಗ್ಯಕರವಾಗಿರುವುದನ್ನು ತಿನ್ನುತ್ತೇನೆ. ದಿನನಿತ್ಯ ಒಂದು ಗಂಟೆ ಈಜು, ಎರಡು ಗಂಟೆಗಳ ಕಾಲ ವ್ಯಾಯಾಮ ಮಾಡುತ್ತೇನೆ. ಧೂಮಪಾನ, ಮದ್ಯಪಾನ ಮಾಡುವುದಿಲ್ಲ ಎಂದು ತಿಳಿಸಿದರು.
ಇನ್ನೂ ಹಿಲ್ಡೆಬ್ರಾಂಡ್ ಅವರ ಸ್ತ್ರೀರೋಗ ತಜ್ಞ ಡಾ.ವೋಲ್ಫ್ಗ್ಯಾಂಗ್ ಹೆನ್ರಿಚ್ ಮಾತನಾಡಿ, ಉತ್ತಮ ದೈಹಿಕ ರಚನೆ ಮತ್ತು ಮಾನಸಿಕ ಶಕ್ತಿಯಿಂದಾಗಿ ಅವರು ಸರಳವಾಗಿ ಗರ್ಭಧಾರಣೆ ಮಾಡಿಕೊಂಡಿದ್ದಾರೆ. ಅವರು ಇಲ್ಲಿಯವರೆಗೆ ಯಾವುದೇ ರೀತಿಯ ಗರ್ಭನಿರೋಧಕಗಳನ್ನು ಬಳಸದಿರುವುದು ಅವರಿಗೆ ಸಹಾಯಕವಾಗಿದೆ ಎಂದು ಹೇಳಿದರು.
ವೃದ್ಧಾಪ್ಯದಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದು ಇದೇ ಮೊದಲಲ್ಲ. 2023ರ ನವೆಂಬರ್‌ನಲ್ಲಿ ಉಗಾಂಡಾ ಮೂಲದ ಸಫಿನಾ ನಮಕ್ವಾಯಾ, 70ನೇ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದರು.ಇದನ್ನೂ ಓದಿ:ಸರ್ಕಾರ ಗಾಳಿಯೊಂದನ್ನ ಬಿಟ್ಟು ಎಲ್ಲಾ ಬೆಲೆ ಏರಿಕೆ ಮಾಡಿದೆ: ವಿಜಯೇಂದ್ರ ಕಿಡಿ