ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಓಪನಿಂಗ್ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಎಲ್ಲಾ ಮಾದರಿಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ.
ಗೌತಮ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ‘ಭಾರವಾದ ಹೃದಯದಿಂದ ಅತ್ಯಂತ ಕಠಿಣವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದು, ಭಾರವಾದ ಹೃದಯದ ಮೂಲಕವೇ ನನ್ನ ನಿರ್ಧಾರವನ್ನು ಘೋಷಿಸುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
Advertisement
The most difficult decisions are often taken with the heaviest of hearts.
And with one heavy heart, I’ve decided to make an announcement that I’ve dreaded all my life.
➡️https://t.co/J8QrSHHRCT@BCCI #Unbeaten
— Gautam Gambhir (@GautamGambhir) December 4, 2018
Advertisement
ನಿವೃತ್ತಿ ಕುರಿತು ಆಂಗ್ಲ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, ಸತತವಾಗಿ 15 ವರ್ಷ ಭಾರತ ದೇಶಕ್ಕಾಗಿ ನಾನು ಕ್ರಿಕೆಟ್ ಆಡಿದ್ದೇನೆ. ಈ ಸುಂದರವಾದ ಆಟದಿಂದ ಈಗ ನಿವೃತ್ತಿ ಬಯಸುತ್ತಿದ್ದೇನೆ. ನನ್ನ ಕೊನೆಯ ಪಂದ್ಯವನ್ನು ಡಿಸೆಂಬರ್ 6 ರಂದು ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯಲಿರುವ ಆಂಧ್ರ ವಿರುದ್ಧದ ರಣಜಿ ಪಂದ್ಯದಲ್ಲಿ ಆಡಲಿದ್ದೇನೆ. ಒಬ್ಬ ಬ್ಯಾಟ್ಸ್‌ಮನ್ ಆಗಿ ಸಮಯಕ್ಕೆ ತುಂಬಾ ಮಹತ್ವವನ್ನು ನೀಡಿದ್ದೇನೆ. ಈಗ ನನಗೆ ಸರಿಯಾದ ಸಮಯ ಬಂದಿದೆ ಎಂದು ಹೇಳಿದ್ದಾರೆ.
Advertisement
Indian batsman Gautam Gambhir: After more than 15 years of cricket for my country, I want to retire from playing this beautiful game. pic.twitter.com/6OjThBsUKC
— ANI (@ANI) December 4, 2018
Advertisement
37 ವರ್ಷದ ಗೌತಮ್ ಗಂಭೀರ್ 2003ರ ಏಪ್ರಿಲ್ 11ರಂದು ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತದ 149ನೇ ಆಟಗಾರನಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದ್ದರು. ಬಳಿಕ 2004ರ ನವೆಂಬರ್ 3ರಂದು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತದ 249ನೇ ಆಟಗಾರನಾಗಿ ಆಡಿದ್ದರು. ಗೌತಮ್ ಇದುವರೆಗೂ ಒಟ್ಟು 147 ಏಕದಿನ ಪಂದ್ಯಗಳನ್ನಾಡಿದ್ದು, 39.68ರ ಸರಾಸರಿಯಲ್ಲಿ 5,238 ರನ್ ಗಳಿಸಿದ್ದಾರೆ. ಇದರಲ್ಲಿ 11 ಶತಕ ಹಾಗೂ 34 ಅರ್ಧ ಶತಕಗಳನ್ನು ಒಳಗೊಂಡಿದೆ. ಕೊನೆಯದಾಗಿ 2013ರ ಜನವರಿ 27ರಂದು ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯವನ್ನು ಆಡಿದ್ದರು.
ಟೆಸ್ಟ್ ನಲ್ಲಿ 58 ಪಂದ್ಯಗಳನ್ನು ಆಡಿರುವ ಗಂಭೀರ್, 41.95 ಸರಾಸರಿಯಲ್ಲಿ 4,154 ರನ್ ಗಳಿಸಿದ್ದಾರೆ. ಇದರಲ್ಲಿ 9 ಶತಕ ಸೇರಿದಂತೆ 22 ಅರ್ಧ ಶತಕಗಳು ದಾಖಲಾಗಿವೆ. ಟೆಸ್ಟ್ ನಲ್ಲಿ ಗರಿಷ್ಠ 206 ಹೊಡೆದಿದ್ದಾರೆ. ಅಲ್ಲದೇ ಟಿ-20ಯಲ್ಲಿ 37 ಪಂದ್ಯಗಳನ್ನಾಡಿ 27.41ರ ಸರಾಸರಿಯಲ್ಲಿ 932 ರನ್ ಗಳಿಸಿದ್ದಾರೆ.
ಇದಲ್ಲದೇ ಭಾರತದ ಚುಟುಕು ಕ್ರಿಕೆಟ್ ಎಂದೇ ಹೆಸರು ಪಡೆದಿರುವ ಐಪಿಲ್ ಪಂದ್ಯಾವಳಿಯಲ್ಲಿ ದೆಹಲಿ ಹಾಗೂ ಕೋಲ್ಕತ್ತಾ ತಂಡಗಳನ್ನು ಗೌತಮ್ ಗಂಭೀರ್ ಮುನ್ನಡೆಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv