ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಜಾತ್ರೆ ಅಂಗವಾಗಿ ಶ್ರೀ ಗವಿಮಠದ ಮಹಾರಥೋತ್ಸವದ ಮುಂಭಾಗದ ಆವರಣದಲ್ಲಿ ನಡೆದ ಸಾಹಸ, ದಾಲಪಟ ಹಾಗೂ ಕರಾಟೆ ಪ್ರದರ್ಶನಗಳು ಸೇರಿದ್ದ ಜನರನ್ನು ಮೈ ನವಿರೇಳಿಸುವಂತೆ ಮಾಡಿದವು.
ನಗರದ ಜಿಲ್ಲಾ ಕರಾಟೆ ಶಿಕ್ಷಕರ ಸಂಘ, ವಿಜಡಂ ಮಾರ್ಷಲ್ ಆಟ್ರ್ಸ್ ಹಾಗೂ ಭೂಮಿ ಫೌಂಡೇಷನ್ ಸಹಯೋಗದೊಂದಿಗೆ ವಿವಿಧ ಸಹಸ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. ಈ ಸಾಹಸ ಪ್ರದರ್ಶನವನ್ನು ಕೊಪ್ಪಳದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ನಾರಾಯಣ ರೆಡ್ಡಿ ಕನಕ ರೆಡ್ಡಿ ಉದ್ಘಾಟಿಸಿದರು.
Advertisement
Advertisement
ಈ ವೇಳೆ ಮಾತನಾಡಿದ ಅವರು, ಜಾತ್ರಾ ಮಹೋತ್ಸವದಲ್ಲಿ ದೇಶಿಯ ಕ್ರೀಡೆಗಳಿಗೆ ಉತ್ತೇಜನ ನೀಡಲು ಶ್ರೀಗಳು ಆಯೋಜಿಸಿದ್ದ ಸಾಹಸ, ದಾಲಪಟ ಹಾಗೂ ಕರಾಟೆ ಪ್ರದರ್ಶನಗಳು ಅರ್ಥಪೂರ್ಣ. ಸಾಹಸ ಪ್ರದರ್ಶನದಲ್ಲಿ ಚಿಕ್ಕಪಟುಗಳಿಂದ ಕಟಾಜ್, ಹಿರಿಯ ಪಟುಗಳಿಂದ ಸಾಹಸ ಪ್ರದರ್ಶನಗಳು ಪ್ರದರ್ಶನಗೊಂಡವು. ನಂತರ ಚಿಲಕಮುಖಿಯ ಕಲಾ ತಂಡದರು ಹನುಮಂತಪ್ಪ ಅವರ ನಾಯಕತ್ವದಲ್ಲಿ ದಾಲಪಟ ಪ್ರದರ್ಶನ ಹಾಗೂ ಗೊಂಬೆಗಳ ಕಾಲಪ್ರದರ್ಶನ ನಡೆಯಿತು. ಜಾತ್ರೆಗೆ ಆಗಮಿಸಿದ್ದ ಭಕ್ತರು ಸಾಹಸ ಪ್ರದರ್ಶನಗಳನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದರು.