ಬೆಂಗಳೂರು: ರಸ್ತೆಯಲ್ಲಿ ಕಸ ಸೋರಿಕೆ ಮಾಡಿದ್ದಕ್ಕೆ ಜಿಬಿಎ ಕಸದ ಲಾರಿಗೆ 10 ಸಾವಿರ ರೂ. ದಂಡ ವಿಧಿಸಲಾಗಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆಯ ಅಧಿಕಾರಿಗಳಿಂದ ದಂಡ ವಿಧಿಸಲಾಗಿದೆ.
ಲಾರಿ ಕಸ ವಿಲೇವಾರಿ ವೇಳೆ ರಸ್ತೆಯುದ್ಧಕ್ಕೂ ಕಸ ಸೋರಿಕೆ ಮಾಡುತ್ತಿತ್ತು. ಇದರಿಂದ ರಸ್ತೆಯುದ್ಧಕ್ಕೂ ದುರ್ವಾಸನೆ ಬರುತ್ತಿತ್ತು. ವಾಹನ ಸವಾರರು ಹಾಗೂ ಜನಸಾಮಾನ್ಯರಿಗೆ ಕಿರಿಕಿರಿ ಆಗುತ್ತಿತ್ತು.

