Connect with us

Districts

ಗವಿಸಿದ್ದೇಶ್ವರ ಜಾತ್ರೆಯಲ್ಲಿ ಮಹಿಳೆಯರ ವಾಲಿಬಾಲ್ ಸ್ಪರ್ಧೆ

Published

on

ಕೊಪ್ಪಳ: ಈ ವರ್ಷ ಗವಿಸಿದ್ದೇಶ್ವರ ಮಹಾ ಜಾತ್ರೆಯಲ್ಲಿ ವಿಶೇಷವಾಗಿ ಮಹಿಳೆಯರಿಗಾಗಿಯೇ ವಾಲಿಬಾಲ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ವಾಲಿಬಾಲ್ ಸ್ಪರ್ಧೆಯನ್ನು ಮಹಿಳಾ ಕ್ರೀಡಾಪಟು ಡಾ. ಮಾಲತಿ ಹೊಳ್ಳ ಅವರು ಉದ್ಘಾಟನೆ ಮಾಡಲಿದ್ದಾರೆ. ಈ ಮೂಲಕ ಕ್ರೀಡಾ ಪ್ರೇಮಿಗಳನ್ನು ಗಮನ ಸೆಳೆಯುತ್ತಿರುವುದು ಈ ಜಾತ್ರೆಯ ಮತ್ತೊಂದು ವಿಶೇಷವಾಗಿದೆ. ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರೀಡಾಪಟು ಮಾಲತಿ ಹೊಳ್ಳರಿಂದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಜಿಲ್ಲಾ ವಾಲಿಬಾಲ್ ಅಸೋಷಿಯೇಷನ್, ಶ್ರೀ ಗವಿಸಿದ್ದೇಶ್ವರ ಮಠದ ಸಹಯೋಗದಲ್ಲಿ ಮಹಿಳೆಯರಿಗಾಗಿ ಆಹ್ವಾನಿತ ವಾಲಿಬಾಲ್ ಸ್ಪರ್ಧೆಯನ್ನು ಜನವರಿ 13 ಹಾಗೂ 14 ರಂದು ಹಮ್ಮಿಕೊಂಡಿದೆ. ರಾಜ್ಯದ ಪ್ರತಿಷ್ಠಿತ 8 ಮಹಿಳಾ ತಂಡಗಳ ಆಹ್ವಾನದ ಜೊತೆಗೆ ನಗರದ ಜಿಲ್ಲಾ ಕ್ರೀಡಾ ಹಾಗೂ ಯುವ ಸಬಲೀಕರಣ ಇಲಾಖೆಯ ವಸತಿ ಶಾಲೆಯ ಪ್ರತಿಭಾನ್ವಿತ ರಾಷ್ಟ್ರಮಟ್ಟದ ಬಾಲಕಿಯರ ತಂಡ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವುದು ಆಕರ್ಷಣೆಯಾಗಿದೆ.

ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಿ, ವಾಲಿಬಾಲ್ ಕ್ರೀಡೆಯಲ್ಲಿ ಬಹಳಷ್ಟು ಕಮಾಲು ಮಾಡಿರುವ ಮಹಿಳಾ ಮಣಿಗಳ ವಾಲಿಬಾಲ್ ಕೈ ಚಳಕದ ವೀಕ್ಷಣೆ ಅಂತು ಒಂದು ಅದ್ಭುತವಾಗಿರುತ್ತದೆ.

Click to comment

Leave a Reply

Your email address will not be published. Required fields are marked *