ಕನ್ನಡದ ‘ಸತ್ಯ ಇನ್ ಲವ್’ (Sathya In Love) ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಜನಪ್ರಿಯ ನಟಿ ಜೆನಿಲಿಯಾ (Genelia D’souza) ಇದೀಗ ತಮ್ಮ ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಡಲು ರೆಡಿಯಾಗಿದ್ದಾರಾ? 3ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವದಂತಿ ಹರಿದಾಡುತ್ತಿದೆ. ಈ ಸುದ್ದಿ ನಿಜಾನಾ? ಇಲ್ಲಿದೆ ಮಾಹಿತಿ.
Advertisement
ಇತ್ತೀಚಿಗೆ ಸಮಾರಂಭವೊಂದರಲ್ಲಿ ಪತಿ ರಿತೇಶ್ ಜೊತೆ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ. ಆಗ ಅವರು ತಮ್ಮ ಹೊಟ್ಟೆಯ ಭಾಗವನ್ನು ಹಿಡಿದಿದ್ದಾರೆ. ಇದರಲ್ಲಿ ಅವರು ಪ್ರೆಗ್ನೆಂಟ್ ಆಗಿರುವ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋ ಮತ್ತು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:Gadar 2 ಸಕ್ಸಸ್, ರಾಜಕೀಯಕ್ಕೆ ವಿದಾಯ ಹೇಳ್ತಾರಾ ಸನ್ನಿ ಡಿಯೋಲ್?
Advertisement
View this post on Instagram
Advertisement
ಬೇಬಿ ಬಂಪ್ ನೋಡಿದ ಅಭಿಮಾನಿಗಳು, ಈ ಜೋಡಿ 3ನೇ ಮಗುವನ್ನು ಸ್ವಾಗತಿಸಲು ರೆಡಿಯಾದ್ರಾ ಎಂಬ ವಿಚಾರ ಗಾಸಿಪ್ ಪ್ರಿಯರ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ? ಎಂಬುದರ ಬಗ್ಗೆ ಈ ದಂಪತಿ ಇನ್ನೂ ಸ್ಟಷ್ಟನೆ ನೀಡಿಲ್ಲ.
Advertisement
ರಿತೇಶ್ (Rithesh Deshmukh) – ಜೆನಿಲಿಯಾ ಜೋಡಿ 2012ರಲ್ಲಿ ದಾಂಪತ್ಯ ಜೀವನಕ್ಕೆ (Wedding) ಕಾಲಿಟ್ಟರು. ಈ ದಂಪತಿಗೆ ಇದೀಗ ಇಬ್ಬರು ಮಕ್ಕಳಿದ್ದಾರೆ. ಈ ಸ್ಟಾರ್ ಜೋಡಿ, ಬಾಲಿವುಡ್ ಸಿನಿಮಾಗಳ ಜೊತೆ ಉದ್ಯಮ ಕ್ಷೇತ್ರದಲ್ಲೂ ಆ್ಯಕ್ಟೀವ್ ಆಗಿದ್ದಾರೆ.