ವಾಷಿಂಗ್ಟನ್: ಸ್ಟಾರ್‌ಲಿಂಕ್ ಕಂಪನಿ ಅಗ್ಗದ ಇಂಟರ್‍ನೆಟ್ ಒದಗಿಸುವ ನಿಟ್ಟಿನಲ್ಲಿ ಉಡಾಯಿಸಿದ್ದ 40 ಉಪಗ್ರಹಗಳು ಭೂಕಾಂತೀಯ ಬಿರುಗಾಳಿಗೆ ಸಿಲುಕಿ ನಾಶವಾಗಿವೆ ಎಂದು ಕಂಪನಿ ತಿಳಿಸಿದೆ.
ವಿಶ್ವದ ಶ್ರೀಮಂತ ಎಲೋನ್ ಮಸ್ಕ್‍ನ ಸ್ಪೇಸ್‍ಎಕ್ಸ್ ಸ್ಟಾರ್‍ಲಿಂಕ್‍ನ 40 ಉಪಗ್ರಹಗಳು ಭೂಕಾಂತೀಯ ಬಿರುಗಾಳಿಗೆ ಸಿಲುಕಿ ನಾಶವಾಗಿವೆ. ಇವುಗಳನ್ನು ಕಳೆದ ವಾರ ಉಡಾವಣೆ ಮಾಡಲಾಗಿತ್ತು ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಶುಭ ಸುದ್ದಿ – ಅಂತಿಮ ಹಂತದಲ್ಲಿದೆ 5ಜಿ ನೆಟ್ವರ್ಕ್
Advertisement
Advertisement
ಬಿರುಗಾಳಿಯ ತೀವ್ರತೆ ಹೆಚ್ಚಿದ್ದ ಕಾರಣ ವಾತಾವರಣದ ಸೆಳೆತವನ್ನು ತಡೆಯಲಾರದೇ ಉಪಗ್ರಹಗಳು ಹಾಳಾಗಿವೆ. ಸ್ಟಾರ್‍ಲಿಂಕ್ ತಂಡ ಉಪಗ್ರಹಗಳನ್ನು ರಕ್ಷಿಸಲು ಸುರಕ್ಷಿತ ಮೋಡ್‍ಗೆ ಚಾಲನೆ ನೀಡಿತ್ತು ಎಂದಿದೆ.
Advertisement
ಈಗಾಗಲೇ ಸ್ಪೇಸ್‍ಎಕ್ಸ್ 2,000 ಉಪಗ್ರಹಗಳನ್ನು ಉಡಾಯಿಸುವಲ್ಲಿ ಯಶಸ್ವಿಯಾಗಿದೆ. ಪ್ರಪಂಚದ ವಿವಿಧ ಭಾಗಗಳಿಗೆ ಅಗ್ಗದ ಇಂಟರ್‍ನೆಟ್ ಸೇವೆ ಒದಗಿಸಲು 12,000 ಉಪಗ್ರಹಗಳನ್ನು ಹಾರಿಸುವ ಯೋಜನೆ ಮಾಡಿದೆ. ಇದನ್ನೂ ಓದಿ: ಖಾಸಗಿ ಸಂಸ್ಥೆಯಲ್ಲಿ ಭಾರೀ ಅಗ್ನಿ ಅವಘಡ
Advertisement
ಉಪಗ್ರಹಗಳು ಹಾಳಾದರೂ ಅದರ ಭಾಗಗಳು ಭೂಮಿಗೆ ಅಪ್ಪಳಿಸುವ ಭೀತಿ ಇಲ್ಲ. ಏಕೆಂದರೆ ಅವು ಮತ್ತೆ ಭೂಮಿಯ ವಾತಾವರಣವನ್ನು ಪ್ರವೇಶಿಸಿದ್ದಲ್ಲಿ ಅವುಗಳ ರೂಪ ಅವನತಿ ಹೊಂದುತ್ತದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.