– ಭಾರೀ ಚರ್ಚೆಗೆ ಕಾರಣವಾಯ್ತು ಜೆಡಿಯು ನಾಯಕನ ನಡೆ
ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಸಮಾವೇಶದಲ್ಲಿ ವಂದೇ ಮಾತರಂ ಘೋಷಣೆ ಕೂಗಿದಾಗ ನಿತೀಶ್ ಕುಮಾರ್ ಮೌನವಾಗಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಹಾರದ ದರ್ಭಂಗದಲ್ಲಿ ಏಪ್ರಿಲ್ 25ರಂದು ನಡೆದ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಎನ್‍ಡಿಎ ಮೈತ್ರಿಕೂಟದ ನಾಯಕರು ಭಾಗವಹಿಸಿದ್ದರು. ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ನರೇಂದ್ರ ಮೋದಿ ಅವರು ಭಾಷಣ ಮಾಡಿ, ಕೊನೆಗೆ ವಂದೇ ಮಾತರಂ, ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಿದ್ದಾರೆ. ಎಲ್ಲ ನಾಯಕರು ಜೈಕಾರ ಹೇಳಿದ್ದಾಹ ಬಿಹಾರದ ಸಿಎಂ, ಜೆಡಿಯು ಪಕ್ಷದ ನಾಯಕ ನಿತೀಶ್ ಕುಮಾರ್ ಮೌನವಾಗಿದ್ದರು.
https://twitter.com/DilliDurAst/status/1123272927649026048
ವಂದೇ ಮಾತರಂ ಘೋಷಣೆ ಮುಗಿಲು ಮುಟ್ಟುತ್ತಿದ್ದಂತೆ ವೇದಿಕೆ ಮೇಲಿದ್ದ ಬಿಜೆಪಿ ನಾಯಕರು ಎದ್ದು ನಿಂತಿದ್ದಾರೆ. ಇತ್ತ ಎನ್‍ಡಿಎ ಮಿತ್ರ ಪಕ್ಷ ಲೋಕಜನಶಕ್ತಿ ಪಕ್ಷದ ನಾಯಕ ರಾಮ್ ವಿಲಾಸ್ ಪಾಸ್ವಾನ್ ಕೂಡ ಧ್ವನಿಗೂಡಿಸಿದ್ದಾರೆ. ಎಲ್ಲ ನಾಯಕರು ಹಾಗೂ ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ಜನರು ಅತ್ಯುತ್ಸಾಹದಿಂದ ಕೈಗಳನ್ನು ಮುಷ್ಠಿ ಮಾಡಿ, ಘೋಷಣೆ ಕೂಗುತ್ತ ಒಬ್ಬೊಬ್ಬರೇ ಎದ್ದು ನಿಂತಿದ್ದಾರೆ. ಆದರೆ ನಿತೀಶ್ ಕುಮಾರ್ ಅವರು ಕೊನೆಯಲ್ಲಿ ಅನಿವಾರ್ಯ ಎಂಬಂತೆ ಎದ್ದು ನಿಲ್ಲುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಚರ್ಚೆಗೆ ಗ್ರಾಸವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ನಡೆದ ನಡೆದ ಸಮಾವೇಶದಲ್ಲಿ ಮಾತನಾಡಿ, ವಂದೇ ಮಾತರಂ ಘೋಷಣೆ ಜೀವನಕ್ಕೆ ಶಕ್ತಿ ತುಂಬುತ್ತದೆ. ಅಷ್ಟೇ ಅಲ್ಲದೆ ದೇಶದ ಭದ್ರತೆ, ಶಾಂತಿ ಹಾಗೂ ಸಮೃದ್ಧಿಯನ್ನು ಖಾತರಿಪಡಿಸುವ ಜವಾಬ್ದಾರಿ ಕೂಡ ಆಗಿದೆ. ಕೆಲ ವ್ಯಕ್ತಿಗಳಿಗೆ ವಂದೇ ಮಾತರಂ ಘೋಷಣೆ ಕೂಗಲು ತೊಂದರೆ ಆಗುತ್ತಿದೆ. ಅಂತವರು ಠೇವಣಿಯನ್ನೇ ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದರು.