Connect with us

Districts

ಅಂತರಾಷ್ಟ್ರೀಯ ಕ್ರೀಡಾಪಟು ಮಾಲತಿ ಹೊಳ್ಳರಿಂದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ

Published

on

ಕೊಪ್ಪಳ: ದಕ್ಷಿಣ ಭಾರತದ ಕುಂಭ ಮೇಳವೆಂದೇ ಖ್ಯಾತಿ ಪಡೆದ ಕೊಪ್ಪಳದ ಶ್ರೀಗವಿಸಿದ್ಧೇಶ್ವರ ಮಹಾ ರಥೋತ್ಸವವನ್ನು ಈ ಬಾರಿ ಅಂತರಾಷ್ಟ್ರೀಯ ಕ್ರೀಡಾಪಟು, ಪದ್ಮಶ್ರೀ ಪುರಸ್ಕೃತ ಮಾಲತಿ ಹೊಳ್ಳ ಚಾಲನೆ ನೀಡಲಿದ್ದಾರೆ.

ಪ್ರತಿ ವರ್ಷವೂ ಒಂದೊಂದು ಕ್ಷೇತ್ರದ ಸಾಧಕರು ರಥೋತ್ಸವಕ್ಕೆ ಆಗಮಿಸುವುದು ಜಾತ್ರೆಯ ವಿಶೇಷವಾಗಿದೆ. ಕಳೆದ ಬಾರಿ ವಿದೇಶಿ ಪ್ರಜೆ ಜಾತ್ರೆಗೆ ಚಾಲನೆ ನೀಡಿದ್ದರು. ಪ್ಯಾರಾ ಒಲಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿ 389 ಬಂಗಾರ, 27 ಬೆಳ್ಳಿ ಹಾಗೂ 7 ಕಂಚಿನ ಪದಕ, ಪದ್ಮಶ್ರಿ-ಅರ್ಜುನ-ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಂತರಾಷ್ಟ್ರೀಯ ಕ್ರೀಡಾಪಟು ಮಾಲತಿ ಹೊಳ್ಳ ಜನವರಿ 12 ರಂದು ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಉದ್ಘಾಟನೆ ಮಾಡಲಿದ್ದಾರೆ.

ವ್ಹೀಲ್‍ಚೇರ್ ಶಾಟ್ ಪುಟ್‍ನಲ್ಲಿ ವಿಶ್ವದ ಮೂರನೆಯ ಶ್ರೇಯಾಂಕಿತೆ ಮಾಲತಿ ಹೊಳ್ಳ 1968 ರ ಜುಲೈ 6 ರಂದು ಬೆಂಗಳೂರಿನಲ್ಲಿ ಜನಿಸಿದರು. 14 ತಿಂಗಳು ಮಗುವಾಗಿದ್ದಾಗ ಪೋಲಿಯೋ ರೋಗಕ್ಕೆ ತುತ್ತಾಗಿ 14 ವರ್ಷಗಳ ಕಾಲ ಪುನಶ್ಚೇತನಾ ಶಾಲೆಯಲ್ಲಿ ಅಧ್ಯಯನ ಮಾಡಿದರು. ಮನೋವಿಜ್ಞಾನ ವಿಷಯದಲ್ಲಿ ಪದವಿ ಪಡೆದರು. ಕ್ರೀಡಾಪಟುವಾಗಬೇಕೆಂದು ಹಂಬಲಿಸಿ ಶಾಟ್‍ ಪುಟ್, ಜಾವೆಲಿನ್, ಡಿಸ್ಕಸ್ ಥ್ರೋ ಹಾಗೂ ವ್ಹೀಲ್‍ಚೇರ್ ರೇಸಿಂಗ್‍ ಗಳಲ್ಲಿ ತರಬೇತಿ ಪಡೆದರು. 1988 ರಲ್ಲಿ ಸಿಯೋಲ್‍ನಲ್ಲಿ ನಡೆದ ಪ್ಯಾರಾಒಲಂಪಿಕ್ಸ್ ನಲ್ಲಿ ಪ್ರಥಮ ಬಾರಿಗೆ ಭಾರತವನ್ನು ಪ್ರತಿನಿಧಿಸಿದ್ದರು.

ಡೆನ್ಮಾರ್ಕ್, ಆಸ್ಟ್ರೇಲಿಯ, ಸ್ಪೇನ್, ಚೈನಾ, ಮಲೇಷಿಯಾ, ಜಪಾನ್ ಹಾಗೂ ಇಂಗ್ಲೆಂಡ್‍ ನಲ್ಲಿ ನಡೆದ ಪ್ಯಾರಾಒಲಂಪಿಕ್ಸ್, ಏಶಿಯನ್ ಗೇಮ್ಸ್, ಕಾಮನ್‍ವೆಲ್ತ್ ಗೇಮ್ಸ್, ವರ್ಲ್ಡ್ ಮಾಸ್ಟರ್ಸ್ ಹಾಗೂ ಓಪನ್ ಚಾಂಪಿಯನ್‍ಶಿಪ್ಸ್ ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಭಾರತದಲ್ಲಿ ಅಂಗವಿಕಲ ಕ್ರೀಡಾಪಟುಗಳಲ್ಲಿ ಅತೀ ಹೆಚ್ಚು ಬಂಗಾರದ ಪದಕ ಗಳಿಸಿ ಖ್ಯಾತಿಗೆ ಭಾಜನರಾಗಿದ್ದಾರೆ. ಒಟ್ಟು 389 ಬಂಗಾರದ ಪದಕಗಳು, 27 ಬೆಳ್ಳಿ ಪದಕ ಹಾಗೂ 7 ಕಂಚಿನ ಪದಕಗಳನ್ನು ಗಳಿಸಿದ್ದಾರೆ. ವಿಜಯಪುರ ಮಹಿಳಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಇವರಿಗೆ ಸಂದಿದೆ. 2004ರಲ್ಲಿ ಮಾತ್ರು ಫೌಂಡೇಷನ್ ಸ್ಥಾಪಿಸಿದರು. ಇದೀಗ ಇಲ್ಲಿ 25 ಅಂಗವಿಕಲ ಮಕ್ಕಳು ಕಲಿಯುತ್ತಿದ್ದಾರೆ.

ಇವರಿಗೆ ಸಂದ ಪ್ರಶಸ್ತಿಗಳು ಹಲವು: ಪದ್ಮಶ್ರಿ ಪ್ರಶಸ್ತಿ (2001), ಅರ್ಜುನ ಪ್ರಶಸ್ತಿ (1995), ಏಕಲವ್ಯ ಪ್ರಶಸ್ತಿ (1998), ಕೆ ಕೆ ಬಿರ್ಲಾ ಫೌಂಡೇಷನ್ ಪ್ರಶಸ್ತಿ (1998), ದಸರಾ ಪ್ರಶಸ್ತಿ (1989), ಆರ್ಯಭಟ ಪ್ರಶಸ್ತಿ (2008), ಅಮೆರಿಕಾದ ವಿಮೆನ್ ಆಫ್ ದಿ ಇಯರ್ (2001), ಇಂಗ್ಲೇಂಡ್‍ನ ವಿಮೆನ್ ಆಫ್ ದಿ ಇಯರ್ (2003), ಪ್ರತಿಭಾರತ್ನ ಪ್ರಶಸ್ತಿ (2001), ಅತ್ಯುತ್ತಮ ನಾಗರಿಕ ಪ್ರಶಸ್ತಿ (2004), ಸರ್ ಎಂ ವಿಶ್ವೇಶರಯ್ಯ ಪ್ರಶಸ್ತಿ (2009), ಡಾ ಭಾತ್ರಾ ಹೆಲ್ತಕೇರ್ ಪ್ರಶಸ್ತಿ (2009), ಕರ್ಮವೀರ ಪುರಸ್ಕಾರ (2009), ಸಂಕಲ್ಪರತ್ನ ಪ್ರಶಸ್ತಿ (2001), ಕಿರಣ ಅಚಿವಮೆಂಟ್ ಪ್ರಶಸ್ತಿ (2011), ಮಾನವರತ್ನ ಪ್ರಶಸ್ತಿ (2011), ಯುಗಾದಿ ಪುರಸ್ಕಾರ (2011).

Click to comment

Leave a Reply

Your email address will not be published. Required fields are marked *