ನವದೆಹಲಿ: ವಿರಾಟ್ ಕೊಹ್ಲಿ ಅವರು ಭಾರತ ಕ್ರಿಕೆಟ್ ತಂಡದ ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಬಳಿಕ ಅನೇಕ ಕ್ರಿಕೆಟಿಗರು ಹಾಗೂ ಮಾಜಿ ಆಟಗಾರರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಂತೆಯೇ ಗೌತಮ್ ಗಂಭೀರ್ ಅವರು ಪ್ರತಿಕ್ರಿಯಿಸಿ, ನಾಯಕತ್ವ ಯಾರೊಬ್ಬರ ಜನ್ಮಸಿದ್ಧ ಹಕ್ಕಲ್ಲ ಎಂದು ಹೇಳಿದ್ದಾರೆ.
Advertisement
ವಿರಾಟ್ ಕೊಹ್ಲಿ ಈಗ ಭಾರತ ಕ್ರಿಕೆಟ್ ತಂಡದ ಎಲ್ಲಾ ಮಾದರಿಯ ನಾಯಕತ್ವದಿಂದ ಹೊರನಡೆದಿದ್ದಾರೆ. ಈ ಬಗ್ಗೆ ಮಾತನಾಡಿದ ಗಂಭೀರ್, 33 ವಯಸ್ಸಿನ ಆಟಗಾರರು ರನ್ ಗಳಿಸುವತ್ತ ಗಮನ ಹರಿಸಬೇಕು. ಅದು ಹೆಚ್ಚು ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಮೂರು ಮಾದರಿ ತಂಡಕ್ಕೂ ಒಬ್ಬನೇ ನಾಯಕ – ಹಿಟ್‍ಮ್ಯಾನ್‍ಗೆ ಜಾಕ್‍ಪಾಟ್?
Advertisement
Advertisement
ನಾಯಕತ್ವ ಯಾರೊಬ್ಬರ ಜನ್ಮಸಿದ್ಧ ಹಕ್ಕಲ್ಲ. ಎಂ.ಎಸ್.ಧೋನಿ ಅಂತಹವರು ತಮ್ಮ ನಾಯಕತ್ವವನ್ನು ಬಿಟ್ಟು ವಿರಾಟ್ ಕೊಹ್ಲಿಗೆ ಅವಕಾಶ ನೀಡಿದರು. ವಿರಾಟ್ ನಾಯಕತ್ವದಲ್ಲಿಯೂ ಆಟಗಾರನಾಗಿ ಧೋನಿ ಆಡಿದ್ದಾರೆ. ಅವರು ಮೂರು ಬಾರಿ ಐಸಿಸಿ ಟ್ರೋಫಿ ಹಾಗೂ ಐಪಿಎಲ್ ಟ್ರೋಫಿಗಳನ್ನೂ ಗೆದ್ದುಕೊಟ್ಟಿದ್ದಾರೆ ಎಂದು ಗಂಭೀರ್ ತಿಳಿಸಿದ್ದಾರೆ.
Advertisement
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಸೋಲನುಭವಿಸಿದ ಬಳಿಕ ವಿರಾಟ್ ಕೊಹ್ಲಿ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಮೂಲಕ ಅವರು ಭಾರತ ತಂಡದ ಎಲ್ಲಾ ಮಾದರಿಯ ನಾಯಕತ್ವಕ್ಕೆ ರಾಜೀನಾಮೆ ನೀಡಿದಂತಾಗಿದೆ. ಈಗ ಟೀಂ ಇಂಡಿಯಾದ ಮೂರು ಮಾದರಿ ತಂಡಕ್ಕೂ ರೋಹಿತ್ ಶರ್ಮಾ ನಾಯಕ ಎಂದು ಬಿಸಿಸಿಐ ಘೋಷಿಸಿದೆ. ಇದನ್ನೂ ಓದಿ: ಕೊಹ್ಲಿ ಯಾವುದೇ ವಿವಾದದಲ್ಲಿರಲು ಬಯಸುವುದಿಲ್ಲ: ಬಾಲ್ಯದ ಕೋಚ್