ನವದೆಹಲಿ: ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರಿಗೆ ಕಳೆದ ಒಂದು ವಾರದಿಂದ ಐಸಿಸ್ ಕಾಶ್ಮೀರದಿಂದ ಜೀವ ಬೆದರಿಕೆ ಕರೆಗಳು ಬಂದಿವೆ. ಇಂದು ಕೂಡ ನನಗೆ ಕೊಲೆ ಬೆದರಿಕೆ ಇದೆ ಎಂದು ಪೊಲೀಸ್ ಠಾಣೆಗೆ ಗಂಭೀರ್ ದೂರು ನೀಡಿದ್ದಾರೆ.
ನಿಮ್ಮ ದೆಹಲಿ ಪೊಲೀಸರು ಹಾಗೂ ಐಪಿಎಸ್ ಅಧಿಕಾರಿ ಶ್ವೇತಾ ಅವರು ನಮ್ಮನ್ನು ಏನೂ ಮಾಡಲು ಆಗುವುದಿಲ್ಲ. ನಿಮ್ಮ ಪೊಲೀಸರ ನಡುವೆಯೇ ನಮ್ಮ ಗೂಢಾಚಾರಿಗಳಿದ್ದಾರೆ. ನಿಮ್ಮ ಬಗ್ಗೆ ಎಲ್ಲಾ ಮಾಹಿತಿಗಳನ್ನು ಕಲೆಹಾಕುತ್ತಿದ್ದೇವೆ ಎಂದು ಗಂಭೀರ್ ಅವರ ಇ-ಮೇಲ್‌ಗೆ ಐಸಿಸ್ ಕಾಶ್ಮೀರ ಹೆಸರಿನಿಂದ ಬೆದರಿಕೆಯ ಸಂದೇಶ ರವಾನೆಯಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಎಟಿಎಂ ಸೆಕ್ಯೂರಿಟಿ ಹಂತಕರ ಬಂಧನ
Advertisement
Advertisement
ಒಂದು ವಾರದಲ್ಲಿ ಗೌತಮ್ ಗಂಭೀರ್‌ಗೆ ಕೇಳಿಬಂದಿರುವ 3ನೇ ಜೀವ ಬೆದರಿಕೆ ಕರೆ ಇದಾಗಿದೆ. ಇ-ಮೇಲ್‌ಗೆ ಸಂಬಂಧಿಸಿದಂತೆ ಮಾಹಿತಿಯನ್ನು ಕಲೆಹಾಕಲಾಗಿದೆ. ಈ ಸಂಬಂಧ ತನಿಖೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಮೈಸೂರು ಗ್ಯಾಂಗ್ ರೇಪ್: ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ
Advertisement
ನಿಮ್ಮ ಮತ್ತು ನಿಮ್ಮ ಕುಟುಂಬದವರನ್ನು ಕೊಲ್ಲುತ್ತೇವೆ ಎಂದು ಐಸಿಎಸ್ ಕಾಶ್ಮೀರ ಹೆಸರಿನಿಂದ ಗೌತಮ್ ಗಂಭೀರ್ ಅವರ ಇ-ಮೇಲ್‌ಗೆ ಮಂಗಳವಾರ ಬೆದರಿಕೆ ಸಂದೇಶ ಬಂದಿದೆ ಎಂದು ಗಂಭೀರ್ ಅವರ ಕಾರ್ಯದರ್ಶಿ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು, ರಾಜೀಂದರ್ ನಗರದಲ್ಲಿರುವ ಗಂಭೀರ್ ಮನೆಗೆ ಹೆಚ್ಚಿನ ಭದ್ರತೆಯನ್ನು ಕಲ್ಪಿಸಿದ್ದರು. ಮತ್ತೊಂದು ಬೆದರಿಕೆ ಕರೆಯಲ್ಲಿ, ಗೌತಮ್ ಗಂಭೀರ್ ಅವರ ನಿವಾಸದ ವೀಡಿಯೋವನ್ನು ಹಾಕಲಾಗಿತ್ತು.
Advertisement
ಸಂಬಂಧಪಟ್ಟ ಇ-ಮೇಲ್ ಖಾತೆ ನಿರ್ವಾಹಕರು ಮತ್ತು ಅವರಿಂದ ಬಂದಿರುವ ಬೆದರಿಕೆ ಸಂದೇಶಗಳನ್ನು ಗೂಗಲ್‌ಗೆ ಕಳುಹಿಸಿರುವ ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರ್ಯಾಟಜಿ ಆಪರೇಷನ್ಸ್ ಯೂನಿಟ್‌ನ ವಿಶೇಷ ಕೋಶವು ಹೆಚ್ಚಿನ ಮಾಹಿತಿ ಕಲೆಹಾಕುವಂತೆ ತಿಳಿಸಿದೆ.