ಟೆಲ್ ಅವಿವ್: ಇಸ್ರೇಲ್ (Israel) ಮತ್ತು ಹಮಾಸ್ ಬಂಡುಕೋರರ (Hamas Militants) ಮಧ್ಯೆ ಭೀಕರ ಯುದ್ಧ ನಡೆಯುತ್ತಿರುವ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಬುಧವಾರ ಇಸ್ರೇಲ್‌ಗೆ ಭೇಟಿ ನೀಡಿದ್ದಾರೆ.
ಭಾರೀ ಪ್ರಮಾಣದ ಭದ್ರತಾ ಪಡೆಯೊಂದಿಗೆ ವಿಮಾನದಿಂದ ಕೆಳಗಿಳಿದ ಬೈಡೆನ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರನ್ನು ಅಪ್ಪಿಕೊಂಡರು. ಬಳಿಕ ಗಾಜಾ ಆಸ್ಪತ್ರೆಯ (Gaza Hospital) ಮೇಲೆ ನಡೆದ ರಾಕೆಟ್ ದಾಳಿಯ ಕುರಿತು ನೆತನ್ಯಾಹು ಮತ್ತು ಬೈಡೆನ್ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಇಂಧನ ಕೊರತೆ – ಪಾಕಿಸ್ತಾನದ 48 ವಿಮಾನಗಳ ಹಾರಾಟ ರದ್ದು
Advertisement
Advertisement
ಗಾಜಾ ಆಸ್ಪತ್ರೆಯ ಮೇಲೆ ರಾಕೆಟ್ ದಾಳಿ ನಡೆದ ಪರಿಣಾಮ 500 ಮಂದಿ ಸಾವನ್ನಪ್ಪಿದ್ದಾರೆ. ಹಮಾಸ್ ಬಂಡುಕೋರರು ಇದು ಇಸ್ರೇಲ್ ನಡೆಸಿದ ದಾಳಿ ಎಂದು ಹೇಳಿದರೆ, ಇಸ್ರೇಲ್ ಇದು ಹಮಾಸ್ ನಡೆಸಿದ ದಾಳಿ ಎಂದು ವಿಡಿಯೋ ರಿಲೀಸ್ ಮಾಡಿ ತಿರುಗೇಟು ನೀಡಿದೆ. ಈ ಕುರಿತು ಮಾತನಾಡಿದ ಬೈಡೆನ್, ಗಾಜಾದ ಅಲ್-ಅಹ್ಲಿ ಆಸ್ಪತ್ರೆಯಲ್ಲಿ ನಡೆದ ದಾಳಿ ಗಜಾನ್ ಭಯೋತ್ಪಾದಕ ಗುಂಪುಗಳಿಂದ ಸಂಭವಿಸಿದೆ ಎನಿಸುತ್ತಿದೆ. ಈ ದಾಳಿಯನ್ನು ಇಸ್ರೇಲ್ ಮಾಡಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅರಬ್ ನಾಯಕರ ಜೊತೆಗಿನ ಬೈಡೆನ್ ಮೀಟಿಂಗ್ ಕ್ಯಾನ್ಸಲ್
Advertisement
Advertisement
ಗಾಜಾದ ಆಸ್ಪತ್ರೆಯಲ್ಲಿ ನಡೆದ ದಾಳಿಯಿಂದಾಗಿ ನಾನು ತೀವ್ರ ದುಃಖಿತನಾಗಿದ್ದೇನೆ. ಅಲ್ಲದೇ ಆಕ್ರೋಶಗೊಂಡಿದ್ದೇನೆ. ನಾನು ನೋಡಿದ ಆಧಾರದ ಮೇಲೆ ಈ ದಾಳಿಯನ್ನು ಇಸ್ರೇಲ್ ಮಾಡಿಲ್ಲ. ಈ ಕೃತ್ಯವನ್ನು ಬೇರೆ ತಂಡ ಮಾಡಿದೆ ಎಂದಿದ್ದಾರೆ. ಇದನ್ನೂ ಓದಿ: ಗಾಜಾ ಆಸ್ಪತ್ರೆಯ ಮೇಲೆ ರಾಕೆಟ್ ದಾಳಿಗೆ 500 ಬಲಿ – ದಾಳಿ ಮಾಡಿದವರು ಯಾರು?
ನಾನು ಇಲ್ಲಿಗೆ ಭೇಟಿ ನೀಡಲು ಒಂದು ಸಣ್ಣ ಕಾರಣವಿದೆ. ಇಸ್ರೇಲ್ ದೇಶದ ಜನರು ಮತ್ತು ವಿಶ್ವದ ಜನರು ಅಮೆರಿಕ ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ನಾನು ಬಯಸುತ್ತೇನೆ. 31 ಅಮೆರಿಕನ್ನರು ಸೇರಿದಂತೆ 1,300 ಜನರನ್ನು ಹಮಾಸ್ ಹತ್ಯೆ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಮಾಸ್ ಬಂಡುಕೋರರಿಂದ ಹತ್ಯೆಗೀಡಾದ ಮಗಳ ಪತ್ತೆಗೆ ಆ್ಯಪಲ್ ವಾಚ್, ಫೋನ್ ಬಳಸಿದ ತಂದೆ
ಅಕ್ಟೋಬರ್ 7 ರಂದು ಹಮಾಸ್ ಪ್ರಾರಂಭಿಸಿದ ಆಘಾತಕಾರಿ ಗಡಿಯಾಚೆಗಿನ ದಾಳಿಯಲ್ಲಿ ಗುಂಡು ಹಾರಿಸಿ 1,400 ಜನರ ಹತ್ಯೆಗೆ ಪ್ರತೀಕಾರವಾಗಿ ಬೈಡೆನ್ ಇಸ್ರೇಲ್ ಮತ್ತು ಅದರ ಮಿಲಿಟರಿ ಕಾರ್ಯಾಚರಣೆಯನ್ನು ಬಲವಾಗಿ ಬೆಂಬಲಿಸಿದ್ದಾರೆ. ಅಲ್ಲದೇ ನೂರಾರು ಒತ್ತೆಯಾಳುಗಳನ್ನು ತೆಗೆದುಕೊಂಡು ಮಹಿಳೆಯರು ಮತ್ತು ಮಕ್ಕಳ ಶಿರಚ್ಛೇದ ಮಾಡುತ್ತಿರುವ ಹಮಾಸ್ ನಡೆಸಿದ ದೌರ್ಜನ್ಯವನ್ನು ಬೈಡೆನ್ ಖಂಡಿಸಿದ್ದಾರೆ. ಇದನ್ನೂ ಓದಿ: ಐರನ್ ಡೋಮ್ ಆಯ್ತು ಈಗ ಐರನ್ ಬೀಮ್ – ಏನಿದು ಇಸ್ರೇಲ್ ಪವರ್‌ಫುಲ್ ವೆಪನ್?
Web Stories