ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರದ ಪಾಲಿಕೆಗಳಿಗೆ ಚುನಾವಣೆ (Election) ಸಂಬಂಧ ಮೀಸಲಾತಿ (Reservation) ನಿಗದಿ ಮಾಡಲು ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
2011ರ ಜನ ಸಂಖ್ಯೆಯನ್ನು ಆಧರಿಸಿ ಮೀಸಲಾತಿ ನಿಗದಿಯಾಗಲಿದೆ. ಐದು ನಗರ ಪಾಲಿಕೆಗಳ ಅಧೀನ ಜನಸಂಖ್ಯೆ ಒಳಗೊಂಡ ಜಾತಿ ಹಾಗೂ ವಿವಿಧ ಪಂಗಡಗಳಿಗೆ ಅನುಗುಣವಾಗಿ ಮೀಸಲಾತಿ ಕಡ್ಡಾಯ ಮಾಡಲಾಗಿದೆ.
369 ವಾರ್ಡ್ ಗಳ ಪೈಕಿ ಮೂರನೇ ಒಂದು ಭಾಗ OBC ಸಮುದಾಯಕ್ಕೆ ಮೀಸಲಾಗಿದ್ದು ಅನುಸೂಚಿತ ಜಾತಿ, ಪಂಗಡ, OBC ಒಟ್ಟು ಮೀಸಲಾತಿ ಪ್ರಮಾಣ 50% ಮೀರುವಂತಿಲ್ಲ. ಒಂದೊಮ್ಮೆ 50% ಮೀರಿದರೆ ಆಯಾ ಜಾತಿಗೆ ಅನುಗುಣವಾಗಿ ಮೀಸಲು ಸ್ಥಾನ ಇಳಿಕೆ ಮಾಡಲಾಗುತ್ತದೆ.
ಮೀಸಲೇತರ ಸ್ಥಾನಗಳಲ್ಲೂ 50% ಸ್ಥಾನಗಳು ಮಹಿಳೆಯರಿಗೆ ಮೀಸಲಿಡಲಾಗುತ್ತದೆ.




