ನವದೆಹಲಿ: ಅಮೆರಿಕದ ಇಂಧನ ಭದ್ರತೆ (US energy security) ಮತ್ತು ಸ್ಥಿತಿಸ್ಥಾಪಕತ್ವ ಮೂಲ ಸೌಕರ್ಯಗಳ (Resilient Infrastructure) ಯೋಜನೆಗೆ 10 ಶತಕೋಟಿ ಡಾಲರ್ ಹೂಡಿಕೆ ಮಾಡುವ ಉದ್ದೇಶವನ್ನು ಅದಾನಿ ಸಮೂಹ ಹೊಂದಿದೆ. ಈ ಮೂಲಕ 15,000 ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ ಎಂದು ಅಧ್ಯಕ್ಷ ಗೌತಮ್ ಅದಾನಿ (Gautam Adani) ಹೇಳಿದ್ದಾರೆ.
Congratulations to @realDonaldTrump. As the partnership between India and the United States deepens, the Adani Group is committed to leveraging its global expertise and invest $10 billion in US energy security and resilient infrastructure projects, aiming to create up to 15,000… pic.twitter.com/X9wZm4BV2u
— Gautam Adani (@gautam_adani) November 13, 2024
Advertisement
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ 2ನೇ ಬಾರಿಗೆ ಗೆಲುವು ಸಾಧಿಸಿದ ಡೊನಾಲ್ಡ್ ಟ್ರಂಪ್ ಅವರಿಗೆ ಅಭಿನಂದನೆ ಸಲ್ಲಿಸಿರುವ ಅದಾನಿ, ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಮತ್ತಷ್ಟು ಗಾಢವಾಗಿಸುವ ವಿಶ್ವಾಸ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಅದಾನಿ ಸಮೂಹ ತನ್ನ ಜಾಗತೀಕ ಪರಿಣತಿ ಬಳಸಿಕೊಂಡು ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ. 10 ಶತಕೋಟಿ ಡಾಲರ್ ಹೂಡಿಕೆಗೆ ಅದಾನಿ ಬದ್ಧವಾಗಿದ್ದು, 15,000 ಉದ್ಯೋಗ ಸೃಷ್ಟಿ ಮಾಡುವ ಗುರಿ ಹೊಂದಿದೆ ಎಂದು ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
Advertisement
It was a privilege to host the ambassadors from the EU, Belgium, Denmark and Germany at our office. I deeply appreciate their visit to the world’s largest renewable energy park in Khavda, Gujarat, and India’s largest port, logistics and industrial hub in Mundra. Our discussions… pic.twitter.com/RECIKxbfkc
— Gautam Adani (@gautam_adani) November 12, 2024
Advertisement
ಬಿಲಿಯನೇರ್ ಉದ್ಯಮಿಯೂ ಆಗಿರುವ ಡೊನಾಲ್ಡ್ ಟ್ರಂಪ್ (DonaldTrump) ಅವರು ಇತ್ತೀಚೆಗೆ ಪ್ರತಿಸ್ಪರ್ಧಿ ಡೆಮಾಕ್ರೆಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರನ್ನ ಸೋಲಿಸಿದರು. ಟ್ರಂಪ್ ಅವರ ಈ ಗೆಲುವು ಅಮೆರಿಕ ಮತ್ತು ಭಾರತದ (USA And India) ನಡುವಿನ ಸಂಬಂಧ ಉತ್ತಮಗೊಳಿಸುತ್ತದೆ ಎಂದು ಹೇಳಲಾಗಿದೆ. ಈ ಬೆಳವಣಿಗೆಯ ನಡುವೆ ಅದಾನಿ ಮಹತ್ವದ ಘೋಷಣೆ ಮಾಡಿದ್ದಾರೆ. ಸದ್ಯ ಅಮೆರಿಕದಲ್ಲಿ ಇಂಧನ ಭದ್ರತೆ ಮತ್ತು ಮೂಲ ಸೌಕರ್ಯಗಳಲ್ಲಿ ಹೂಡಿಕೆ ಮಾಡುವುದಾಗಿ ಹೇಳಿದ್ದರೂ, ನಿರ್ದಿಷ್ಟ ಯೋಜನೆಯ ಟೈಮ್‌ಲೈನ್‌ಗಳ ಬಗ್ಗೆ ಸ್ಪಷ್ಟಪಡಿಸಿಲ್ಲ ಎಂದು ವರದಿಗಳು ಹೇಳಿವೆ.
Advertisement
ಒಂದು ದಿನದ ಹಿಂದೆಯಷ್ಟೇ ಯೂರೋಪಿಯನ್ ಯೂನಿಯನ್, ಜರ್ಮನಿ, ಡೆನ್ಮಾರ್ಕ್ ಮತ್ತು ಬೆಲ್ಜಿಯಂ ರಾಯಭಾರಿಗಳು ಅದಾನಿ ಸಮೂಹ ನೇತೃತ್ವದ ಗುಜರಾತ್‌ನ ಖಾವ್ಡಾದಲ್ಲಿರುವ ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಎನರ್ಜಿ ಪಾರ್ಕ್ ಹಾಗೂ ಮುಂದ್ರಾದಲ್ಲಿರುವ ಬಂದರು ಹಾಗೂ ಲಾಜಿಸ್ಟಿಕ್ಸ್ ಮತ್ತು ಕೈಗಾರಿಕಾ ಸಂಕೀರ್ಣಕ್ಕೆ ಭೇಟಿ ನೀಡಿದ್ದರು.
ಈ ವೇಳೆ ಭಾರತದಲ್ಲಿ ಶಕ್ತಿ ಪರಿವರ್ತನೆಯನ್ನು ಹೆಚ್ಚಿಸುವುದು, ಹೈಡ್ರೋಜನ್ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ವಿಷಯಗಳ ಬಗ್ಗೆ ಚರ್ಚಿಸಲಾಗಿತ್ತು. ಇದರೊಂದಿಗೆ ಜಾಗತಿಕವಾಗಿ ಪಾಲುದಾರಿಕೆಯನ್ನು ಬಲಪಡಿಸುವ ವಿಷಯಗಳ ಮೇಲೆ ಕೇಂದ್ರೀಕರಿಸಲಾಗಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿದ್ದರು.