– 412 ಗ್ರಾಂ ಚಿನ್ನ 2.5 ಕೆಜಿ ಬೆಳ್ಳಿ ವಶ
ಚಿಕ್ಕಬಳ್ಳಾಪುರ: ಎರಡು ಮೂರು ದಿನ ಸಂಬಂಧಿಕರ ಮನೆಗೆ ಕುಟುಂಬ ಸಮೇತ ಹೋಗುವಾಗ ಮನೆಯಲ್ಲಿ ಲೈಟ್ ಹಾಕಿ ಹೋಗೋದು ಸಾಮಾನ್ಯ, ಬೆಳಕಿದ್ರೆ ಯಾರೋ ಮನೆಯಲ್ಲಿದ್ದಾರೆ. ಕಳ್ಳರು ಮನೆಗೆ ನುಗ್ಗಲ್ಲ ಎಂಬ ಗ್ಯಾರಂಟಿ! ಆದರೆ ಇಲ್ಲೊಬ್ಬ ಕಿಲಾಡಿ ಕಳ್ಳ ದಂಪತಿ ಅಂತಹ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡಿ ಪೊಲೀಸರ ಅತಿಥಿ ಆಗಿದ್ದಾರೆ.
Advertisement
Advertisement
ಬಂಧಿತ ಆರೋಪಿಗಳನ್ನು ನೂರುಲ್ಲಾ ಅಲಿಯಾಸ್ ಖಾರದಪುಡಿ ನೂರುಲ್ಲಾ, ಆತನ ಸ್ನೇಹಿತ ವಿನೋದ್ ಮಾರ್ಕಕರ್ ಹಾಗೂ ಸಾಗಾರ್ ಎಂದು ಗುರುತಿಸಲಾಗಿದೆ. ಈತ ಹೋದ ಕಡೆಯಲ್ಲೆಲ್ಲಾ ಒಂದೊಂದು ಹೆಸರು ಹೇಳಿಕೊಂಡು ಮನೆಗಳ್ಳತನ ಮಾಡೋದನ್ನ ಕಾಯಕ ಮಾಡಿಕೊಂಡಿದ್ದ. ಈತನಿಗೆ ಸ್ವತಃ ಈತನ ಹೆಂಡತಿ ಹಮೀನಾಬಿ ಹಾಗೂ ಸ್ನೇಹಿತರಾದ ವಿನೋದ್ ಮಾರ್ಕಕರ್, ಸೇರಿದಂತೆ ಸಾಗಾರ್ ಸಾಥ್ ಕೊಡುತ್ತಿದ್ದರು. ಆರೋಪಿ ಹಮೀನಾಬಿ ತಲೆ ಮರೆಸಿಕೊಂಡಿದ್ದಾಳೆ.
Advertisement
ಈ ನಾಲ್ಕು ಮಂದಿ ಜ.10 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ತ್ಯಾಗರಾಜ ಕಾಲೋನಿಯಲ್ಲಿ ಅಶ್ವತ್ಥನಾರಾಯಣಶೆಟ್ಟಿ ಎಂಬವರ ಮನೆಯಲ್ಲಿ ಕಳ್ಳತನ ಮಾಡಿದ್ದರು. ಅಶ್ವತ್ಥನಾರಾಯಣಶೆಟ್ಟಿ ಪತ್ನಿ ಸಮೇತ ಮಗನ ಮನೆಗೆ ಬೆಂಗಳೂರಿಗೆ ಹೋಗಿದ್ದರು. ಈ ವೇಳೆ ಕಳ್ಳರ ಭಯದಿಂದ ಮನೆಯಲ್ಲಿ ಒಂದು ಲೈಟ್ ಆನ್ ಮಾಡಿ ಹೋಗಿದ್ದರು. ಆದರೂ ಕೈಚಳಕ ತೋರಿದ್ದ ನೂರುಲ್ಲಾ ಹಾಗೂ ಆತನ ಗ್ಯಾಂಗ್ ಮನೆಯ ಬಿರುವಿನಲ್ಲಿದ್ದ 412 ಗ್ರಾಂ ಚಿನ್ನಾಭರಣ ಸೇರಿದಂತೆ ಎರಡೂವರೆ ಕೆಜಿ ಬೆಳ್ಳಿ ಅಭರಣಗಳು ಹಾಗೂ 1 ಲಕ್ಷ ರೂ. ನಗದನ್ನು ದೋಚಿತ್ತು.
Advertisement
ಗೌರಿಬಿದನೂರು (Gauribidanur) ಪೊಲೀಸರು ಆರೋಪಿಗಳನ್ನ ಹಿಡಿಯಲು ಹೋದಾಗ ಕಾರು ಅಪಘಾತವಾಗಿ ಗಾಯಗೊಂಡಿದ್ದರು. ಆದರೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪೊಲೀಸರು ಪಾರಾಗಿದ್ದರು. ಇದೀಗ ಪಟ್ಟು ಬಿಡದೆ ಕಳ್ಳರನ್ನ ಬಂಧಿಸಿ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ ಮನೆಯಲ್ಲಿ ಲೈಟ್ ಹಾಕಿ ಮನೆಗೆ ಬೀಗ ಹಾಕಲಾಗಿತ್ತು. ಇದ್ರಿಂದಲೇ ಮನೆಯಲ್ಲಿ ಕಳ್ಳತನ ಮಾಡಿರೋದಾಗಿ ಪೊಲೀಸರು ಬಳಿ ಕಳ್ಳರು ಬಾಯ್ಬಿಟ್ಟಿದ್ದಾರೆ.