ನವದೆಹಲಿ: ಕರ್ಕರ್ಡೂಮಾ ನ್ಯಾಯಾಲಯದ (Karkardooma court) ಬಳಿಯ ಪ್ರಿಯಾ ಎನ್‍ಕ್ಲೇವ್‍ನಲ್ಲಿ (Priya Enclave) ಡಂಪಿಂಗ್ ಯಾರ್ಡ್‍ಗಾಗಿ ಎಂಸಿಡಿ ನಿಗದಿಪಡಿಸಿದ್ದ ಭೂಮಿಯಲ್ಲಿ ಅನಧಿಕೃತವಾಗಿ ಗ್ರಂಥಾಲಯವನ್ನು ನಿರ್ಮಿಸಿದ ಆರೋಪದಡಿ ಬಿಜೆಪಿ ಸಂಸದ ಗೌತಮ್ ಗಂಭೀರ್‌ಗೆ (Gautam Gambhir) ದೆಹಲಿ ನ್ಯಾಯಾಲಯ ( Delhi court) ಸಮನ್ಸ್ ಜಾರಿ ಮಾಡಿದೆ.
Advertisement
ಕರ್ಕರ್ಡೂಮಾ ನ್ಯಾಯಾಲಯದ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಹಿಮಾಂಶು ರಮಣ್ ಸಿಂಗ್ ಅವರು ಸೋಮವಾರ ಗೌತಮ್ ಗಂಭೀರ್ ಅವರಿಗೆ 2022ರ ಡಿಸೆಂಬರ್ 13ಕ್ಕೆ ಈ ಕುರಿತಂತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲಿಯೇ ಹೈದರಾಬಾದ್‍ಗೆ ಲಗ್ಗೆ ಇಡಲಿದೆ ಎಲೆಕ್ಟ್ರಿಕಲ್ ಡಬಲ್ ಡೆಕ್ಕರ್ ಬಸ್
Advertisement
Advertisement
ಗಂಭೀರ್ ಮತ್ತು ಎಂಸಿಡಿ ವಿರುದ್ಧ ಅರ್ಜಿದಾರರಾದ ರವಿ ಭಾರ್ಗವ ಮತ್ತು ರೋಹಿತ್ ಕುಮಾರ್ ಮಹಿಯಾ ಅವರು ಸಿವಿಲ್ ಮೊಕದ್ದಮೆ ಹೂಡಿದ್ದು, ಗಂಭೀರ್ ಅಕ್ರಮವಾಗಿ ನಿರ್ಮಿಸಿರುವ ಗ್ರಂಥಾಲಯದ ಕಟ್ಟಡವನ್ನು ಬಳಸದಂತೆ ತಡೆಯಲು ಕೋರ್ಟ್ ಮೊರೆ ಹೋಗಿದ್ದಾರೆ. ಪ್ರಸ್ತುತ ಮೊಕದ್ದಮೆಯನ್ನು ಸೆಕ್ಷನ್ 91 ಸಿಪಿಸಿ ಅಡಿಯಲ್ಲಿ ಪರಿಗಣಿಸಬಹುದು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಆಸ್ತಿ ಕೊಡಲ್ಲ ಎಂದಿದ್ದಕ್ಕೆ ಮಗ, ಸೊಸೆ ಸೇರಿ ತಾಯಿಗೆ ಬೆಂಕಿ ಹಚ್ಚಿದ್ರು