Bengaluru CityDistrictsKarnatakaLatestMain PostUncategorized

ಜನರಲ್ ಬಿಪಿನ್ ರಾವತ್‍ಗೆ ನಮನ ಸಲ್ಲಿಸಿದ ಬೊಮ್ಮಾಯಿ

ಬೆಂಗಳೂರು: ಜನರಲ್ ಬಿಪಿನ್ ರಾವತ್ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ನಮನವನ್ನು ಸಲ್ಲಿಸಿದರು.

ವಿಧಾನಸೌಧದಲ್ಲಿ ಡಿಆರ್‌ಡಿಓ ವತಿಯಿಂದ ಮಾಹಿತಿ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಈ ಮಾಹಿತಿ ಪ್ರದರ್ಶನ ಉದ್ಘಾಟಿನೆಯನ್ನು ಬೊಮ್ಮಾಯಿ ಅವರು ಮಾಡಿ ಬಳಿಕ ಬಿಪಿನ್ ರಾವತ್ ಅವರ ಫೋಟೋಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಈ ಪ್ರದರ್ಶನವನ್ನು ಡಿಆರ್‌ಡಿಓ ವತಿಯಿಂದ ಅಭಿವೃದ್ಧಿಪಡಿಸಿರುವ ಉಪಕರಣಗಳ ಮಾಹಿತಿ ಪಡೆದುಕೊಳ್ಳಲು ಏರ್ಪಡಿಸಲಾಗಿದ್ದು, ಈ ವೇಳೆ ನಿನ್ನೆ ದುರಂತದಲ್ಲಿ ಮಡಿದವರನ್ನು ಸಿಎಂ ನೆನೆದರು. ಇದನ್ನೂ ಓದಿ: ಯಾವುದೇ ಅವಸರದ ನಿರ್ಧಾರವನ್ನು ನಾವು ತೆಗೆದುಕೊಳ್ಳುವುದಿಲ್ಲ: ಸಿಎಂ

ಅದು ಅಲ್ಲದೇ ಬೊಮ್ಮಾಯಿ ಅವರು ಟ್ವಿಟ್ಟರ್ ನಲ್ಲಿ, ರಾಜ್ಯದ ಮಾಜಿ ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಸ್.ಆರ್. ಮೋರೆ ಅವರು ನಿಧನದ ಸುದ್ದಿ ತುಂಬಾ ದುಃಖದ ವಿಷಯವಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ನೀಡಿ, ಕುಟುಂಬಸ್ಥರು ಹಾಗೂ ಆಪ್ತರಿಗೆ ದುಃಖ ಭರಿಸುವ ಶಕ್ತಿ ನೀಡಲಿಯೆಂದು ಪ್ರಾರ್ಥಿಸುತ್ತೇನೆ ಎಂದು ಬರೆದು ಟ್ವೀಟ್ ಮಾಡಿದರು.

Leave a Reply

Your email address will not be published.

Back to top button