ಇತ್ತೀಚಿಗೆ ಅಭಿನವ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಮಠ ಕೊಪ್ಪಳಕ್ಕೆ ಭೇಟಿ ನೀಡಿದ ನಾಯಕ ನಟ ಪ್ರವೀಣ್ ಕುಮಾರ್, ನಿರ್ಮಾಪಕ ಮಹಾಂತೇಶ್ ಚೊಳಚಗುಡ್ಡ ಇವರು ಸ್ವಾಮಿಗಳನ್ನು ಭೇಟಿ ಮಾಡಿ, ಇತ್ತೀಚಿಗೆ ಬಿಡುಗಡೆಯಾಗಿದ್ದ ದೇಸಾಯಿ (Desai) ಚಿತ್ರದ ಟೀಸರ್ ಹಾಗೂ ಹಾಡನ್ನು ಮೊಬೈಲ್ ನಲ್ಲೇ ಶ್ರೀಗಳಿಗೆ ತೋರಿಸಿದರು.
ಟೀಸರ್ ಹಾಗೂ ಹಾಡು ವೀಕ್ಷಿಸಿದ ಶ್ರೀಗಳು ಎರಡೂ ಚೆನ್ನಾಗಿ ಮೂಡಿಬಂದಿದೆ. ಒಂದು ಒಳ್ಳೆಯ ಕೌಟುಂಬಿಕ ಚಿತ್ರವನ್ನು ನಿರ್ಮಾಣ ಮಾಡಿದ್ದೀರಿ. ನಿಮಗೆ ಶುಭವಾಗಲಿ ಎಂದು ಶ್ರೀಗಳು ಹಾರೈಸಿ, ಶಾಲು ಹೊದಿಸಿ ಆಶೀರ್ವಾದಿಸಿದ್ದಾರೆ. ನಂತರ ಪೂಜ್ಯರು ಪ್ರಸಾದ ಸೇವಿಸಿ, ಅಜ್ಜನವರ ಗದ್ದುಗೆ ದರ್ಶನ ಮಾಡಿಕೊಂಡು ಹೋಗಿರಿ ಎಂದಿದ್ದಾರೆ.
ಶ್ರೀಗಳ ಮಾರ್ಗದರ್ಶನದಂತೆ ಗದ್ದುಗೆ ದರ್ಶನ ಪಡೆದು ಪ್ರಸಾದ ಸೇವಿಸಿ ಗುರುಗಳಿಂದ ಆಶೀರ್ವಾದ ಪಡೆದುಕೊಂಡೆವು. ಈ ಸಂದರ್ಭದಲ್ಲಿ ತೋಟ್ಟಪ್ಪ ಕಾಮನೂರು ಮತ್ತು ಬಸವರಾಜ್ ಬುಡ್ಡನಗೌಡರ, ಶರಣಪ್ಪ ನಾವೋಜಿ, ಅಶೋಕ್ ಲಾಗಲೋಟಿ, ನಿಂಗಣ್ಣ ಗೋಡಿ, ಸಂಗನಗೌಡ ವಿ ಟಿ ಪಾಟೀಲ್, ಎನ್ ಸಿ ಗೌಡರ, ಮಂಜುನಾಥ್ ಪಾಟೀಲ್ ಇನ್ನು ಅನೇಕ ಯುವಕರು ಮತ್ತು ಅಭಿಮಾನಿ ಬಳಗ ಜೊತೆಯಿದ್ದರು.