ಮುಂಬೈ: ಲೆಜೆಂಡರಿ ಕ್ರಿಕೆಟಿಗರಾದ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಲ್ ಆಫ್ ಫೇಮ್‍ಗೆ ಸೇರ್ಪಡೆಗೊಂಡ ಮೊದಲ ಇಬ್ಬರು ಆಟಗಾರರಾಗಿದ್ದಾರೆ.
Advertisement
ಈ ಕುರಿತು ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಇಬ್ಬರು ಆತ್ಮೀಯ ಸ್ನೇಹಿತರ ಸೇರ್ಪಡೆಯ ಬಗ್ಗೆ ಮಾತನಾಡಿ, ಆರ್‌ಸಿಬಿ ಪ್ಲೇ ಬೋಲ್ಡ್ ತತ್ವವನ್ನು ನಿಜವಾಗಿಯೂ ತಂದಿದ್ದು ಅವರೇ. ಕ್ರೀಡಾಮನೋಭಾವದಿಂದ ಎಬಿಡಿ ಕ್ರಿಕೆಟ್ ಆಟವನ್ನು ನಿಜವಾಗಿಯೂ ಬದಲಾಯಿಸಿದ್ದಾರೆ ಎಂದು ಫ್ರಾಂಚೈಸಿಯ ವೆಬ್‍ಸೈಟ್‍ನಲ್ಲಿ ಪೋಸ್ಟ್ ಮಾಡಿ ಹೇಳಿದ್ದಾರೆ.
Advertisement
Advertisement
ಇಬ್ಬರೂ ಆಟಗಾರರನ್ನು ಹಾಲ್ ಆಫ್ ಫೇಮ್‍ನಲ್ಲಿ ಸೇರ್ಪಡೆ ಮಾಡಿರುವುದು ಹೆಮ್ಮೆಯ ವಿಷಯ. ಅವರ ಆಟದ ವೀಡಿಯೊಗಳನ್ನು ನೋಡುವಾಗ ರೋಮಾಂಚನವಾಗುತ್ತದೆ. ಐಪಿಎಲ್ ಯಶಸ್ವಿಯಾಗಿ ಬೆಳೆಯುವಲ್ಲಿ ಇವರಿಬ್ಬರ ಕಾಣಿಕೆ ದೊಡ್ಡದು ಎಂದು ಕೊಹ್ಲಿ ಹೇಳಿದ್ದಾರೆ.
Advertisement
2011 ರಿಂದ 2017 ರವರೆಗೆ ಆರ್‌ಸಿಬಿ ಪರ ಆಡಿರುವ ಗೇಲ್ ಮಾತನಾಡಿ, ನನಗೆ ತಂಡದಲ್ಲಿ ಅವಕಾಶ ನೀಡಿದ್ದಕ್ಕಾಗಿ ಆರ್‌ಸಿಬಿ ಕುಟುಂಬಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ನನಗೆ ಇದು ನಿಜಕ್ಕೂ ವಿಶೇಷವಾಗಿತ್ತು. ಹಾಲ್ ಆಫ್ ಫೇಮ್‍ಗೆ ಸೇರ್ಪಡೆಗೊಂಡಿರುವುದು ನಿಜಕ್ಕೂ ಅದ್ಭುತವಾಗಿದೆ. ನಾನು ಯಾವಾಗಲೂ ಬೆಂಗಳೂರು ತಂಡವನ್ನು ನನ್ನ ಹೃದಯಕ್ಕೆ ಹತ್ತಿರ ಇಡುತ್ತೇನೆ ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದ ದೈತ್ಯ ಆಟಗಾರ ಡಿವಿಲಿಯರ್ಸ್ 2011 ರಿಂದ 2021 ರವರೆಗೆ ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿದ್ದರು. ವೆಸ್ಟ್ ಇಂಡೀಸ್‍ನ ಎಡಗೈ ಬ್ಯಾಟ್ಸ್‌ಮ್ಯಾನ್ ಗೇಲ್ ಆರು ವರ್ಷಗಳ ಕಾಲ ಫ್ರಾಂಚೈಸಿಯಲ್ಲಿದ್ದರು.