ಅಹಮದಾಬಾದ್: ವಿಶ್ವಕಪ್ (World Cup 2023) ಟೂರ್ನಿಯ ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಆರಂಭವಾಗಿದೆ. ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಫೀಲ್ಡಿಂಗ್ ಆಯ್ದುಕೊಂಡಿದ್ದು, ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿದ್ದಾರೆ.
Advertisement
1.32 ಲಕ್ಷ ಸಾಮರ್ಥ್ಯ ಆಸನಗಳ ವ್ಯವಸ್ಥೆಯುಳ್ಳ ಮೋದಿ ಕ್ರೀಡಾಂಗಣಕ್ಕೆ ಜನಸಾಗರವೇ ಹರಿದುಬಂದಿದ್ದು, ಕ್ರೀಡಾಂಗಣದ ಹೊರಗೂ ಸಾವಿರಾರು ಅಭಿಮಾನಿಗಳು ಟೀಂ ಇಂಡಿಯಾವನ್ನು (Team India Fans) ಹುರಿದುಂಬಿಸುತ್ತಿದ್ದಾರೆ. ಈ ನಡುವೆ ಎದುರಾಳಿ ತಂಡದ ಆಟಗಾರರನ್ನೂ ವ್ಯಂಗ್ಯಮಾಡುವ ಪ್ರಸಂಗಗಳೂ ಕಂಡುಬಂದಿದ್ದು, ಅಂತಹ ಅಭಿಮಾನಿಗಳಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕ್ಲಾಸ್ ತೆಗೆದುಕೊಂಡಿದ್ದಾರೆ.
Advertisement
Advertisement
ಟಾಸ್ ಬಳಿಕ ಈ ಕುರಿತು ಮಾತನಾಡಿರುವ ಗೌತಮ್ ಗಂಭೀರ್ (Gautam Gambhir), ವಿಶ್ವಕಪ್‌ನಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿರುವ ಪಾಕಿಸ್ತಾನ ತಂಡಕ್ಕೆ ಅಗೌರವ ತೋರಬೇಡಿ. ನಿಮ್ಮ ತಂಡವನ್ನು ಬೆಂಬಲಿಸಿ, ಆದ್ರೆ ನಿಮ್ಮ ಸಂದರ್ಶಕರೊಂದಿಗೆ ಮತ್ತು ಅತಿಥಿಗಳಾಗಿ ಬಂದವರೊಡನೆ ಅನುಚಿತವಾಗಿ ವರ್ತಿಸಬೇಡಿ. ಅವರು ಇಲ್ಲಿಗೆ ವಿಶ್ವಕಪ್ ಆಡಲು ಬಂದಿದ್ದಾರೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: World Cup 2023: ಇಂಡೋ-ಪಾಕ್ ಕದನ ಯಾವಾಗಲೂ ರಣಕಣ ಏಕೆ? – ನೆನಪಿದೆಯಾ ಆ ಕರಾಳ ದಿನಗಳು?
Advertisement
ಟೀಂ ಇಂಡಿಯಾ ಪ್ಲೇಯಿಂಗ್-11: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್. ಇದನ್ನೂ ಓದಿ: Ind vs Pak ರೋಚಕ ಸಮರಕ್ಕೆ ಕ್ಷಣಗಣನೆ – ಮೋದಿ ಕ್ರೀಡಾಂಗಣದಲ್ಲಿ ಜನಸಾಗರ, ಭಾರತದ ಗೆಲುವಿಗೆ ಹೋಮ ಹವನ
ಪಾಕಿಸ್ತಾನ ಪ್ಲೇಯಿಂಗ್-11: ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಕಾರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಶಾ ಆಫ್ರಿದಿ, ಹ್ಯಾರಿಸ್ ರೌಫ್. ಇದನ್ನೂ ಓದಿ: ಇಂಡೋ-ಪಾಕ್ ವಿಶ್ವ ಸಮರ: ʻಗೆದ್ದು ಬಾ ಭಾರತʼ – ಕೋಟ್ಯಂತರ ಅಭಿಮಾನಿಗಳ ಶುಭ ಹಾರೈಕೆ
Web Stories