ಹಲವು ವಿಶೇಷತೆಯೊಂದಿಗೆ ರಿಲೀಸ್‍ಗೆ ರೆಡಿಯಾಗಿರೋ ಚಿತ್ರ ‘ಜಂಟಲ್ ಮನ್’. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ನಿಶ್ವಿಕಾ ನಾಯ್ಡು ಕಾಂಬಿನೇಷನ್‍ನ ಜಂಟಲ್ ಮನ್ ಹೆಸರಿನಂತೆ ಸೈಲೆಂಟಾಗಿರದೇ, ಗಾಂಧಿನಗರದ ಮಂದಿಯಲ್ಲಿ ರಿಲೀಸ್‍ಗೂ ಮುನ್ನ ನಿದ್ದೆ ಕದ್ದಿದ್ದಾನೆ. ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಈ ಚಿತ್ರದ ಟೀಸರ್, ಟ್ರೈಲರ್ ಹಾಗೂ ಹಾಡುಗಳನ್ನ ಕೇಳಿ ಈಗಾಗಲೇ ಚಿತ್ರನೋಡಲೇ ಬೇಕಪ್ಪ ಅಂತ ಜನವರಿ 31 ರಿಲೀಸ್ ಡೇಟ್ ನ ಎದುರು ನೋಡುತ್ತಿದ್ದಾರೆ.
Advertisement
ಈ ಮಧ್ಯೆ ಚಿತ್ರದಿಂದ ಬ್ಯೂಟಿಫುಲ್ ವೀಡಿಯೋಸಾಂಗ್ ಒಂದು ರಿಲೀಸ್ ಆಗಿ ಸಿನಿಪ್ರಿಯರ ಬಾಯಲ್ಲಿ ಗುನುಗೋಕೆ ಶುರುಮಾಡಿದೆ. ಹೌದು. ಅರೆರೆ ಶುರುವಾಯ್ತು ಹೀಗೆ ಅನ್ನೋ ಜಯಂತ್ ಕಾಯ್ಕಿಣಿಯವರ ರೋಮ್ಯಾಂಟಿಕ್ ಸರ್ಪ್ರೈಸ್ ಸಾಂಗ್ ಯೂ ಟ್ಯೂಬ್ ನಲ್ಲಿ ಮೋಡಿ ಮಾಡುತ್ತಿದೆ. ಈ ಹಾಡು ನಾಯಕಿ ನಿಶ್ವಿಕಾಗೆ ಪ್ರಜ್ಜು ಸರ್ಪ್ರೈಸ್ ನೀಡೋ ಸನ್ನಿವೇಷದಂತಿದ್ದು, ಹಾಡಿನಲ್ಲಿ ವಿಜಯ್ ಪ್ರಕಾಶ್ ಅವರ ಧ್ವನಿ ಅಜನೀಶ್ ಬಿ ಲೋಕನಾಥ್ ಅವರ ಅವರ ಸಂಗೀತ ನಿರ್ದೇಶನದಲ್ಲಿ ಗಾನಪ್ರಿಯರ ಬಾಯಲ್ಲಿ ನೋ ವರ್ಡ್ಸ್ ಅನ್ನುವಂತೆ ಮಾಡಿದೆ.
Advertisement
Advertisement
ಇನ್ನುಳಿದಂತೆ ಚಿತ್ರಕ್ಕೆ ಗುರುದೇಶಪಾಂಡೆ ಅವರು ನಿರ್ಮಾಪಕರಾಗಿದ್ದು, ಚಿತ್ರದಲ್ಲಿ ಸಂಚಾರಿ ವಿಜಯ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಕಥೆಯ ಎಳೆಯಾಧಾರಿತ ಜಂಟಲ್ ಮನ್, ವೈಲೆಂಟ್ ಅವತಾರದಲ್ಲಿ ಕಾಣಿಸಿಕೊಳ್ಳೋದ್ಯಾಕೆ..? ದಿನದ ಹದಿನೆಂಟು ಗಂಟೆ ನಿದ್ರೆಯಲ್ಲೇ ಕಳೆದು ಉಳಿದ ಆರು ಗಂಟೆಯಲ್ಲಿ ಚಿತ್ರದ ಹೀರೋ ಆಗೋದು ಹೇಗೆ ಅನ್ನೋದನ್ನ ನೀವು ನೋಡ್ಬೇಕಂದರೆ ಇದೇ 31 ರ ಕಾಯಲೇಬೇಕು. ಅಲ್ಲಿಯವರೆಗೆ ರಿಲೀಸ್ ಆದ ಈ ಬ್ಯೂಟಿಫುಲ್ ವೀಡಿಯೋ ಸಾಂಗ್ ನೋಡಿ ಚಿಲ್ ಮಾಡಬಹುದು.