ನವದೆಹಲಿ: ಅದಾನಿ ಗ್ರೂಪ್ಸ್ ಅಧ್ಯಕ್ಷ ಗೌತಮ್ ಅದಾನಿ ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್‌ಗೇಟ್ಸ್ ಅವರನ್ನು ಹಿಂದಿಕ್ಕಿ, ವಿಶ್ವದ 4ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಫೋರ್ಬ್ಸ್ ರಿಯಲ್-ಟೈಮ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಅದಾನಿಯವರ ನಿವ್ವಳ ಮೌಲ್ಯ 104.6 ಶತಕೋಟಿ ಡಾಲರ್‌ನಷ್ಟಿದೆ(ಸುಮಾರು 8.3 ಲಕ್ಷ ಕೋಟಿ ರೂ.) ಎಂದು ಉಲ್ಲೇಖಿಸಲಾಗಿದೆ. ಆದರೆ ಇತ್ತೀಚೆಗೆ ಅವರು ತಮ್ಮ ಸಂಪತ್ತಿನಲ್ಲಿ 20 ಬಿಲಿಯನ್ ಡಾಲರ್(ಸುಮಾರು 1.5 ಲಕ್ಷ ಕೋಟಿ ರೂ.) ಅನ್ನು ತನ್ನದೇ ಸಂಸ್ಥೆಗೆ ದೇಣಿಗೆ ನೀಡುವುದಾಗಿ ಘೋಷಿಸಿದ ಬಳಿಕ ಅವರ ಸ್ಥಾನ ಮೇಲೇರಿದೆ. ಅದಾನಿ ಇದೀಗ 115.5 ಶತಕೋಟಿ ಡಾಲರ್‌ನ(ಸುಮಾರು 9.2 ಲಕ್ಷ ಕೋಟಿ ರೂ.) ಒಡೆಯರಾಗಿದ್ದಾರೆ. ಇದನ್ನೂ ಓದಿ: ಇಡಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ – ಬ್ಯಾರಿಕೇಡ್ ಮೇಲಿಂದ ಹಾರಿದ ಡಿಕೆಶಿ ವಶ
Advertisement
Advertisement
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲೋನ್ ಮಸ್ಕ್ ಅಗ್ರ ಸ್ಥಾನದಲ್ಲಿದ್ದು, 2ನೇ ಸ್ಥಾನದಲ್ಲಿ ಅಮೇಜಾನ್‌ನ ಜೆಫ್ ಬೆಜೋಸ್ ಇದ್ದಾರೆ. ಮೂರನೇ ಸ್ಥಾನದಲ್ಲಿ ಬರ್ನಾರ್ಡ್ ಅರ್ನಾಲ್ಟ್ ಹಾಗೂ ಲೂಯಿ ವಿಟಾನ್ ಅವರ ಕುಟುಂಬವಿದ್ದು, ಇದೀಗ ಮೈಕ್ರೋಸಾಫ್ಟ್‌ನ ಬಿಲ್‌ಗೇಟ್ಸ್ ಅವರನ್ನು ಹಿಂದಿಕ್ಕಿ ಅದಾನಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಇದನ್ನೂ ಓದಿ: ಮೈಕ್ರೋಸಾಫ್ಟ್ ಟೀಮ್ಸ್ ಸರ್ವರ್ ಡೌನ್ – ಸಾವಿರಾರು ಬಳಕೆದಾರರಿಗೆ ಸಿಗ್ತಾ ಇಲ್ಲ ಪ್ರವೇಶ
Advertisement
ಗೌತಮ್ ಅದಾನಿಯವರ ಅದಾನಿ ಎಂಟರ್‌ಪ್ರೈಸ್ ಲಿಮಿಟೆಡ್ 5ಜಿ ಸ್ಪೆಕ್ಟ್ರಂ ಹರಾಜಿನಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಿದೆ. ದೂರಸಂಪರ್ಕ ಇಲಾಖೆ ಮಾಹಿತಿ ಪ್ರಕಾರ ಜುಲೈ 26 ರಂದು ನಡೆಯಲಿರುವ 5ಜಿ ಸ್ಪೆಕ್ಟ್ರಂ ಹರಾಜಿನಲ್ಲಿ ಭಾಗವಹಿಸಲು ಅದಾನಿ ಜುಲೈ 8 ರಂದು ಅರ್ಜಿ ನೀಡಿದ್ದಾರೆ.