ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ರೋಚಕ ಜಯ ಸಾಧಿಸಿತು.
ಈ ಪಂದ್ಯದಲ್ಲಿ 240 ಎಸೆತಗಳಲ್ಲಿ ಬರೋಬ್ಬರಿ 425 ರನ್ ಸಿಡಿಯಿತು. ಸಿಕ್ಸರ್ ಬೌಂಡರಿಗಳ ಆಟದಲ್ಲಿ ಒಟ್ಟು 27 ಸಿಕ್ಸರ್, 29 ಬೌಂಡರಿಗಳು ದಾಖಲಾಯಿತು. ಆರ್‌ಸಿಬಿ ಪರ 15 ಸಿಕ್ಸರ್, 12 ಬೌಂಡರಿ ಸಿಡಿದರೆ, ಲಕ್ನೋ ಸೂಪರ್ ಜೈಂಟ್ಸ್ ಪರ 12 ಸಿಕ್ಸರ್, 17 ಬೌಂಡರಿ ಸಿಡಿಯಿತು. ಇದನ್ನೂ ಓದಿ: IPL 2023: ಲಕ್ನೋಗೆ ಸೂಪರ್ ಜಯ – KGF ವೀರಾವೇಷದ ಆಟ ವ್ಯರ್ಥ, RCBಗೆ ವಿರೋಚಿತ ಸೋಲು
Advertisement
Advertisement
ಕೊನೆಯ ಓವರ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 5 ರನ್‌ಗಳ ಅಗತ್ಯವಿತ್ತು. ಕ್ರೀಸ್‌ನಲ್ಲಿದ್ದ ಜಯದೇವ್ ಉನಾದ್ಕಟ್ 1 ರನ್ ತೆಗೆದುಕೊಂಡರು. 2ನೇ ಎಸೆತದಲ್ಲಿ ಮಾರ್ಕ್‌ವುಡ್, ಹರ್ಷಲ್ ಪಟೇಲ್ ದಾಳಿಗೆ ಕ್ಲೀನ್ ಬೌಲ್ಡ್ ಆದರು. ಬಳಿಕ ಕ್ರೀಸ್‌ಗೆ ಬಂದ ರವಿ ಬಿಷ್ಣೋಯಿ 3ನೇ ಎಸೆತದಲ್ಲಿ 2 ರನ್, 4ನೇ ಎಸೆತದಲ್ಲಿ 1 ರನ್ ಕದ್ದರು, ಇನ್ನೆರಡು ಎಸೆತಗಳಿಗೆ 1 ರನ್ ಬೇಕಿದ್ದಾಗಲೇ 5ನೇ ಎಸೆತದಲ್ಲಿ ಜಯದೇವ್ ಉನಾದ್ಕಟ್ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಇನ್ನೂಂದು 1 ಎಸೆತಕ್ಕೆ 1 ರನ್ ಬೇಕಿದ್ದಾಗ ಅವೇಶ್‌ಖಾನ್ ಕೊನೆಯ ಎಸೆತ ಎದುರಿಸುವಲ್ಲಿ ವಿಫಲರಾದರು. ಆದರೆ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ನೇರವಾಗಿ ಬಾಲ್ ಕ್ಯಾಚ್ ಮಾಡದೇ ಕೈಚೆಲ್ಲಿದರು. ಇದೇ ಚಾನ್ಸ್ ಬಳಸಿಕೊಂಡ ಲಕ್ನೋ ಆಟಗಾರರು 1 ರನ್ ಬೈಸ್ ಕದ್ದು ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು.
Advertisement
Advertisement
ಪಂದ್ಯ ಗೆಲುವು ಸಾಧಿಸಿದ ನಂತರ ಮೈದಾನಕ್ಕೆ ಬಂದ ಗೌತಮ್ ಗಂಭೀರ್ (Gautam Gambhir) ಆರ್‌ಸಿಬಿ ಆಟಗಾರರಿಗೆ ಶೇಖ್ ಹ್ಯಾಂಡ್ ಮಾಡುತ್ತಿದ್ದರು. ಲಕ್ನೋ ಗೆಲುವು ಸಾಧಿಸಿದ ನಂತರವೂ ʻಆರ್‌ಸಿಬಿ, ಆರ್‌ಸಿಬಿʼ ಎಂದು ಕೂಗುತ್ತಿದ್ದ ಅಭಿಮಾನಿಗಳ ಕಡೆ ತಿರುಗಿದ ಗಂಭೀರ್ ತಮ್ಮ ಬಾಯಿಮೇಲೆ ಬೆರಳಿಟ್ಟು ʻಉಶ್, ಸೈಲೆಂಟಾಗಿರಬೇಕುʼ ಎನ್ನುವಂತೆ ರಿಯಾಕ್ಷನ್ ಕೊಟ್ಟರು. ಈ ಕುರಿತ ವೀಡಿಯೋ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಆರ್‌ಸಿಬಿ ಫ್ಯಾನ್ಸ್‌ಗಳು ಗಂಭೀರ್ ವಿರುದ್ಧ ಮುಗಿಬಿದ್ದಿದ್ದಾರೆ. ಇದನ್ನೂ ಓದಿ: ಸಿಕ್ಸರ್, ಬೌಂಡರಿಗಳಿಂದಲೇ 50 ರನ್ – ಇಬ್ಬರು ವಿಶೇಷ ವ್ಯಕ್ತಿಗಳಿಗೆ ಅರ್ಧಶತಕ ಅರ್ಪಿಸಿದ ಪೂರನ್
ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಕಲೆಹಾಕಿತು. 213 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿ ರೋಚಕ ಜಯ ಸಾಧಿಸಿತು.