ಮುಂಬೈ: ಈದ್-ಉಲ್-ಫಿತರ್ ಹಬ್ಬದ ಒಂದು ದಿನ ಮೊದಲು ಭಾನುವಾರ ಮಹಾರಾಷ್ಟ್ರದ (Maharastra) ಬೀಡ್ (Beed) ಜಿಲ್ಲೆಯ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ.
ಜಿಲೆಟಿನ್ ಕಡ್ಡಿಗಳಿಂದ ಈ ಸ್ಫೋಟ ಸಂಭವಿಸಿದೆ. ಇಲ್ಲಿಯವರೆಗೆ ಯಾವುದೇ ಸಾವುನೋವು ಸಂಭವಿಸಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
Maharashtra: A suspicious explosion near a mosque in Beed’s Ardhmasla village damaged walls and floor. Gelatin sticks were found, and two people were detained. Police urged the public to remain calm pic.twitter.com/G6SmNtvJnf
— IANS (@ians_india) March 30, 2025
ಒಬ್ಬ ವ್ಯಕ್ತಿ ಮಸೀದಿಯ ಹಿಂಭಾಗದಿಂದ ಪ್ರವೇಶಿಸಿ ಜೆಲೆಟಿನ್ ಕಡ್ಡಿಗಳನ್ನು ಇಟ್ಟಿದ್ದ. ಇದರಿಂದಾಗಿ ಸ್ಫೋಟ ಸಂಭವಿಸಿದ್ದು ಮಸೀದಿಯ (Mosque) ಒಳಭಾಗಕ್ಕೆ ಹಾನಿಯಾಗಿದೆ.
ಜಿಯೋರೈ ತಹಸಿಲ್‌ನ ಗ್ರಾಮದಲ್ಲಿ ಬೆಳಗಿನ ಜಾವ 2:30 ರ ಸುಮಾರಿಗೆ ಸಂಭವಿಸಿದ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅವರು ಹೇಳಿದರು, ಸ್ಫೋಟದಿಂದ ಒಳಭಾಗಕ್ಕೆ ಹಾನಿಯಾಗಿದೆ. ಇದನ್ನೂ ಓದಿ: ಮಾಸ್ಕೋ ನಡು ಬೀದಿಯಲ್ಲಿ ಪುಟಿನ್ ಕಾರು ಸ್ಫೋಟ – ಹತ್ಯೆಗೆ ಯತ್ನ?
Beed, Maharashtra: SP Navneet Kawat says, “We received a call from the village sarpanch at 4 AM, and the local police arrived within 200 minutes. Within an hour, our Additional SP, BDDS team and other officials reached the spot. The incident involved a blast at a mosque using… https://t.co/0se9WnuwYR pic.twitter.com/nwzeBIFATE
— IANS (@ians_india) March 30, 2025
ಸ್ಫೋಟದ ಬಳಿಕ ಗ್ರಾಮದ ಮುಖ್ಯಸ್ಥರು ಬೆಳಿಗ್ಗೆ 4 ಗಂಟೆ ಸುಮಾರಿಗೆ ತಲವಾಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಬೀಡ್ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಕನ್ವತ್ ಮತ್ತು ಇತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸರು ಗ್ರಾಮದಲ್ಲಿ ಭಾರೀ ಭದ್ರತೆಯನ್ನು ನಿಯೋಜಿಸಿದ್ದಾರೆ.