ಬೆಂಗಳೂರು: ಪತ್ರಕರ್ತೆ, ಸಾಹಿತಿ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ನಡೆಸಿ ಪರಾರಿಯಾಗಿದ್ದಾರೆ.
ರಾಜರಾಜೇಶ್ವರಿ ನಗರದ ಸುಭಾಶ್ ಪಾರ್ಕ್ ಬಳಿ ಘಟನೆ ನಡೆದಿದ್ದು, ಗೌರಿ ಲಂಕೇಶ್ ಸಾವನ್ನು ಡಿಸಿಪಿ ಅನುಚೇತ್ ಖಚಿತ ಪಡಿಸಿದ್ದಾರೆ.
Advertisement
ಇಬ್ಬರು ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ಹತ್ಯೆ ನಡೆಸಿದ್ದಾರೆ ಎನ್ನುವ ಪ್ರಾಥಮಿಕ ಮಾಹಿತಿ ಈಗ ಲಭ್ಯವಾಗಿದೆ.
Advertisement
ಮೂರು ಸುತ್ತಿನ ಗುಂಡಿನ ದಾಳಿ ನಡೆದಿದ್ದು, ಗುಂಡಿನ ದಾಳಿಗೆ ಸ್ಥಳದಲ್ಲೇ ಕುಸಿದು ಬಿದ್ದು ಗೌರಿ ಲಂಕೇಶ್ ಸಾವನ್ನಪ್ಪಿದ್ದಾರೆ. ಗುಂಡು ಎದೆ ಮತ್ತು ಹೃದಯ ಭಾಗಕ್ಕೆ ತಗಲಿದೆ ಎನ್ನಲಾಗಿದೆ.
Advertisement
Advertisement