ನೆಲಮಂಗಲ: ಇಂದು ಸಂಜೆಯಿಂದ ನಾಳೆ ಮಧ್ಯಾಹ್ನದವರೆಗೂ ಸಂಭವಿಸಲಿರುವ ಸೂರ್ಯಗ್ರಹಣದ ವೇಳೆ ಎಲ್ಲಾ ದೇಗುಲಗಳನ್ನು ಮುಚ್ಚಲಾಗುತ್ತದೆ. ಈ ಹಿನ್ನೆಲೆ ದಕ್ಷಿಣ ಕಾಶಿ ಶಿವಗಂಗೆಯಲ್ಲಿ ಇಂದು ಸಂಜೆಯೇ ದೇವಸ್ಥಾನದಲ್ಲಿ ಶಿವನಿಗೆ ದರ್ಬೆಯಿಂದ ದಿಗ್ಬಂಧನ ಹಾಕಿ ಬಾಗಿಲು ಮುಚ್ಚಲಾಗುತ್ತಿದೆ.
ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ದಕ್ಷಿಣ ಕಾಶಿ ಖ್ಯಾತಿಯ ಶಿವಗಂಗೆಯ ಗವಿ ಗಂಗಾಧರೇಶ್ವರ ದೇವಸ್ಥಾನ ಹಾಗೂ ಸ್ವರ್ಣಾಂಭ ದೇವಾಲಯದಲ್ಲಿ ಗ್ರಹಣದ ಆಚರಣೆ ಮಾಡಿ, ಪೂಜೆ ಸಲ್ಲಿಸಲಾಗುತ್ತದೆ.
ಸಂಜೆ 5:30ಕ್ಕೆ ದರ್ಬೆಯಿಂದ ಸ್ವರ್ಣಾಂಭ ಸಮೇತ ಶ್ರೀ ಗಂಗಾಧರೇಶ್ವರ ದೇವರಿಗೆ ದಿಗ್ಬಂಧನ ಮಾಡಿ, ನಾಳೆ ಮಧ್ಯಾಹ್ನ 12:30ಕ್ಕೆ ದರ್ಬೆಯಿಂದ ವಿಮುಕ್ತಿ ಮಾಡಲಾಗುತ್ತದೆ. ನಂತರ ಹಲವಾರು ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.