ದಿನಬೆಳಗಾದರೆ ಸಾಕು ಚಿತ್ರರಂಗದಲ್ಲಿ ಏನಾದರೊಂದಿಷ್ಟು. ಜ್ಯೂಸಿ ಸುದ್ದಿಗಳು ಕಿವಿಗೆ ಬೀಳ್ತಾನೇ ಇರ್ತಾವೆ. ಅದ್ರಲ್ಲೂ ಗಾಂಧಿನಗರ ದಲ್ಲೊಂತೂ ಹೊಸ ಚಿತ್ರಗಳ ಸೆಟ್ಟೇರುವಿಕೆ,ರೆಡಿಯಾದ ಚಿತ್ರಗಳ ಬಿಡುಗಡೆಯ ಸದ್ದು ಜೋರಾಗಿನೇ ಇರತ್ತೆ.ಈ ಭಾರಿ ಥಿಯೇಟರ್ ಗೆ ಕಾಲಿಡೋಕೆ ರೆಡಿಯಾಗ್ತ ಸದ್ದು ಮಾಡ್ತಿರೋ ಸಿನ್ಮಾಗಳ ಪೈಕಿ, ‘ಜಂಟಲ್‍ಮನ್’ ಸಹ ಒಬ್ಬನು.
ಯಾರೀ ಜಂಟಲ್ ಮನ್ ಅಂತ ಥಿಂಕ್ ಮಾಡೋ ಅವಶ್ಯಕತೆ ಇಲ್ಲ.ಯಾಕಂದ್ರೆ ಈಗಾಗಲೇ ಗಾಂಧಿನಗರದಲ್ಲಿ ಡೈನಮಿಕ್ ಫ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಈ ಚಿತ್ರ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದಾಗಿದೆ.
Advertisement
Advertisement
ಜಡೇಶ್ ಕುಮಾರ್ ಹಂಪಿ ಆ್ಯಕ್ಷನ್ ಕಟ್ ನ ಈ ವಿಭಿನ್ನ ಕಥಾಹಂದರದ ಚಿತ್ರಕ್ಕೆ ಗುರುದೇಶ್ ಪಾಂಡೆ ನಿರ್ಮಾಪಕರಾಗಿದ್ದಾರೆ.ಇನ್ನು ಚಿತ್ರದಲ್ಲಿ ಪ್ರಜ್ವಲ್ ಗೆ ನಿಶ್ವಿಕಾ ನಾಯ್ಡು ನಾಯಕಿಯಾಗಿ ತೆರೆಹಂಚಿಕೊಂಡಿದ್ದಾರೆ. ಇನ್ನುಳಿದಂತೆ ಬೇಬಿ ಆರಾಧ್ಯಳ ಮುಗ್ಧತೆ ಚಿತ್ರದುದ್ದಕ್ಕೂ ಮೋಡಿಮಾಡೋಕೆ ರೆಡಿ ಇದೆ. ಸಂಚಾರಿ ವಿಜಯ್ ಅವರ ಸ್ಪೆಷಲ್ ಅಪಿಯರೆನ್ಸ್ ಚಿತ್ರದಲ್ಲಿದೆ.
Advertisement
ಈಗಾಗಲೇ ಟ್ರೈಲರ್, ಟೀಸರ್, ಪೋಸ್ಟರ್ ಅಂತ ಸದ್ದು ಮಾಡಿರೋ ಈ ಜಂಟಲ್‍ಮನ್, ಸ್ವಲ್ಪ ಜೋರಾಗಿನೇ ಸದ್ದು ಮಾಡ್ತ ಥಿಯೇಟರ್ ಗೆ ಬರೋಕೇನೋ ರೆಡಿಯಾಗಿದ್ದಾನೆ. ಇನ್ನು ಇದೇ 7 ಕ್ಕೆ ತೆರೆಮೇಲೆ ರಾರಾಜಿಸಲಿರೋ ಜಂಟಲ್‍ಮನ್‍ನ ಗುಣಗಾನ ಮಾಡಿ, ವೆಲ್ಕಮ್ ಮಾಡಿಕೊಳ್ಳೊದೊಂದೇ ಬಾಕಿ.