ಏರ್‌ ಇಂಡಿಯಾ ಪತನ – ಮದುವೆಯಾಗಿದ್ದ Gay Couple ದುರಂತ ಸಾವು

Public TV
UK gay couple

– 2022 ರಲ್ಲಿ ಮದುವೆಯಾಗಿತ್ತು ಈ ಜೋಡಿ

ಗಾಂಧೀನಗರ: ಅಹಮದಾಬಾದ್‌ನಲ್ಲಿ (Ahmedabad) ಗುರುವಾರ ಸಂಭವಿಸಿದ ಏರ್‌ ಇಂಡಿಯಾ (Air India) ಭೀಕರ ಅವಘಡದಲ್ಲಿ, ಮದುವೆಯಾಗಿದ್ದ ಗೇ ಜೋಡಿಯು ದುರಂತ ಸಾವು ಕಂಡಿದೆ.

ಜಾಮಿ ಮೀಕ್ (45) ಮತ್ತು ಫಿಯಾಂಗಲ್ ಗ್ರೀನ್ ಲಾ (39) ಇಬ್ಬರೂ ಗೇ ಜೋಡಿ.‌ ಲಂಡನ್-ಬ್ರಿಟನ್‌ನ ವಾಕ್ಸ್ ಹಾಲ್‌ನವರಾಗಿದ್ದ ಸಲಿಂಗಿ ಜೋಡಿ 2022ರಲ್ಲಿ ಮದುವೆಯಾಗಿದ್ದರು (Same Sex Marriage). ಇದನ್ನೂ ಓದಿ: ನಾನು ವಿಮಾನದಿಂದ ಜಂಪ್ ಮಾಡ್ಲಿಲ್ಲ – ದೊಡ್ಡ ಆಪತ್ತಿನಿಂದ ರಮೇಶ್ ವಿಶ್ವಾಸ್ ಕುಮಾರ್ ಪಾರಾಗಿದ್ದು ಹೇಗೆ?

british gay couple

ಜಾಮಿ ಮೀಕ್ ಎಂಬಾತ ವೆಲ್ನೆಸ್ ಫೌಂಡ್ರಿಯ ಸಂಸ್ಥಾಪಕ. ಇವರಿಬ್ಬರೂ ಯೋಗ ತರಬೇತಿ, ಆಧ್ಯಾತ್ಮಿಕ ತರಬೇತಿ ನೀಡುತ್ತಿದ್ದರು. ಭಾರತ ಪ್ರವಾಸಕ್ಕೆ ಬಂದಿದ್ದರು. ಘಟನೆ ಹಿಂದಿನ‌ ದಿನ ರಾತ್ರಿ ಅತ್ಯದ್ಭುತ ಎಂದು ಬಣ್ಣಿಸಿ ವೀಡಿಯೋ ಮಾಡಿದ್ದರು.

ಭಾರತ ಪ್ರವಾಸ ಮುಗಿಸಿ ಹೊರಟಾಗ ಖುಷಿಯಲ್ಲಿದ್ದರು. ಅಹಮದಾಬಾದ್ ವಿಮಾನ ನಿಲ್ದಾಣದ ಗೇಟ್‌ನಲ್ಲಿ ಕುಳಿತು ಇವರು ಮಾಡಿದ್ದ ಕೊನೆಯ ವೀಡಿಯೋ ವೈರಲ್ ಆಗಿತ್ತು. ವೀಡಿಯೋದಲ್ಲಿ ಭಾರತದ ಪ್ರವಾಸದ ಬಗ್ಗೆ ಮಾತನಾಡಿದ್ದರು. ಇದನ್ನೂ ಓದಿ: Mayday… unable to lift: ಕ್ಯಾಪ್ಟನ್‌ ಸುಮಿತ್‌ ಕೊನೆ ಕ್ಷಣದ ಆಡಿಯೋ ಲಭ್ಯ

ಗುರುವಾರ ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿ 230 ಪ್ರಯಾಣಿಕರು, ಇಬ್ಬರು ಪೈಲಟ್‌ಗಳು ಮತ್ತು 10 ಸಿಬ್ಬಂದಿ ಸೇರಿದಂತೆ 242 ಜನರಿದ್ದರು. ಈ ಪೈಕಿ ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ಮಾತ್ರ ಅಪಘಾತದಲ್ಲಿ ಬದುಕುಳಿದರು. ವಿಮಾನವು ಹಾಸ್ಟೆಲ್‌ವೊಂದಕ್ಕೆ ಡಿಕ್ಕಿ ಹೊಡೆದು ಪತನಗೊಂಡಿತು. ಪರಿಣಾಮವಾಗಿ ಪ್ರಯಾಣಿಕರು ಸೇರಿದಂತೆ 274 ಮಂದಿ ಮೃತಪಟ್ಟಿದ್ದಾರೆ.

Share This Article